ನಟಿಯರ ಜೊತೆ ಅನುಚಿತ ವರ್ತನೆ ಆರೋಪ: ಸ್ಪಷ್ಟನೆ ನೀಡಿದ ವರುಣ್ ಧವನ್
Varun Dhawan: ಬಾಲಿವುಡ್ ನಟ ವರುಣ್ ಧವನ್ ಹಾಸ್ಯ ಪಾತ್ರ, ಆಕ್ಷನ್ ಪಾತ್ರ ಯಾವುದಾದರೂ ಲೀಲಾಜಾಲವಾಗಿ ನಿರ್ವಹಿಸಬಲ್ಲರು. ಬಾಲಿವುಡ್ನ ಬೇಡಿಕೆಯಯಲ್ಲಿ ನಟ ವರುಣ್ ಧವನ್. ಇದೀಗ ವರುಣ್ ಧವನ್ ಮೇಲೆ ಆರೋಪವೊಂದು ಕೇಳಿ ಬಂದಿದೆ. ತಮ್ಮ ಜೊತೆ ಕೆಲಸ ಮಾಡುವ ನಟಿಯರನ್ನು ವರುಣ್ ಧವನ್ ಸತಾಯಿಸುತ್ತಾರಂತೆ. ಈ ಬಗ್ಗೆ ಅವರೇ ಮಾತನಾಡಿದ್ದಾರೆ.
ನಟ ವರುಣ್ ಧವನ್ ತಮ್ಮ ಸಹ ನಟಿಯರೊಂದಿಗೆ ಸಂವಹನ ನಡೆಸುವಾಗ ಆಗಾಗ ಮಿತಿಗಳನ್ನು ಉಲ್ಲಂಘಿಸುತ್ತಾರೆ ಎಂದು ಕೆಲವರು ದೂರಿದ್ದಾರೆ. ಈ ಹಿಂದೆ ವರುಣ್‌ನ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಲ್ಲಿ ಅವರು ನಟಿ ಕಿಯಾರಾ ಅಡ್ವಾಣಿ ಅವರ ಅನುಮತಿಯಿಲ್ಲದೆ ಕೆನ್ನೆಗೆ ಚುಂಬಿಸುತ್ತಿದ್ದರು. ಲೈವ್ ಈವೆಂಟ್‌ನಲ್ಲಿ ನಟಿ ಆಲಿಯಾ ಭಟ್ ಅವರ ಸೊಂಟವನ್ನು ಮುಟ್ಟಿದ್ದರು. ಈ ವಿಡಿಯೋಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ಬಂದಿದ್ದು, ವರುಣ್ ಅವರನ್ನು ಟೀಕಿಸಿದ್ದಾರೆ. ನಟಿಯರ ಜೊತೆ ವರುಣ್ ನಡುವಳಿಕೆ ಸರಿಯಿಲ್ಲ ಎಂದು ಹಲವರು ಹೇಳಿದ್ದರು. ಇದೀಗ ವರುಣ್ ಅವರೇ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರಿಗೆ ಈ ಪ್ರಶ್ನೆಯನ್ನು ಕೇಳಲಾಯಿತು.
ಶುಭಂಕರ್ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ವರುಣ್ ಹೇಳಿದರು, ‘ನನ್ನ ಸಹ ಕಲಾವಿದರ ನಾನು ತುಂಬಾ ಮೋಜು ಮಾಡುತ್ತೇನೆ. ಆದರೆ ಯಾರೂ ಅದರ ಬಗ್ಗೆ ತಪ್ಪಾಗಿ ಏನನ್ನೂ ಹೇಳುವುದಿಲ್ಲ’ ಎಂದು ವರುಣ್ ಧವನ್ ಹೇಳಿದರು. ಈ ವೇಳೆ ಅವರಿಗೆ ಕಿಯಾರಾ ಜೊತೆಗಿನ ಚುಂಬನದ ದೃಶ್ಯದ ಕೇಳಲಾಯಿತು. ಇದಕ್ಕೆ ಅವರು ನೇರ ಉತ್ತರ ನೀಡಿದ್ದಾರೆ.
‘ಆ ಮುತ್ತು ಕೊಡವ ಬಗ್ಗೆ ಮೊದಲೇ ಪ್ಲಾನ್ ಮಾಡಿದ್ದೆವು. ಕಿಯಾರಾ ಮತ್ತು ನಾನು ಇಬ್ಬರೂ ಆ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದೇವೆ. ನಾವು ಆ ವೀಡಿಯೊವನ್ನು ಚಿತ್ರೀಕರಿಸಿದ್ದೇವು. ಅವರು ಇದೇ ರೀತಿಯದ್ದನ್ನು ಬಯಸಿದ್ದರು. ಹಾಗಾಗಿ ನಾವಿಬ್ಬರೂ ಆಗಲೇ ನಿರ್ಧರಿಸಿದ್ದೆವು. ಕಿಯಾರಾ ತುಂಬಾ ಒಳ್ಳೆಯ ನಟಿ. ಅದಕ್ಕೇ ಆ ವಿಡಿಯೋದಲ್ಲಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾಳೆ. ಆದರೆ ಆ ಚುಂಬನದ ದೃಶ್ಯವನ್ನು ಮೊದಲೇ ಯೋಜಿಸಲಾಗಿತ್ತು’ ಎಂದಿದ್ದಾರೆ ಅವರು.
ಇದನ್ನೂ ಓದಿ:ವರುಣ್ ಧವನ್ ಜೊತೆ ಓಡಿ ಹೋಗಲು ಬಂದಿದ್ದ ಪ್ರಭಾವಿ ವ್ಯಕ್ತಿಯ ಪತ್ನಿ
‘ಜಗ್ ಜಗ್ ಜಿಯೋ’ ಚಿತ್ರದ ಪ್ರಚಾರಕ್ಕಾಗಿ ಆಯೋಜಿಸಲಾದ ಸಮಾರಂಭದಲ್ಲಿ, ವರುಣ್ ಅವರು ಕಿಯಾರಾ ಅವರ ಸೊಂಟವನ್ನು ಹಿಡಿದು ಈಜುಕೊಳಕ್ಕೆ ತಳ್ಳಲು ಪ್ರಯತ್ನಿಸಿದರು. ಆದರೆ ಅವರು ಕಿಯಾರಾನ ಕೊಳಕ್ಕೆ ತಳ್ಳುವುದಿಲ್ಲ. ಕಿಯಾರಾನ ಹೆದರಿಸಲು ಅವರು ಪ್ರಯತ್ನಿಸಿದ್ದರು. ನಂತರ ಕಿಯಾರಾ ಸಿಟ್ಟಿನಿಂದ ‘ನಿಲ್ಲಿಸಿ’ ಎಂದಿದ್ದರು. ಘಟನೆಯ ಬಗ್ಗೆ ವರುಣ್ ಹೇಳಿದ್ದು, ‘ಇದನ್ನು ಮೊದಲೇ ಪ್ಲಾನ್ ಮಾಡಿರಲಿಲ್ಲ. ನಾನು ಉದ್ದೇಶಪೂರ್ವಕವಾಗಿ ಮಾಡಿದ್ದೇನೆ. ಆದರೆ ಅದೆಲ್ಲ ತಮಾಷೆಯಾಗಿತ್ತು. ನಾನು ಅಂತಹ ಮೋಜಿನ ಸ್ವಭಾವದವನು’ ಎಂದಿದ್ದಾರೆ ಅವರು.
ಲೈವ್ ಈವೆಂಟ್‌ನಲ್ಲಿ ವರುಣ್ ಆಲಿಯಾ ಸೊಂಟವನ್ನು ಮುಟ್ಟಿದ್ದರ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ನಾನು ಅದನ್ನು ತಮಾಷೆಗಾಗಿ ಮಾಡಿದ್ದೇನೆ. ಇದನ್ನು ಫ್ಲರ್ಟಿಂಗ್ ಎಂದು ಕರೆಯಲಾಗುವುದಿಲ್ಲ. ನಾವಿಬ್ಬರು ಒಳ್ಳೆ ಫ್ರೆಂಡ್ಸ್’ ಎಂದು ವರುಣ್ ಹೇಳಿದ್ದಾರೆ. ವರುಣ್ ಮತ್ತು ಆಲಿಯಾ ‘ಸ್ಟೂಡೆಂಟ್ ಆಫ್ ಇಯರ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆ ನಂತರ ಇಬ್ಬರೂ ‘ಬದ್ರಿನಾಥ್ ಕಿ ದುಲ್ಹನಿಯಾ’, ‘ಹಂಪ್ಟಿ ಶರ್ಮಾ ಕಿ ದುಲ್ಹನಿಯಾ’, ‘ಕಳಂಕ್’ ಚಿತ್ರಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ