AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್​ಕುಮಾರ್ ಮೊದಲ ಆಡಿಷನ್ ಹೇಗಿತ್ತು? ವಿವರಿಸಿದ್ದ ಅಣ್ಣಾವ್ರು

Rajkumar Birth Anniversary: ರಾಜ್ ಕುಮಾರ್ ಅವರ 96ನೇ ಜನ್ಮದಿನದಂದು, ಅವರ ಸಿನಿಮಾ ಜೀವನದ ಸ್ಮರಣೆಯನ್ನು ಮಾಡೋಣ. ಬೇಡರ ಕಣ್ಣಪ್ಪದಿಂದ ಆರಂಭವಾದ ಅವರ ಅದ್ಭುತ ಪ್ರಯಾಣ, ಅವರ ಅಪರೂಪದ ಸಂದರ್ಶನಗಳು ಮತ್ತು ಅವರ ಅಭಿನಯದ ಮಹತ್ವವನ್ನು ಈ ಲೇಖನ ವಿವರಿಸುತ್ತದೆ. ಪೌರಾಣಿಕ ಪಾತ್ರಗಳಿಗೆ ಅವರ ಒಲವು ಮತ್ತು ಅವರ ಸಿನಿಮಾಗಳ ಯಶಸ್ಸಿನ ರಹಸ್ಯಗಳನ್ನು ನಾವು ತಿಳಿದುಕೊಳ್ಳೋಣ.

ರಾಜ್​ಕುಮಾರ್ ಮೊದಲ ಆಡಿಷನ್ ಹೇಗಿತ್ತು? ವಿವರಿಸಿದ್ದ ಅಣ್ಣಾವ್ರು
ರಾಜ್​ಕುಮಾರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Apr 24, 2025 | 7:19 AM

ರಾಜ್​ಕುಮಾರ್ (Rajkumar) ಅವರಿಗೆ ಇಂದು (ಏಪ್ರಿಲ್ 24) ಜನ್ಮದಿನ. ಅವರು ಇಂದು ನಮ್ಮ ಜೊತೆಗೆ ಇದ್ದಿದ್ದರೆ 96ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದರು. ರಾಜ್​ಕುಮಾರ್ ಅವರು ನಿಧನ ಹೊಂದುವಾಗ ಅವರಿಗೆ 76 ವರ್ಷ ವಯಸ್ಸು. ರಾಜ್​ಕುಮಾರ್ ಅವರು ನಿಧನ ಹೊಂದಿದರೂ ಅವರ ಆದರ್ಶಗಳು ಇಂದಿಗೂ ಪಾಲಿಸ್ಪಡುತ್ತಿವೆ. ರಾಜ್​ಕುಮಾರ್ ಅವರ ಅಪರೂಪದ ಸಂದರ್ಶನಗಳು ಈಗಲೂ ಲಭ್ಯ. ಅವರು ಹೇಳಿದ ಒಂದು ಅಪರೂಪದ ವಿಚಾರ ಇದೆ.

ರಾಜ್​ಕುಮಾರ್ ನಟಿಸಿದ ಮೊದಲ ಸಿನಿಮಾ ‘ಬೇಡರ ಕಣ್ಣಪ್ಪ’. ಈ ಚಿತ್ರವು 1954ರ ಮೇ 7ರಂದು ತೆರೆಗೆ ಬಂತು. ಅಂದರೆ, ಈ ಸಿನಿಮಾ ರಿಲೀಸ್ ಆಗಿ 70 ವರ್ಷಗಳು ಕಳೆದು ಹೋಗಿವೆ. ಈ ಸಿನಿಮಾದಲ್ಲಿ ನಟಿಸೋ ಮೊದಲು ರಾಜ್​ಕುಮಾರ್ ಅವರು ‘ಗುಬ್ಬಿ ವೀರಣ್ಣ’ ನಾಟಕ ಕಂಪನಿಯಲ್ಲಿ ಬಣ್ಣ ಹಚ್ಚುತ್ತಿದ್ದರು.

ರಾಜ್​ಕುಮಾರ್ ಅವರು ಕಣ್ಣಪ್ಪನಾಗಿ ನಟಿಸಿದರು. ಈ ಸಿನಿಮಾದ ಶೂಟ್​ಗೂ ಮೊದಲು ರಾಜ್​ಕುಮಾರ್​ಗೆ ಆಡಿಷನ್ ಮಾಡಲಾಯಿತು. ಅವರು ನಟಿಸಿ ತೋರಿಸಿದ್ದರು. ನಾಟಕದಲ್ಲಿ ಪಳಗಿದ್ದರಿಂದ ರಾಜ್​ಕುಮಾರ್​ಗೆ ಇದು ಕಷ್ಟ ಎನಿಸಲೇ ಇಲ್ಲ. ಆದರೆ, ನಾಟಕದಲ್ಲಿ ಕೈಗಳನ್ನು ಬೀಸಿಕೊಂಡು ಅವರು ನಟಿಸುತ್ತಿದ್ದರು. ಆದರೆ, ಇಲ್ಲಿ ಆ ರೀತಿ ಆಗೋದಿಲ್ಲ ಎಂಬುದು ರಾಜ್​ಕುಮಾರ್ ಅವರ ಅಭಿಪ್ರಾಯ ಆಗಿತ್ತು.

ಇದನ್ನೂ ಓದಿ
Image
ಪಹಲ್ಗಾಮ್ ದಾಳಿ ಬಗ್ಗೆ ಪಾಕ್ ನಟನ ಅಭಿಪ್ರಾಯವೇನು? ದೂಷಿಸಿದ್ದು ಯಾರನ್ನು?
Image
‘ಸೀತಾ ರಾಮ’ ಧಾರಾವಾಹಿ: ಅಶೋಕ್​ಗೆ ಗೊತ್ತಾಗಿ ಹೋಯ್ತು ಸಿಹಿಯ ಆತ್ಮದ ಕಥೆ
Image
ರೋಹಿತ್ ಶೆಟ್ಟಿ-ಶಾರುಖ್ ಮಧ್ಯೆ ಯಾವುದೂ ಸರಿ ಇಲ್ಲ? ನಿರ್ದೇಶಕನ ಸ್ಪಷ್ಟನೆ
Image
ಪಾಕ್ ಟಿಕ್​ ಟಾಕರ್ ಖಾಸಗಿ ವಿಡಿಯೋ ಲೀಕ್; ಹರಿದು ಹಂಚೋಯ್ತು 

ಆಡಿಷನ್ ಕೊಟ್ಟು ಹಲವು ದಿನ ಕಳೆದರೂ ಅವರಿಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಕೊನೆಗೆ ನಿರ್ದೇಶಕ ಎಚ್​.ಎಲ್​.ಎನ್ ಸಿಂಹ ಅವರು ಪತ್ರ ಕಳುಹಿಸಿದರು. ನೀವು ಪಾತ್ರಕ್ಕೆ ಆಯ್ಕೆ ಆದಿರಿ ಎಂದು ರಾಜ್​ಕುಮಾರ್​ಗೆ ಪತ್ರ ಬಂದೇ ಬಿಡ್ತು. ಇದನ್ನು ಕೇಳಿ ರಾಜ್​ಕುಮಾರ್ ಖುಷಿ ಆದ್ರು. ಅಲ್ಲಿಂದ ಅವರ ಸಿನಿ ಪಯಣ ಶುರು ಆಯ್ತು ಎನ್ನಬಹುದು.

ಇದನ್ನೂ ಓದಿ: ರಾಜ್​ಕುಮಾರ್ ಜನ್ಮದಿನಕ್ಕೆ ಶಿವಣ್ಣನ ಹೊಸ ಸಿನಿಮಾ ಘೋಷಣೆ; ಟೈಟಲ್​ನ ಅಭಿಮಾನಿಗಳೇ ಊಹಿಸಬೇಕು

ರಾಜ್​ಕುಮಾರ್ ಎಲ್ಲ ಬಗೆಯ ಪಾತ್ರಗಳನ್ನು ಮಾಡಿದ್ದಾರೆ. ಆದರೆ, ಪೌರಾಣಿಕ/ ಭಕ್ತಿ ಪ್ರಧಾನ ಪಾತ್ರಗಳಿಗೆ ಹೆಚ್ಚು ಒಲವು ಇತ್ತು. ಅವರು ನಟಿಸಿದ ಮೊದಲ 100 ಸಿನಿಮಾಗಳ ಪೈಕಿ ಬಹುತೇಕವು ಪೌರಾಣಿಕ ಪಾತ್ರಗಳೇ ಅನ್ನೋದು ವಿಶೇಷ. ಅವರ ಅಭಿನಯಕ್ಕೆ ಮರುಳಾಗದವರೇ ಇಲ್ಲ. ರಾಜ್​ಕುಮಾರ್ ಸಿನಿಮಾ ಮಾಡಿದರೆ ಯಶಸ್ಸು ಗ್ಯಾರಂಟಿ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್