ಪಹಲ್ಗಾಮ್ ದಾಳಿ ಬಗ್ಗೆ ಪಾಕ್ ನಟನ ಅಭಿಪ್ರಾಯವೇನು? ದೂಷಿಸಿದ್ದು ಯಾರನ್ನು?
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯಾನಕ ದಾಳಿಯನ್ನು ಪಾಕಿಸ್ತಾನಿ ನಟ ಫವಾದ್ ಖಾನ್ ಖಂಡಿಸಿದ್ದಾರೆ. ಆದರೆ,ಅವರ ನಟನೆಯ 'ಅಬೀರ್ ಗುಲಾಲ್' ಚಿತ್ರಕ್ಕೆ ನಿಷೇಧ ವಿಧಿಸಬೇಕೆಂಬ ಒತ್ತಾಯಗಳು ಕೇಳಿಬಂದಿವೆ. ಈ ಕಾರಣಕ್ಕೆ ಅವರು ಪಹಲ್ಗಾಮ್ ದಾಳಿಯನ್ನು ಖಂಡಿಸಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ (Pahalgam Attack) ಮೇಲೆ ನಡೆದ ಭೀಕರ ದಾಳಿಯಲ್ಲಿ 28 ಪ್ರವಾಸಿಗರು ಮೃತಪಟ್ಟಿದ್ದಾರೆ. ಇದನ್ನು ಅನೇಕರು ತಪ್ಪು ಎಂದಿದ್ದಾರೆ. ಭಾರತದ ಕಲಾವಿದರು ಇದನ್ನು ಖಂಡಿಸಿದ್ದು, ಮಾನವೀಯತೆ ಮುಖ್ಯ ಎಂದಿದ್ದಾರೆ. ಈ ಮಧ್ಯೆ ಪಾಕ್ ಹೀರೋ ಕೂಡ ಈ ದಾಳಿಯನ್ನು ಖಂಡಿಸಿದ್ದಾರೆ. ಅಮಾಯಕರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಈ ಪೋಸ್ಟ್ ಸದ್ಯ ವೈರಲ್ ಆಗುತ್ತಿದೆ. ಈ ರೀತಿ ಪೋಸ್ಟ್ ಹಾಕುವುದರ ಹಿಂದೆ ಅವರ ಸ್ವಾರ್ಥ ಇದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಪಾಕ್ ಹೀರೋ ಫವಾದ್ ಖಾನ್ ಅವರು ಈ ದಾಳಿಯ ಬಗ್ಗೆ ಪೋಸ್ಟ್ ಮಾಡಿದ್ದಾರೆ. ‘ಪಹಲ್ಗಾಮ್‌ನಲ್ಲಿ ನಡೆದ ಘೋರ ದಾಳಿಯ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಈ ಭಯಾನಕ ಘಟನೆಯ ಸಂತ್ರಸ್ತರಿಗಾಗಿ ಪ್ರಾರ್ಥಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬಗಳಿಗೆ ಶಕ್ತಿ ಸಿಗಲಿ ಮತ್ತು ನೋವು ಕಡಿಮೆ ಆಗಲಿ ಎಂದು ನಾವು ಪ್ರಾರ್ಥಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.
ಪಹಲ್ಗಾಮ್ ದಾಳಿ ಹಿಂದೆ ಪಾಕಿಸ್ತಾನದವರು ಇದ್ದಾರೆ ಎಂಬುದು ಕಟು ಸತ್ಯ. ಆದರೆ, ಇದನ್ನು ಪಾಕ್ ಒಪ್ಪಿಕೊಳ್ಳುತ್ತಿಲ್ಲ. ಈ ದಾಳಿಯನ್ನು ಬಾಯ್ಮಾತಿಗೆ ಖಂಡಿಸುತ್ತಿದೆ. ಫವಾದ್ ಖಾನ್ ಕೂಡ ಸಂತಾಪ ಸೂಚಿಸಿದ್ದಾರೆಯೇ ಹೊರತು ಎಲ್ಲಿಯೂ ಅವರು ದಾಳಿಗೆ ಕಾರಣರಾದವರ ಬಗ್ಗೆ ಮಾತನಾಡಿಲ್ಲ.
ಫವಾದ್ ಖಾನ್ ಅವರು ಈ ರೀತಿ ಹೇಳಿಕೆ ನೀಡಲು ಒಂದು ಕಾರಣ ಇದೆ. ಅವರು ನಟಿಸಿರುವ ‘ಅಬೀರ್ ಗುಲಾಲ್’ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ಚಿತ್ರದಲ್ಲಿ ವಾಣಿ ಕಪೂರ್ ನಟಿಸಿದ್ದಾರೆ. ಫವಾದ್ ಖಾನ್ ಅವರು ಈ ರೀತಿಯಲ್ಲಿ ಪೋಸ್ಟ್ ಮಾಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸೋ ಪ್ರಯತ್ನದಲ್ಲಿ ಇದ್ದಾರೆ. ಆದರೆ, ಚಿತ್ರದ ಮೇಲೆ ಬ್ಯಾನ್ ಬಿಸಿ ತಟ್ಟೋ ಸಾಧ್ಯತೆ ಇದೆ.
ಇದನ್ನೂ ಓದಿ: ಪಾಕ್ ನಟನ ಜತೆ ಭಾರತದ ಸಿನಿಮಾ; ಉಗ್ರರ ದಾಳಿ ನಂತರ ಬ್ಯಾನ್ಗೆ ಒತ್ತಾಯ
ವಾಣಿ ಕಪೂರ್ ಕೂಡ ಟೀಕೆಗೆ ಒಳಗಾಗಿದ್ದಾರೆ. ‘ಅಬೀರ್ ಗುಲಾಲ್’ ಚಿತ್ರದ ಪ್ರಚಾರ ಕಾರ್ಯವನ್ನು ವಾಣಿ ಮುಂದುವರಿಸಿದ್ದಾರೆ. ಇದರಿಂದ ಅವರು ಟೀಕೆ ಎದುರಿಸಬೇಕಾಗಿದೆ. ‘ನೀವು ಭಾರತೀಯರೇ ಆದರೆ ಸಿನಿಮಾ ರಿಲೀಸ್ ಮಾಡಲು ಅವಕಾಶ ನೀಡಬೇಡಿ’ ಎನ್ನುವ ಆಗ್ರಹ ಕೇಳಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.