ಮದ್ಯ, ದೂಮಪಾನದ ವ್ಯಸನಿಯಾಗಿದ್ದ ಆಮಿರ್ ಖಾನ್; ಆ ಪ್ರೀತಿ ಎಲ್ಲವನ್ನೂ ಬದಲಿಸಿತು

ಆಮಿರ್ ಖಾನ್ ಅವರು ತಮ್ಮ ಹಿಂದಿನ ಆಲ್ಕೋಹಾಲ್ ಮತ್ತು ಧೂಮಪಾನದ ವ್ಯಸನಗಳನ್ನು ಬಹಿರಂಗಪಡಿಸಿದ್ದಾರೆ. ಇದು ಅವರ ಆರೋಗ್ಯ ಮತ್ತು ವೃತ್ತಿಜೀವನದ ಮೇಲೆ ಪರಿಣಾಮ ಬೀರಿತ್ತು. ಆದರೆ ಚಲನಚಿತ್ರದ ಮೇಲಿನ ಪ್ರೀತಿಯಿಂದ ವ್ಯಸನಗಳನ್ನು ಜಯಿಸಿದರು ಎಂದು ಹೇಳಿದ್ದಾರೆ. ಈ ಬಹಿರಂಗಪಡಿಸುವಿಕೆಯ ಮೂಲಕ ಅಭಿಮಾನಿಗಳು ಇಂತಹ ಕೆಟ್ಟ ಅಭ್ಯಾಸಗಳಿಂದ ದೂರವಿರಬೇಕು ಎಂಬುದು ಅವರ ಆಶಯ.

ಮದ್ಯ, ದೂಮಪಾನದ ವ್ಯಸನಿಯಾಗಿದ್ದ ಆಮಿರ್ ಖಾನ್; ಆ ಪ್ರೀತಿ ಎಲ್ಲವನ್ನೂ ಬದಲಿಸಿತು
ಆಮಿರ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on: Dec 25, 2024 | 3:03 PM

ಸೆಲೆಬ್ರಿಟಿಗಳು ಹಲವು ವಿಚಾರಗಳನ್ನು ಮುಚ್ಚಿಡಲು ಬಯಸುತ್ತಾರೆ. ಯಾವುದೇ ಕೆಟ್ಟ ಹವ್ಯಾಸ ಇದ್ದರೂ ಅದನ್ನು ಅಡಗಿಸಿಡುವ ಪ್ರಯತ್ನ ಮಾಡುತ್ತಾರೆ. ಆದರೆ, ಆಮಿರ್ ಖಾನ್ ಅವರು ಇದಕ್ಕೆ ಭಿನ್ನ. ಅವರು ಓಪನ್ ಆಗಿ ತಮ್ಮ ಬಗ್ಗೆ ಮಾತನಾಡಿದ್ದಾರೆ. ತಮಗಿದ್ದ ಕೆಟ್ಟ ಹವ್ಯಾಸಗಳ ಕುರಿತು ಹೇಳಿಕೊಂಡಿದ್ದಾರೆ. ಈ ಕೆಟ್ಟ ಚಟಗಳಿಂದ ಅವರ ಜೀವನದ ಮೇಲೆ ಯಾವ ರೀತಿಯ ಪ್ರಭಾವ ಬೀರಿತು ಎಂಬುದನ್ನು ಅವರು ವಿವರಿಸಿದ್ದಾರೆ.

ಆಮಿರ್ ಖಾನ್ ಅವರು ಬಾಲಿವುಡ್​ನಲ್ಲಿ ಮಿಸ್ಟರ್ ಪರ್ಫೆಕ್ಟ್ ಎಂದೇ ಖ್ಯಾತಿ ಪಡೆದವರು. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ನಟನೆ ಹಾಗೂ ನಿರ್ಮಾಣದ ಮೂಲಕ ಅವರು ಭೇಷ್ ಎನಿಸಿಕೊಂಡಿದ್ದಾರೆ. ಆದರೆ, ಅಸಲಿಗೆ ಅವರ ಜೀವನ ಹಾಗಿಲ್ಲ. ಅವರು ಸಾಕಷ್ಟು ಕೆಟ್ಟ ಚಟಗಳ ದಾಸನಾಗಿದ್ದರು. ಇದನ್ನು ಅವರು ಈಗ ರಿವೀಲ್ ಮಾಡಿದ್ದಾರೆ.

‘ನಾನು ಆಲ್ಕೊಹಾಲ್​ನ ದಾಸನಾಗಿದ್ದೆ. ರಾತ್ರಿಯಿಡೀ ಕುಡಿಯುತ್ತಲೇ ಇರುತ್ತಿದ್ದೆ. ನಾನು ಪೈಪ್​ನ ಸ್ಮೋಕ್ ಮಾಡುತ್ತಿದ್ದೆ. ನನ್ನ ಆರೋಗ್ಯದ ಬಗ್ಗೆ ಸ್ವಲ್ಪವೂ ಗಮನ ಹರಿಸುತ್ತಿರಲಿಲ್ಲ. ಈ ಅಭ್ಯಾಸಗಳು ನನ್ನ ಜೀವನ ಮತ್ತು ನನ್ನ ವೃತ್ತಿಜೀವನಕ್ಕೆ ಹಾನಿ ಎಂಬ ವಿಚಾರ ನನಗೆ ಚೆನ್ನಾಗಿ ತಿಳಿದಿತ್ತು. ಆದರೆ ನಾನು ಅವುಗಳನ್ನು ಕೊನೆಗೊಳಿಸಲು ಸಾಧ್ಯವಾಗಲಿಲ್ಲ. ಕ್ರಮೇಣ, ನಾನು ಹೆಚ್ಚು ಹೆಚ್ಚು ಸಿನಿಮಾವನ್ನು ಪ್ರೀತಿಸಲು ಪ್ರಾರಂಭಿಸಿದೆ ಮತ್ತು ಇದು ನನ್ನ ಜೀವನವನ್ನು ಬದಲಾಯಿಸಿತು. ನನ್ನ ವ್ಯಸನಗಳಿಗಿಂತ ನನ್ನ ಸಿನಿಮಾ ಮೇಲಿನ ಪ್ರೀತಿ ಮೇಲುಗೈ ಸಾಧಿಸಿತು. ಅಂತಿಮವಾಗಿ ನಾನು ಅವುಗಳನ್ನು ತ್ಯಜಿಸಿದೆ’ ಎಂದು ಆಮಿರ್ ಹೇಳಿದ್ದಾರೆ.

ಹಾಗಾದರೆ ಆಮಿರ್ ಖಾನ್ ಇದನ್ನು ಹೇಳಿದ್ದು ಏಕೆ? ಅದಕ್ಕೂ ಒಂದು ಕಾರಣ ಇದೆ. ಈ ರೀತಿಯ ಕೆಟ್ಟ ಅಭ್ಯಾಸಗಳಿಗೆ ಅಭಿಮಾನಿಗಳು ಒಳಗಾಗಬಾರದು ಎಂಬುದು ಅವರ ಉದ್ದೇಶ. ಈ ಕಾರಣದಿಂದಲೇ ಆಮಿರ್ ಖಾನ್ ಅವರು ಈ ವಿಚಾರ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: ‘ಆಮಿರ್ ಖಾನ್ ಮಾತು ಕೇಳಿ ನನಗೆ ಶಾಕ್ ಆಯಿತು’: ಉಪೇಂದ್ರ

ಆಮಿರ್ ಖಾನ್ ಅವರು ಸದ್ಯ ‘ಸಿತಾರೆ ಜಮೀನ್​ಪರ್​’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಥಗ್ಸ್ ಆಫ್ ಹಿಂದೂಸ್ತಾನ್’ ಬಳಿಕ ಆಮಿರ್ ಖಾನ್ ಒಪ್ಪಿಕೊಂಡ ಚಿತ್ರ ಇದಾಗಿದೆ. ಈ ಕಾರಣಕ್ಕೂ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಆಮಿರ್ ಖಾನ್ ಅವರು ನಟನೆಯಿಂದ ಬ್ರೇಕ್ ಪಡೆದಿದ್ದರು. ಈಗ ಅವರು ಕಂಬ್ಯಾಕ್ ಮಾಡುತ್ತಿದ್ದಾರೆ. ಇತ್ತೀಚೆಗೆ ಆಮಿರ್ ಖಾನ್ ಅವರು ನಿರ್ಮಾಣದ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್