AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಿಚಾರವನ್ನು ಪಾರ್ವತಮ್ಮನಿಂದ ಮುಚ್ಚೇ ಇಟ್ಟಿದ್ದರು ರಾಜ್​ಕುಮಾರ್

ರಾಜ್​ಕುಮಾರ್ ಅವರ ಜನ್ಮದಿನದಂದು, ಅವರ ಮತ್ತು ಮುಖ್ಯಮಂತ್ರಿ ಚಂದ್ರು ಅವರ ನಿಕಟ ಸ್ನೇಹದ ಅಪರಿಚಿತ ಅಂಶಗಳನ್ನು ಬಹಿರಂಗಪಡಿಸಲಾಗಿದೆ. ಬಿಡದಿಯಲ್ಲಿನ ಚಿತ್ರೀಕರಣದ ಸಮಯದಲ್ಲಿ ಕೆಲವು ವಿಚಾರಗಳು ನಡೆಯುತ್ತಿದ್ದವು. ಅದನ್ನು ಪಾರ್ವತಮ್ಮ ಅವರಿಂದ ಈ ವಿಷಯವನ್ನು ಮರೆಮಾಡಿದ್ದರು. ಅದೇನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಈ ವಿಚಾರವನ್ನು ಪಾರ್ವತಮ್ಮನಿಂದ ಮುಚ್ಚೇ ಇಟ್ಟಿದ್ದರು ರಾಜ್​ಕುಮಾರ್
ರಾಜ್​ಕುಮಾರ್-ಪಾರ್ವತಮ್ಮ
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 24, 2025 | 9:08 AM

Share

ರಾಜ್​ಕುಮಾರ್ (Rajkumar) ಅವರಿಗೆ ಇಂದು (ಏಪ್ರಿಲ್ 24) ಜನ್ಮದಿನ. ಇದು ಅಭಿಮಾನಿಗಳ ಪಾಲಿಗೆ ವಿಶೇಷ ದಿನ ಎಂದೇ ಹೇಳಬಹುದು. ಅವರನ್ನು ಆರಾಧಿಸುವವರು ಈ ದಿನವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ. ಸಾಮಾಜಿಕ ಕೆಲಸಗಳು ನಡೆಯುತ್ತಿವೆ. ರಾಜ್​ಕುಮಾರ್ ಅವರನ್ನು ಕಂಡರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ರಾಜ್​ಕುಮಾರ್ ಅವರಿಗೂ ಅದೇ ರೀತಿ. ಇನ್ನು ಕುಟುಂಬ ಎನ್ನುವ ವಿಚಾರಕ್ಕೆ ಬಂದರೆ ರಾಜ್​ಕುಮಾರ್ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಿದ್ದರು. ಪಾರ್ವತಮ್ಮ ಅವರ ಬಳಿ ರಾಜ್​ಕುಮಾರ್ ಏನನ್ನೂ ಮುಚ್ಚಿ ಇಡುತ್ತಲೇ ಇರಲಿಲ್ಲ. ಆದರೆ, ಒಂದು ವಿಚಾರವನ್ನು ಅವರು ಪಾರ್ವತಮ್ಮ ಅವರಿಂದ ಮುಚ್ಚಿಟ್ಟಿದ್ದರು.

ಮುಖ್ಯಮಂತ್ರಿ ಚಂದ್ರು ಹಾಗೂ ರಾಜ್​ಕುಮಾರ್ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಕಾರಣಕ್ಕೆ ಇಬ್ಬರ ಮಧ್ಯೆ ಒಳ್ಳೆಯ ಒಡನಾಟ ಇದೆ. ಈ ಒಡನಾಟದ ಬಗ್ಗೆ ಅವರು ‘ಕಲಾ ಮಾಧ್ಯಮ ಯೂಟ್ಯೂಬ್ ಚಾನೆಲ್’ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದರು. ಪಾರ್ವತಮ್ಮ ಅವರಿಂದ ಮುಚ್ಚಿಟ್ಟ ವಿಚಾರ ಏನು ಎಂಬುದು ಕೂಡ ಇಲ್ಲಿ ರಿವೀಲ್ ಆಗಿತ್ತು.

ರಾಜ್​ಕುಮಾರ್ ಅವರಿಗೆ ತಿಂಡಿ ಬಗ್ಗೆ ಸಾಕಷ್ಟು ಪ್ರೀತಿ. ಒಮ್ಮೆ ಬಿಡದಿಯಲ್ಲಿ ಶೂಟ್ ಇತ್ತು. ಮುಖ್ಯಮಂತ್ರಿ ಚಂದ್ರು ಜೊತೆ ಸೇರಿ ರಾಜ್​ಕುಮಾರ್ ಶೂಟಿಂಗ್ ಸ್ಥಳಕ್ಕೆ ಹೊರಟರು. ಈ ವೇಳೆ ಬಿಡದಿ ಬಳಿ ಇಡ್ಲಿ, ಚಿತ್ರಾನ್ನ, ವಡೆ ತೆಗೆದುಕೊಂಡು ಪಾರ್ಸಲ್ ಮಾಡಿಕೊಂಡು ತಿಂದರು. ಆ ಬಳಿಕ ನೇರವಾಗಿ ಶೂಟಿಂಗ್ ಸೆಟ್​ಗೆ ಹೋದರು.

ಇದನ್ನೂ ಓದಿ
Image
ಮಂತ್ರಾಲಯದ ಗರ್ಭಗುಡಿಯಲ್ಲಿ ಮಲಗಿದ್ದ ರಾಜ್​ಕುಮಾರ್; ಆ ಬಳಿಕ ನಡೆದಿದ್ದು ಏನು
Image
ರಾಜ್​ಕುಮಾರ್ ಮೊದಲ ಆಡಿಷನ್ ಹೇಗಿತ್ತು? ವಿವರಿಸಿದ್ದ ಅಣ್ಣಾವ್ರು
Image
ಪಹಲ್ಗಾಮ್ ದಾಳಿ ಬಗ್ಗೆ ಪಾಕ್ ನಟನ ಅಭಿಪ್ರಾಯವೇನು? ದೂಷಿಸಿದ್ದು ಯಾರನ್ನು?
Image
ರಾಜ್​ಕುಮಾರ್ ಜನ್ಮದಿನಕ್ಕೆ ಶಿವಣ್ಣನ ಹೊಸ ಸಿನಿಮಾ ಘೋಷಣೆ; ಟೈಟಲ್ ಏನು?

ಇದನ್ನೂ ಓದಿ: ಮಂತ್ರಾಲಯದ ಗರ್ಭಗುಡಿಯಲ್ಲಿ ಮಲಗಿದ್ದ ರಾಜ್​ಕುಮಾರ್; ಆ ಬಳಿಕ ನಡೆದಿದ್ದು ಏನು?

ರಾಜ್​ಕುಮಾರ್ ಹೊರಟಿದ್ದ ಸಿನಿಮಾದ ಶೂಟ್​ಗೆ ಪಾರ್ವತಮ್ಮ ಅವರದ್ದೇ ಬಂಡವಾಳ ಇತ್ತು. ಹೀಗಾಗಿ, ತಿಂಡಿ ವ್ಯವಸ್ಥೆಯನ್ನು ಅವರೇ ಮಾಡಿಸಿದ್ದರು. ಈಗ ಹೊರಗೆ ತಿಂದು ಬಂದರೆ ಪಾರ್ವತಮ್ಮ ಬೈಯ್ಯುತ್ತಾರೆ ಎಂಬುದು ಅಣ್ಣಾವ್ರಿಗೆ ತಿಳಿದಿತ್ತೆನ್ನಿ. ‘ಸೆಟ್​ನಲ್ಲಿ ಊಟ ಇದ್ದರೂ ಹೊರೆ ತಿಂದು ಬರೋದೇಕೆ’ ಎಂದು ಅವರು ಪ್ರಶ್ನೆ ಮಾಡುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ರಾಜ್​ಕುಮಾರ್ ಅವರು ಈ ವಿಚಾರವನ್ನು ಎಲ್ಲಿಯೂ ಹೇಳುತ್ತಿರಲಿಲ್ಲ. ಮುಖ್ಯಮಂತ್ರಿ ಚಂದ್ರು ಹಾಗೂ ಕಾರು ಚಾಲಕನಿಗೂ ಈ ಬಗ್ಗೆ ಸ್ಟ್ರಿಕ್ಟ್ ಆಗಿ ರಾಜ್​ಕುಮಾರ್ ಅವರು ಹೇಳಿರುತ್ತಿದ್ದರು. ಸೆಟ್​ಗೆ ಬಂದ ಬಳಿಕ ಸ್ವಲ್ಪ ತಿಂಡಿ ತಿನ್ನುತ್ತಿದ್ದ ಅವರು, ಅಡುಗೆಯವರನ್ನು ಹೊಗಳುತ್ತಿದ್ದರು. ಬಟ್ಟಲಿಗೆ ಹಾಕಿಕೊಂಡು ಹೋದ ಬಳಿಕ ಅವರು 15 ನಿಮಿಷ ಬರುತ್ತಿರಲಿಲ್ಲ. ಬೇಗ ಬಂದರೆ ಹೆಚ್ಚು ತಿಂದಿಲ್ಲ ಅನ್ನೋದು ಗೊತ್ತಾಗುತ್ತಿತ್ತು ಎಂಬುದು ರಾಜ್​ಕುಮಾರ್ ಅಭಿಪ್ರಾಯ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ