ಮಂತ್ರಾಲಯದ ಗರ್ಭಗುಡಿಯಲ್ಲಿ ಮಲಗಿದ್ದ ರಾಜ್ಕುಮಾರ್; ಆ ಬಳಿಕ ನಡೆದಿದ್ದು ಏನು?
ರಾಜ್ ಕುಮಾರ್ ಅವರು ತಮ್ಮ ಭಕ್ತಿಯಿಂದ ಪ್ರಸಿದ್ಧರಾಗಿದ್ದರು. ‘ಮಂತ್ರಾಲಯ ಮಹಾತ್ಮೆ’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಅವರು ಮಂತ್ರಾಲಯದ ಗರ್ಭಗುಡಿಯಲ್ಲಿ ರಾತ್ರಿ ಕಳೆದರು ಎಂಬುದು ವಿಶೇಷ. ಈ ಚಿತ್ರವು ಅವರ ನೆಚ್ಚಿನ ಚಿತ್ರವಾಗಿತ್ತು ಮತ್ತು ದೊರೆ ಭಗವಾನ್ ಅವರ ಸಹಾಯದಿಂದ ನಿರ್ಮಾಣಗೊಂಡಿತು .

ರಾಜ್ಕುಮಾರ್ (Rajkumar) ಅವರಿಗೆ ಇಂದು (ಏಪ್ರಿಲ್ 23) ಜನ್ಮದಿನ. ಅವರು ಹುಟ್ಟಿದ್ದು ಹಾಗೂ ನಿಧನರಾಗಿದ್ದು ಒಂದೇ ತಿಂಗಳಲ್ಲಿ. 1929ರ ಏಪ್ರಿಲ್ 24ರಂದು ರಾಜ್ಕುಮಾರ್ ಅವರು ಸಿಂಗನಲ್ಲೂರು ಪುಟ್ಟಸ್ವಾಮಿ ಮುತ್ತುರಾಜ್ ಆಗಿ ಜನಿಸಿದರು. ದೊಡ್ಡ ಗಾಜನೂರು ಅವರು ಜನಿಸಿದ ಸ್ಥಳ. ರಾಜ್ಕುಮಾರ್ ಅವರು ನಟಿಸಿದ ಸಿನಿಮಾ ಬಗ್ಗೆ ಅನೇಕರಿಗೆ ಹೆಮ್ಮೆ ಇದೆ. ಏಕೆಂದರೆ ಅವರ ಪ್ರತಿ ಚಿತ್ರಗಳಲ್ಲೂ ಒಂದು ಸಂದೇಶ ಇರುತ್ತಿತ್ತು. ಪ್ರತಿ ಸಿನಿಮಾಗಳ ಹಿಂದೆ ಒಂದು ಅಚ್ಚರಿಯ ಕಥೆ ಕೂಡ ಇರುತ್ತಿತ್ತು.
ರಾಜ್ಕುಮಾರ್ ಅವರು ಪೌರಾಣಿಕ ಪಾತ್ರಗಳ ಮೂಲಕ ಗಮನ ಸೆಳೆದವರು. ಈ ಪಾತ್ರಗಳಲ್ಲಿ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ರಾಜ್ಕುಮಾರ್ ಅವರನ್ನು ಜನರು ಹೆಚ್ಚು ಇಷ್ಟಪಟ್ಟಿದ್ದು ಇದೇ ಕಾರಣಕ್ಕೆ ಎಂದೇ ಹೇಳಬಹುದು. 1966ರಲ್ಲಿ ರಿಲೀಸ್ ಆದ ‘ಮಂತ್ರಾಲಯ ಮಹಾತ್ಮೆ’ ಅವರ ವಿಶೇಷ ಚಿತ್ರಗಳಲ್ಲಿ ಒಂದು.
‘ಮಂತ್ರಾಲಯ ಮಹಾತ್ಮೆ’ ಸಿನಿಮಾಗೆ ಟಿವಿ ಸಿಂಗ್ ಠಾಕೂರ್ ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ರಾಜ್ಕುಮಾರ್ ಅವರು ರಾಘವೇಂದ್ರ ಸ್ವಾಮಿ ಪಾತ್ರದಲ್ಲಿ ನಟಿಸಿದ್ದರು. ಇದು ಅವರ ಫೇವರಿಟ್ ಚಿತ್ರ. ಈ ಸಿನಿಮಾನ ಮಾತ್ರ ರಾಜ್ಕುಮಾರ್ ಅವರು ನೋಡಿ ಎಂದು ಅಭಿಮಾನಿಗಳ ಬಳಿ ಕೋರುತ್ತಿದ್ದರಂತೆ. ಈ ಸಿನಿಮಾ ಅವರಿಗೆ ಅಷ್ಟು ಹತ್ತಿರ ಆಗಿತ್ತು ಎಂದೇ ಹೇಳಬಹುದು.
ರಾಜ್ಕುಮಾರ್ ಒಮ್ಮೆ ಮಂತ್ರಾಲಯಕ್ಕೆ ತೆರಳಿದ್ದರು. ಅಲ್ಲಿ ಅವರು ರಾತ್ರಿ ಮಲಗುತ್ತೇನೆ ಎನ್ನುವ ಕೋರಿಕೆ ಇಟ್ಟರು. ಗರ್ಭಗುಡಿಯಲ್ಲಿ ಮಲಗಲು ಅವಕಾಶ ನೀಡಲಾಯಿತು. ಮುಂಜಾನೆ ಅವರು ಎದ್ದು ನೇರವಾಗಿ ಮನೆಗೆ ಬಂದರು. ದೊರೆ ಭಗವಾನ್ ಬಳಿ ಬಂದ ರಾಜ್ಕುಮಾರ್, ನಾನು ರಾಘವೇಂದ್ರ ಸ್ವಾಮಿಗಳ ಬಗ್ಗೆ ಸಿನಿಮಾ ಮಾಡ್ತೀನಿ, ನೀವು ಮಾಡಿ ಎಂದು ಕೇಳಿದರು. ಆ ಬಳಿಕ ಸಿನಿಮಾ ಆಯಿತು.
ಇದನ್ನೂ ಓದಿ: ರಾಜ್ಕುಮಾರ್ ಮೊದಲ ಆಡಿಷನ್ ಹೇಗಿತ್ತು? ವಿವರಿಸಿದ್ದ ಅಣ್ಣಾವ್ರು
ರಾಜ್ಕುಮಾರ್ ಅವರು ತುಂಬಾನೇ ಶ್ರದ್ಧೆ ಹಾಗೂ ಭಕ್ತಿಯಿಂದ ಆ ಚಿತ್ರ ಮಾಡಿದರು ಎಂದೇ ಹೇಳಬಹುದು. ದೊರೈ-ಭಗವಾನ್ ಈ ಸಿನಿಮಾದ ನಿರ್ಮಾಣದಲ್ಲಿ ಹಾಗೂ ನಿರ್ದೇಶನದಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದರು. ಇವರ ಮೇಲುಸ್ತುವಾರಿಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಈ ಸಿನಿಮಾ ರಿಲೀಸ್ ಆಗಿ 70 ವರ್ಷಗಳು ಕಳೆದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:30 am, Thu, 24 April 25