‘ಆಮಿರ್ ಖಾನ್ ಮಾತು ಕೇಳಿ ನನಗೆ ಶಾಕ್ ಆಯಿತು’: ಉಪೇಂದ್ರ
‘ಯುಐ’ ಸಿನಿಮಾದ ಟ್ರೇಲರ್ ನೋಡಿ ಆಮಿರ್ ಖಾನ್ ಅವರು ಮೆಚ್ಚುಗೆ ಸೂಚಿಸಿದ್ದರು. ಆ ಭೇಟಿ ಹೇಗೆ ನಡೆಯಿತು ಎಂದು ಉಪೇಂದ್ರ ಅವರು ವಿವರಿಸಿದ್ದಾರೆ. ‘ಒಂದೇ ಕಡೆ ನಾವು ಶೂಟಿಂಗ್ ಮಾಡುತ್ತಿದ್ದೆವು. ಆಗ ಅವರೇ ನನ್ನನ್ನು ಕರೆದು ಯುಐ ಸಿನಿಮಾದ ಟ್ರೇಲರ್ ಬಗ್ಗೆ ಮಾತನಾಡಿದರು. ನನಗೆ ತುಂಬ ಖುಷಿ ಆಯಿತು’ ಎಂದಿದ್ದಾರೆ ಉಪೇಂದ್ರ. ಸಂದರ್ಶನದ ವಿಡಿಯೋ ಇಲ್ಲಿದೆ..
ನಟ ಆಮಿರ್ ಖಾನ್ ಅವರು ಇತ್ತೀಚೆಗೆ ‘ಯುಐ’ ಸಿನಿಮಾದ ಟ್ರೇಲರ್ ನೋಡಿ ಬಹಳ ಹೊಗಳಿದ್ದರು. ‘ನಾನು ಉಪೇಂದ್ರ ಫ್ಯಾನ್’ ಎಂದು ಕೂಡ ಅವರು ಹೇಳಿದ್ದರು. ಆ ಭೇಟಿಯ ಬಗ್ಗೆ ಈಗ ಉಪೇಂದ್ರ ಅವರು ಟಿವಿ9 ಸಂದರ್ಶನದಲ್ಲಿ ಮಾತನಾಡಿದ್ದಾರೆ. ‘ನಾನು ಅವರನ್ನು ಕೇಳಿಕೊಂಡಿರಲಿಲ್ಲ. ಆಮಿರ್ ಖಾನ್ ಜೊತೆ ಇರುವ ಸಹಾಯಕರು ಕನ್ನಡಿಗರು. ಅವರು ನನ್ನ ಬಗ್ಗೆ ಆಮಿರ್ ಖಾನ್ಗೆ ಹೇಳಿರಬಹುದು. ಆಮಿರ್ ಖಾನ್ ಟೀಸರ್ ನೋಡಿ ನನ್ನನ್ನು ಕರೆದರು. 5 ನಿಮಿಷದಲ್ಲಿ ವಿಡಿಯೋ ಮಾಡಿದರು. ನಾನು ಚಿಕ್ಕ ವಯಸ್ಸಿಂದ ಅವರಿಗೆ ಫ್ಯಾನ್’ ಎಂದು ಉಪೇಂದ್ರ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos