ಕಂಡ ಕಂಡ ಹುಡುಗಿಯರಿಗೆ ಆಕರ್ಷಿತರಾಗುತ್ತಿದ್ದ ಬೋನಿ ಕಪೂರ್; ಶ್ರೀದೇವಿ ಸಿಕ್ಕ ಬಳಿಕ ಎಲ್ಲವೂ ಬದಲಾಯ್ತು

Boney Kapoor: ಬೋನಿ ಕಪೂರ್ ಅವರು ಶ್ರೀದೇವಿ ಅವರನ್ನು ಮದುವೆಯಾಗುವ ಮೊದಲು ಅನೇಕ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಆದರೆ ಶ್ರೀದೇವಿ ಅವರನ್ನು ಭೇಟಿಯಾದ ನಂತರ ಅವರ ಜೀವನದಲ್ಲಿ ಒಂದು ದೊಡ್ಡ ಬದಲಾವಣೆ ಉಂಟಾಯಿತು. ಶ್ರೀದೇವಿ ಅವರೊಂದಿಗಿನ ಅವರ ಪ್ರೀತಿ ಅವರ ಜೀವನದ ಅತ್ಯಂತ ಮುಖ್ಯವಾದ ಅಂಶವಾಗಿತ್ತು. ಅವರ ಪ್ರೀತಿಯ ಕಥೆ ಹಾಗೂ ಶ್ರೀದೇವಿಯ ಸಾವಿನ ನಂತರದ ಬದುಕಿನ ಬಗ್ಗೆ ಈ ಲೇಖನ ತಿಳಿಸುತ್ತದೆ.

ಕಂಡ ಕಂಡ ಹುಡುಗಿಯರಿಗೆ ಆಕರ್ಷಿತರಾಗುತ್ತಿದ್ದ ಬೋನಿ ಕಪೂರ್; ಶ್ರೀದೇವಿ ಸಿಕ್ಕ ಬಳಿಕ ಎಲ್ಲವೂ ಬದಲಾಯ್ತು
Boney Kapoor
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Dec 26, 2024 | 3:34 PM

ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರು ಒಂದು ಮದುವೆ ಆದ ನಂರವೂ ಶ್ರೀದೇವಿ ಜೊತೆ ಆಕರ್ಷಿತರಾಗಿದ್ದರು. ಅವರಿಗೆ ಆಗಲೇ ಮೋನಾ ಶೌರಿ ಕಪೂರ್ ಜೊತೆ ವಿವಾಹ ಆಗಿತ್ತು. ಅವರಿಗೆ ಶ್ರೀದೇವಿ ಬಗ್ಗೆ ಸಾಕಷ್ಟು ಪ್ರೀತಿ ಮೂಡಿತ್ತು. ಈ ಪ್ರೀತಿಯನ್ನು ಅವರು ವ್ಯಕ್ತಪಡಿಸಿ ಅವರನ್ನು ಮದುವೆ ಆದರು. ಈ ಬಗ್ಗೆ ಬೋನಿ ಕಪೂರ್ ಅವರು ಮಾತನಾಡಿದ್ದಾರೆ. ಈ ಮೊದಲು ಬೇರೆ ಮಹಿಳೆಯರಿಗೆ ಆಕರ್ಷಿತರಾಗುತ್ತಿದ್ದಾಗಿ ಒಪ್ಪಿಕೊಂಡಿರೋ ಅವರು, ಶ್ರೀದೇವಿ ಸಿಕ್ಕ ಬಳಿಕ ಬದುಕು ಬದಲಾಯಿತು ಎಂದು ಹೇಳಿದ್ದಾರೆ.

ಬೋನಿ ಕಪೂರ್ ಅವರು ಶ್ರೀದೇವಿಯನ್ನು 1996ರಲ್ಲಿ ಮದುವೆ ಆದರು. ಆ ಸಂದರ್ಭದಲ್ಲಿ ಅವರಿಗೆ ಮದುವೆ ಆಗಿತ್ತು. ಅಲ್ಲದೆ ಎರಡು ಮಗು ಕೂಡ ಇತ್ತು. ‘ನನಗೆ ಶ್ರೀದೇವಿ ಮೇಲೆ ಪ್ರೀತಿ ಮೂಡಿತ್ತು. ನನಗೆ ಅವಳ ಜೊತೆ ಪ್ರೀತಿ ಇದೆ. ಸಾಯುವವರೆಗೂ ಆ ಪ್ರೀತಿ ಹಾಗೆಯೇ ಇರುತ್ತದೆ. ಅವಳ ವ್ಯಕ್ತಿತ್ವವು ಇಡೀ ಜೀವನವನ್ನು ಅವಳ ಜೊತೆ ಕಳೆಯುವಂತೆ ಮಾಡಿತು. ನಾನು ಅವಳಿಗೆ ಯಾವಾಗಲೂ ಮೋಸ ಮಾಡಿಲ್ಲ. ಅವಳು ನನಗೆ ಎಲ್ಲವೂ’ ಎಂದಿದ್ದಾರೆ ಬೋನಿ ಕಪೂರ್.

‘ನನಗೆ ಈಗಲೂ ಗೆಳೆತಿಯರಿದ್ದಾರೆ. ನಾನು ಅವಳಿಗೆ ಆಕರ್ಷಿತರಾಗಬಹುದು. ಆದರೆ, ಶ್ರೀದೇವಿ ಮೇಲೆ ಇರುವ ಪ್ರೀತಿ ಎಂದಿಗೂ ಮಾಸುವಂಥದ್ದಲ್ಲ’ ಎಂದಿದ್ದಾರೆ ಅವರು. ಈ ಮೂಲಕ ಶ್ರೀದೇವಿ ಜೊತೆಗಿನ ಪ್ರಿತಿ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ.

‘ಪ್ರಯಾಣದಲ್ಲಿ ನೀವು ನಿಮ್ಮ ಪಾರ್ಟ್ನರ್ನಿಂದ ಸಾಕಷ್ಟು ವಿಚಾರಗಳನ್ನು ಕಲಿಯುತ್ತೀರ. ಅವಳಿಗೆ ಇಷ್ಟವಾಗದೆ ಇರುವ ವಿಚಾರವನ್ನು ನೀವು ಮಾಡಲ್ಲ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುತ್ತೀರಿ. ನಾನು ಪಂಜಾಬಿ. ಶ್ರೀದೇವಿ ದಕ್ಷಿಣದವಳು. ನಾನು ಅವಳಿಗಾಗಿ ಏನು ಮಾಡಲೂ ರೆಡಿ ಇದ್ದೆ’ ಎಂದಿದ್ದಾರೆ ಅವರು.

ಇದನ್ನು ಓದಿ:ದಿನದಿನಕ್ಕೂ ಸ್ಟೈಲಿಶ್​ ಆಗುತ್ತಿರುವ ಶ್ರೀದೇವಿ ಪತಿ ಬೋನಿ ಕಪೂರ್​

ಬೋನಿ ಕಪೂರ್ ಅವರು ಶ್ರೀದೇವಿಯನ್ನು ಅತಿಯಾಗಿ ಪ್ರೀತಿಸಿದ್ದರು. ಆದರೆ, ದುಬೈನಲ್ಲಿ ಶ್ರೀದೇವಿ ನಿಧನ ಹೊಂದಿದರು. ಬಾತ್ಟಬ್ನಲ್ಲಿ ಮುಳುಗಿ ಅವರು ನಿಧನ ಹೊಂದಿದ್ದರು. ಈ ಸಾವು ಸಾಕಷ್ಟು ಶಾಕಿಂಗ್ ಎನಿಸಿತ್ತು. ಅವರ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಹೊರಹಾಕಲಾಗಿತ್ತು. 2018ರ ಫೆಬ್ರವರಿ 24ರಂದು ಈ ದುರ್ಘಟನೆ ಸಂಭವಿಸಿತ್ತು.

ಬೋನಿ ಕಪೂರ್ ಹಾಗೂ ಶ್ರೀದೇವಿನ ವಿವಾಹ ಆಗುವದಕ್ಕೂ ಮೊದಲು ಮೋನಾ ಕಪೂರ್ನ ವಿವಾಹ ಆಗಿದ್ದರು. ಆದರೆ, ವಿವಾಹ ಹೆಚ್ಚು ದಿನ ಬರಲೇ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ