ಗರ್ಭಿಣಿ ಪತ್ನಿಯ ಫೋಟೋ ತೆಗೆಯಲು ಮುಗಿಬಿದ್ದ ಜನರ ಮೇಲೆ ಗರಂ ಆದ ಸ್ಟಾರ್ ನಟ
‘ಟಾಕ್ಸಿಕ್’ ಸಿನಿಮಾದ ನಟಿ ಕಿಯಾರಾ ಅಡ್ವಾಣಿ ಅವರು ಪ್ರೆಗ್ನೆಂಟ್ ಆಗಿದ್ದು, ಪತಿ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಅವರ ಫೋಟೋ ತೆಗೆಯಲು ಪಾಪರಾಜಿಗಳು ಮುಗಿಬಿದ್ದಿದ್ದಾರೆ. ಇದರಿಂದ ಸಿದ್ದಾರ್ಥ್ ಅವರಿಗೆ ಕೋಪ ಬಂದಿದೆ. ಮಿತಿ ಮೀರಿ ವರ್ತಿಸಲು ಬಂದ ಪಾಪರಾಜಿಗಳಿಗೆ ಅವರು ಬೈಯ್ದಿದ್ದಾರೆ. ವೈರಲ್ ಆಗಿರುವ ವಿಡಿಯೋ ನೋಡಿ ಜನರು ಹಲವು ರೀತಿ ಕಮೆಂಟ್ ಮಾಡಿದ್ದಾರೆ.

ಬಾಲಿವುಡ್ನ ಸ್ಟಾರ್ ಕಪಲ್ ಆದಂತಹ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ (Kiara Advani) ಅವರು ಶೀಘ್ರದಲ್ಲೇ ತಂದೆ-ತಾಯಿ ಆಗಲಿದ್ದಾರೆ. ಇತ್ತೀಚೆಗೆ ಅವರು ಗುಡ್ ನ್ಯೂಸ್ ನೀಡಿದರು. ಕಿಯಾರಾ ಅಡ್ವಾಣಿ ಅವರು ಪ್ರೆಗ್ನೆಂಟ್ (Pregnant) ಆಗಿದ್ದು, ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿದ್ದಾರೆ. ಈ ನಡುವೆ ಅವರು ಆಸ್ಪತ್ರೆಗೆ ಹೋಗಿ ಬರುತ್ತಿದ್ದಾರೆ. ಆಸ್ಪತ್ರೆಗೆ ಬಂದ ಕಿಯಾರಾ ಅಡ್ವಾಣಿ ಅವರ ಫೋಟೋ ತೆಗೆಯಲು ಜನರು ಮುಗಿಬಿದ್ದಿದ್ದಾರೆ. ಇದರಿಂದ ಸಿದ್ದಾರ್ಥ್ ಮಲ್ಹೋತ್ರಾ (Sidharth Malhotra) ಅವರಿಗೆ ವಿಪರೀತ ಕೋಪ ಬಂದಿದೆ. ಪಾಪರಾಜಿಗಳ ಮೇಲೆ ಅವರು ಗರಂ ಆಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಸಾಮಾನ್ಯವಾಗಿ ಸಿದ್ದಾರ್ಥ್ ಮಲ್ಹೋತ್ರಾ ಅವರು ಕೂಲ್ ಆಗಿರುತ್ತಾರೆ. ಅವರು ಸಿಟ್ಟಾಗಿ ಗದರುವುದು ಕಡಿಮೆ. ಆದರೆ ಈಗ ಗರ್ಭಿಣಿ ಪತ್ನಿಯ ವಿಚಾರದಲ್ಲಿ ಅವರು ಗರಂ ಆಗಿದ್ದಾರೆ. ರೆಗ್ಯುಲರ್ ಚೆಕಪ್ ಸಲುವಾಗಿ ಆಸ್ಪತ್ರೆಗೆ ಬಂದು ವಾಪಸ್ ತೆರಳುವಾಗ ಕಿಯಾರಾ ಅಡ್ವಾಣಿ ಅವರು ಕಾರಿನೊಳಗೆ ಬಂದು ಕುಳಿತುಕೊಂಡರು. ಆಗ ಅವರ ಫೋಟೋ ಮತ್ತು ವಿಡಿಯೋ ತೆಗೆಯುವ ಸಲುವಾಗಿ ಪಾಪರಾಜಿಗಳು ಮುಗಿಬಿದ್ದರು.
ಈ ವೇಳೆ ಸಿದ್ದಾರ್ಥ್ ಮಲ್ಹೋತ್ರ ಅವರಿಗೆ ವಿಪರೀತ ಕೋಪ ಬಂತು. ಪತ್ನಿಯ ಫೋಟೋ ತೆಗೆಯಲು ಬಂದ ಜನರನ್ನು ಅವರು ದೂರ ಓಡಿಸಿದರು. ‘ಈಗ ನೀವೆಲ್ಲ ಸರಿಯಾಗಿ ವರ್ತಿಸಿ. ಒಂದು ಸೆಕೆಂಡ್, ಹಿಂದೆ ಹೋಗಿ. ನಾನು ಈಗ ಸಿಟ್ಟಾಗಬೇಕಾ?’ ಎಂದು ಸಿದ್ದಾರ್ಥ್ ಮಲ್ಹೋತ್ರಾ ಅವರು ಕೂಗಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
View this post on Instagram
‘ಸಿದ್ದಾರ್ಥ್ ಮಾಡಿದ್ದು ಸರಿಯಾಗಿದೆ. ಅವರು ಉತ್ತಮ ಗಂಡನಾಗಿ ಕರ್ತವ್ಯ ಮಾಡುತ್ತಿದ್ದಾರೆ. ಈ ದಂಪತಿಗೆ ಪ್ರೈವೆಸಿ ನೀಡಿ. ಸರಿಯಾಗಿ ವರ್ತಿಸುವುದನ್ನು ಜನರು ಕಲಿಯಬೇಕು. ಪಾಪರಾಜಿಗಳಿಗೆ ಏನಾಗಿದೆ?’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಪ್ರೆಗ್ನೆಂಟ್ ಆದ ಬಳಿಕ ಮಹತ್ವದ ಸಿನಿಮಾದಿಂದ ಹೊರಬಿದ್ದ ಟಾಕ್ಸಿಕ್ ನಟಿ ಕಿಯಾರಾ?
ಚಿತ್ರರಂಗದಲ್ಲಿ ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಅವರಿಗೆ ಸಖತ್ ಬೇಡಿಕೆ ಇದೆ. ಸದ್ಯ ‘ಪರಮ್ ಸುಂದರಿ’ ಸಿನಿಮಾದ ಶೂಟಿಂಗ್ನಲ್ಲಿ ಸಿದ್ದಾರ್ಥ್ ಬ್ಯುಸಿ ಆಗಿದ್ದಾರೆ. ಹಾಗೆಯೇ, ಕಿಯಾರಾ ಅಡ್ವಾಣಿ ಅವರ ಕೈಯಲ್ಲಿ ‘ಟಾಕ್ಸಿಕ್’, ‘ವಾರ್ 2’ ಮುಂತಾದ ಸಿನಿಮಾಗಳು ಇವೆ. ಪ್ರೆಗ್ನೆಂಟ್ ಆದ ಕಾರಣ ಅವರು ಸಿನಿಮಾದ ಕೆಲಸಗಳಿಂದ ದೂರ ಉಳಿದುಕೊಂಡಿದ್ದಾರೆ. ವೈಯಕ್ತಿಕ ಜೀವನದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








