‘ಸೀತಾ ರಾಮ’ ಧಾರಾವಾಹಿ: ಅಶೋಕ್ಗೆ ಗೊತ್ತಾಗಿ ಹೋಯ್ತು ಸಿಹಿಯ ಆತ್ಮದ ಕಥೆ; ಮುಂದೇನು?
ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಆತ್ಮದ ರಹಸ್ಯ ಅಶೋಕ್ಗೆ ಗೊತ್ತಾಗಿದೆ. ಸಿಹಿಯ ಅಸ್ತಿಯನ್ನು ಹಿಡಿದು ಮನೆಗೆ ಹೋಗುವಾಗ ಆಕೆಯ ಆತ್ಮ ಅಶೋಕ್ಗೆ ಕಾಣಿಸಿಕೊಳ್ಳುತ್ತದೆ. ಇದರಿಂದ ಆತನಿಗೆ ಆಘಾತವಾಗುತ್ತದೆ. ಭಾರ್ಗವಿ ಸೀತಾಳನ್ನು ಕೆಣಕಿ ಸಿಹಿಯ ಸಾವಿನ ನೆನಪು ಹುಟ್ಟಿಸಲು ಯತ್ನಿಸುತ್ತಾಳೆ. ಈ ಘಟನೆಗಳಿಂದ ಧಾರಾವಾಹಿಯಲ್ಲಿ ಹೊಸ ತಿರುವುಗಳು ಉಂಟಾಗಲಿವೆ ಎಂದು ನಿರೀಕ್ಷಿಸಲಾಗಿದೆ.

‘ಸೀತಾ ರಾಮ’ (Seetha Rama Serial) ಧಾರಾವಾಹಿಯಲ್ಲಿ ಸಿಹಿಯ ಆತ್ಮದ ಕಥೆ ಸುಬ್ಬಿಯನ್ನು ಬಿಟ್ಟು ಮತ್ಯಾರಿಗೂ ತಿಳಿದೇ ಇಲ್ಲ. ಇದಕ್ಕೆ ಕಾರಣವಾಗಿದ್ದು ಅವಳು ಯಾರಿಗೂ ಕಾಣುವುದಿಲ್ಲ, ಸುಬ್ಬಿಯನ್ನು ಹೊರತುಪಡಿಸಿ. ಸುಬ್ಬಿ ಕೂಡ ಈ ವಿಚಾರವನ್ನು ಯಾರೊಂದಿಗೂ ಹೇಳಿಕೊಂಡಿಲ್ಲ. ಈ ಬಗ್ಗೆ ಈಗ ಟ್ವಿಸ್ಟ್ ನೀಡಲಾಗಿದೆ. ಅಶೋಕ್ಗೆ ಸಿಹಿಯ ಆತ್ಮದ ವಿಚಾರ ತಿಳಿದು ಹೋಗಿದೆ. ಆತ್ಮಕ್ಕೆ ಮುಕ್ತಿ ನೀಡಲು ಹೋದ ಅಶೋಕನು ಬೆವೆತು ಹೋಗಿದ್ದಾನೆ. ‘ಸೀತಾ ರಾಮ’ ಹೊಸ ಟ್ವಿಸ್ಟ್ಗಳಿಗೆ ಕಾರಣ ಆಗಬಹುದು ಎಂದು ನಿರೀಕ್ಷಿಸಲಾಗಿದೆ.
ಸಿಹಿಯ ಅಸ್ತಿಯು ಸುಬ್ಬಿಯ ಮನೆಯಲ್ಲಿ ಸಿಕ್ಕಿದೆ. ಇದನ್ನು ತೆಗೆದುಕೊಂಡಿದ್ದಾನೆ ಅಶೋಕ. ಆಕೆಗೆ ಮುಕ್ತಿ ಸಿಗಲೇ ಇಲ್ಲ ಎಂಬುದು ಅಶೋಕನಿಗೆ ಬಲವಾಗಿ ಅನ್ನಿಸುತ್ತಲೇ ಇತ್ತು. ಹೀಗಾಗಿ, ಇದನ್ನು ಪವಿತ್ರ ಸ್ಥಳದ ನದಿಯಲ್ಲಿ ಬಿಡಲು ಆತನು ಆಲೋಚಿಸಿದನು. ಆದರೆ, ಏನೇ ಮಾಡಿದರೂ ಅಸ್ತಿ ಬಿಡಲು ಹೋಗಲು ಸಾಧ್ಯವಾಗಲೇ ಇಲ್ಲ. ಡೇಜಾವೂ ಸ್ಥಿತಿ ಅಶೋಕನದ್ದು. ಹೋದ ಸ್ಥಳದಲ್ಲೇ ಹೋಗುತ್ತಿದ್ದಾನೆ.
ಹೀಗೇಕೆ ಎನ್ನುವ ಪ್ರಶ್ನೆ ಆತನನ್ನು ಕಾಡಿತು. ಕೊನೆಗೆ ಸಿಹಿಯ ಅಸ್ತಿಯನ್ನು ಹಿಡಿದು ಮನೆಗೆ ಹೋಗಬೇಕು, ರಾಮನ ಜೊತೆ ಮತ್ತೆ ಬರಬೇಕು ಎನ್ನುವ ನಿರ್ಧಾರಕ್ಕೆ ಬಂದನು. ಆಗ ಸಿಹಿಯು ‘ನಾನು ಸಿಹಿ’ ಎಂದು ಬರೆಯುವ ಮೂಲಕ ಅಶೋಕನಿಗೆ ಎಚ್ಚರಿಸಿದ್ದಾಳೆ. ಈ ಮೂಲಕ ಸಿಹಿಯ ಆತ್ಮ ಇರೋದು ಆತನಿಗೆ ಗೊತ್ತಾಗಿದೆ.
View this post on Instagram
ಇನ್ನು, ಸೀತಾಳಿಗೆ ಕೆಟ್ಟದನ್ನು ಬಯಸುತ್ತಿರುವ ಭಾರ್ಗವಿ ಸಿಹಿ ಸತ್ತ ವಿಚಾರವನ್ನು ನೆನಪಿಸಲು ಪ್ರಯತ್ನಿಸಿದ್ದಾಳೆ. ಈ ಬಗ್ಗೆ ಆಕೆಗೆ ಪದೇ ಪದೇ ಕೆಣಕುತ್ತಿದ್ದಾಳೆ. ಸಿಹಿ ಸತ್ತ ದಿನ ಏನಾಗಿತ್ತು ಎಂಬ ನೆನಪನ್ನು ಸೀತಾಳಿಗೆ ತರುವ ಪ್ರಯತ್ನವನ್ನು ಭಾರ್ಗವಿ ಮಾಡೇಬಿಟ್ಟಿದ್ದಾಳೆ. ಆಗ ಸೀತಾ ತಲೆತಿರುಗಿ ಬಿದ್ದಳು. ಭಾರ್ಗವಿಯ ಈ ರೂಪವನ್ನು ಕಂಡು ರಾಮ್ಗೆ ಸಿಟ್ಟು ಬಂದಿದೆ. ಆತ ಕೂಗಾಡಿದ್ದಾನೆ. ಅಲ್ಲದೆ, ದೊಡ್ಡ ಎಚ್ಚರಿಕೆಯನ್ನು ಕೂಡ ನೀಡಿದ್ದಾನೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಟ್ವಿಸ್ಟ್ಗಳು ಎದುರಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ‘ಸೀತಾ ರಾಮ’ ಧಾರಾವಾಹಿಯಲ್ಲಿ ದೊಡ್ಡ ತಿರುವು; ಮುಚ್ಚಿಟ್ಟ ಸತ್ಯ ಕೊನೆಗೂ ಗೊತ್ತಾಯ್ತು
ಸಿಹಿ ಆತ್ಮ ಇರೋ ವಿಚಾರ ಅಶೋಕ್ಗೆ ಗೊತ್ತಾಗಿದ್ದು, ಮುಂದೆ ಅದರಿಂದ ಸಹಾಯ ಆಗುವ ಸಾಧ್ಯತೆ ಇದೆ. ಇವರು ಒಟ್ಟಾಗಿ ಸೇರಿ ಅಂದು ಏನು ನಡೆಯಿತು ಎಂಬುದನ್ನು ವಿವರಿಸೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.