ಫಾರ್ಮ್ಹೌಸ್ನಲ್ಲಿ ಎತ್ತಿನಗಾಡಿ ಓಡಿಸಿದ ನಟ ದರ್ಶನ್; ದಾಸನ ಜಾಲಿ ಮೂಡ್
ನಟ ದರ್ಶನ್ ಅವರು ಮೈಸೂರಿನ ಫಾರ್ಮ್ಹೌಸ್ನಲ್ಲಿ ಇದ್ದಾರೆ. ಅಲ್ಲಿ ಅವರು ಹಾಯಾಗಿ ಸಮಯ ಕಳೆಯುತ್ತಾ ಇದ್ದಾರೆ. ಫಾರ್ಮ್ಹೌಸ್ನಲ್ಲಿ ಅವರು ಎತ್ತನ್ನು ಓಡಿಸಿದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಹಾಕುತ್ತಾ ಇದ್ದಾರೆ .
ನಟ ದರ್ಶನ್ (Darshan) ಅವರು ಕಳೆದ ವರ್ಷ ಸಾಕಷ್ಟು ತೊಂದರೆ ಎದುರಿಸಿದ್ದರು. ಇದಕ್ಕೆ ಕಾರಣ ಆಗಿದ್ದು ರೇಣುಕಾ ಸ್ವಾಮಿ ಕೊಲೆ ಕೇಸ್. ಈ ಕೇಸ್ನಲ್ಲಿ ಜಾಮೀನು ಪಡೆದು ಬಂದ ಅವರ ಜೀವನ ನಿಧಾನವಾಗಿ ಮೊದಲಿನ ಸ್ಥಿತಿಗೆ ಮರಳುತ್ತಿದೆ. ಈಗ ದರ್ಶನ್ ಅವರು ಮೈಸೂರಿನ ಫಾರ್ಮ್ಹೌಸ್ನಲ್ಲಿ ಇದ್ದಾರೆ. ಅಲ್ಲಿ ಅವರು ಎತ್ತಿನ ಗಾಡಿ ಓಡಿಸಿದ್ದಾರೆ. ಈ ಸಂದರ್ಭದ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಈ ವಿಡಿಯೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.