‘ಈ ರಸ್ತೆ ನಿಮ್ ಅಪ್ಪಂದಾ?’.. ಹಾಗೆ ಕ್ಯಾಮೆರಾ ತಿರುಗಿದ್ರೆ; ಇದು ಶಿವಣ್ಣನ ಸಿನಿಮಾದ ಗೂಸ್ಬಂಪ್ಸ್ ದೃಶ್ಯ
ಇಂದು (ಮೇ 24) ರಾಜ್ಕುಮಾರ್ ಜನ್ಮದಿನ. ಅವರ ಹೆಸರಿನಲ್ಲಿ ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಬೆಳಿಗ್ಗೆ ಕುಟುಂಬದವರು ಬಂದು ರಾಜ್ಕುಮಾರ್ ಸಮಾಧಿಗೆ ಪೂಜೆ ಸಲ್ಲಿಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅಭಿನಯದ 'ಕಡ್ಡಿಪುಡಿ' ಚಿತ್ರದ ಒಂದು ದೃಶ್ಯ ವೈರಲ್ ಆಗಿದೆ .

ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್ (Puneeth Rajkumar) ಸಿನಿಮಾಗಳಲ್ಲಿ ಅವರ ಕುಟುಂಬದ ಪರಂಪರೆ ಹೇಳುವ ಅನೇಕ ಡೈಲಾಗ್ಗಳಿವೆ. ಈ ರೀತಿಯ ಡೈಲಾಗ್ ಅಭಿಮಾನಿಗಳು ತುಂಬಾನೇ ಇಷ್ಟಪಡುತ್ತಾರೆ. ಈ ಕಾರಣಕ್ಕೆ ನಿರ್ದೇಶಕರು ಕೂಡ ಈ ರೀತಿಯ ಡೈಲಾಗ್ನ ಇಡಲು ಪ್ರಯತ್ನಿಸುತ್ತಾರೆ. ಅನೇಕ ಸಿನಿಮಾಗಳಲ್ಲಿ ಈ ರೀತಿಯ ಘಟನೆಗಳು ಇವೆ. ಶಿವರಾಜ್ಕುಮಾರ್ ನಟನೆಯ ಸಿನಿಮಾ ಒಂದರ ದೃಶ್ಯ ಈಗ ವೈರಲ್ ಆಗಿದೆ. ಇದರಲ್ಲಿ ಬರೋ ಗೂಸ್ಬಂಪ್ಸ್ ದೃಶ್ಯ ಅನೇಕರಿಗೆ ಇಷ್ಟ. ಆ ಬಗ್ಗೆ ಇಲ್ಲಿದೆ ವಿವರ.
ಶಿವರಾಜ್ಕುಮಾರ್ ಅವರು ‘ಕಡ್ಡಿಪುಡಿ’ ಸಿನಿಮಾದಲ್ಲಿ ನಟಿಸಿದ್ದರು. ರಾಧಿಕಾ ಪಂಡಿತ್ ಅವರು ಈ ಚಿತ್ರಕ್ಕೆ ನಾಯಕಿ. ರಂಗಾಯಣ ರಘು ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಆರಂಭದಲ್ಲಿ ರೌಡಿ ಆಗಿರೋ ಕಥಾ ನಾಯಕ ನಂತರ ಬದಲಾಗುತ್ತಾನೆ. ಈ ರೀತಿಯಲ್ಲಿ ಕಥೆ ಸಾಗುತ್ತದೆ. 2013ರಲ್ಲಿ ರಿಲೀಸ್ ಆದ ಈ ಚಿತ್ರವನ್ನು ದುನಿಯಾ ಸೂರಿ ನಿರ್ದೇಶನ ಮಾಡಿದ್ದರು.
ರೌಡಿಸಂ ಕಥೆ ಹೇಳಲು ದುನಿಯಾ ಸೂರಿ ಎತ್ತಿದ ಕೈ. ಈ ಚಿತ್ರದಲ್ಲೂ ಅಂಥದ್ದೇ ಕಥೆ ಹೇಳಲಾಗಿತ್ತು. ಇದರಲ್ಲಿ ಬರೋ ದೃಶ್ಯ ಒಂದು ಗಮನ ಸೆಳೆದಿತ್ತು. ಕಡ್ಡಿಪುಡಿ (ಶಿವಣ್ಣ) ಹಾಗೂ ಜಿಂಕೆ (ರಂಗಾಯಣ ರಘು) ಕಾರಲ್ಲಿ ಹೋಗುತ್ತಾ ಇರುತ್ತಾರೆ. ಈ ವೇಳೆ ಕೆಲವರು ಬೈಕ್ನಲ್ಲಿ ಅಡ್ಡ ಆಗುತ್ತಾರೆ.
View this post on Instagram
‘ಗಾಡಿ ಓಡ್ಸೋಕೆ ಬರಲ್ವ’ ಎಂದು ಬೈಕ್ನವರು ಕೇಳುತ್ತಾರೆ. ‘ನೋಡ್ಕಂಡು ಹೋಗು’ ಎಂದು ಕಡ್ಡಿಪುಡಿ ಹೇಳುತ್ತಾನೆ. ‘ನಿಮ್ ಅಪ್ಪಂದಾ ರೋಡು’ ಎಂದು ಕೇಳಿ ಹೋಗುತ್ತಾರೆ. ಈ ವೇಳೆ ಕ್ಯಾಮೆರಾ ‘ಡಾ ||ರಾಜ್ಕುಮಾರ್ ರಸ್ತೆ’ ಎಂಬ ಕಡೆ ತಿರುಗುತ್ತದೆ. ಈ ದೃಶ್ಯಕ್ಕೆ ಭರ್ಜರಿ ಸಿಳ್ಳೆ ಬಿದ್ದಿದ್ದವು.
ಇದನ್ನೂ ಓದಿ: ‘ನನ್ನ ಸುದೀಪ್ ಮಧ್ಯೆ ಸಣ್ಣಪುಟ್ಟ ಮನಸ್ತಾಪ ಆಗಿರಬಹುದು, ಆದರೆ ವೈರತ್ವ ಬೆಳೆದಿಲ್ಲ’; ಶಿವರಾಜ್ಕುಮಾರ್
ಇಂದು (ಏಪ್ರಿಲ್ 24) ರಾಜ್ಕುಮಾರ್ ಜನ್ಮದಿನ. ಅವರ ಹೆಸರಿನಲ್ಲಿ ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಬೆಳಿಗ್ಗೆ ಕುಟುಂಬದವರು ಬಂದು ರಾಜ್ಕುಮಾರ್ ಸಮಾಧಿಗೆ ಪೂಜೆ ಸಲ್ಲಿಕೆ ಮಾಡಿದ್ದಾರೆ. ರಾಜ್ಕುಮಾರ್ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:50 pm, Thu, 24 April 25