AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ: ಚಾಪ್ಟರ್ 1’ ಚಿತ್ರದ ಹವಾ; ಸೂಪರ್ ಸ್ಟಾರ್​ಗಳನ್ನು ಹಿಂದಿಕ್ಕಿದ ರಿಷಬ್ ಶೆಟ್ಟಿ

ಪರಭಾಷೆಯ ಘಟಾನುಘಟಿ ನಟರ ಸಿನಿಮಾಗಳನ್ನು ‘ಕಾಂತಾರ: ಚಾಪ್ಟರ್ 1’ ಚಿತ್ರ ಹಿಂದಿಕ್ಕಿದೆ. ಆ ಮೂಲಕ ನಂಬರ್ ಒನ್ ಸ್ಥಾನ ಪಡೆದಿದೆ. ರಿಷಬ್ ಶೆಟ್ಟಿ ಅವರ ಮೇಲೆ ಸಿನಿಪ್ರಿಯರಿಗೆ ಎಷ್ಟು ನಿರೀಕ್ಷೆ ಇದೆ ಎಂಬುದಕ್ಕೆ ಇದೇ ಸಾಕ್ಷಿ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ.

‘ಕಾಂತಾರ: ಚಾಪ್ಟರ್ 1’ ಚಿತ್ರದ ಹವಾ; ಸೂಪರ್ ಸ್ಟಾರ್​ಗಳನ್ನು ಹಿಂದಿಕ್ಕಿದ ರಿಷಬ್ ಶೆಟ್ಟಿ
Most Anticipated Movies Of 2025
Follow us
ಮದನ್​ ಕುಮಾರ್​
|

Updated on: Apr 24, 2025 | 6:16 PM

ಮೊದಲು ಕನ್ನಡಕ್ಕೆ ಮಾತ್ರ ಸೀಮಿತ ಆಗಿದ್ದ ನಟ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ’ ಬಿಡುಗಡೆ ಬಳಿಕ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿದರು. ಕನ್ನಡದ ನೇಟಿವಿಟಿ ಕಥೆ ಹೊಂದಿದ್ದ ಈ ಸಿನಿಮಾವನ್ನು ಪರಭಾಷೆಯ ಮಂದಿ ಕೂಡ ತುಂಬಾ ಇಷ್ಟಪಟ್ಟರು. ಈಗ ಈ ಸಿನಿಮಾಗೆ ಪ್ರೀಕ್ವೆಲ್ ಬರುತ್ತಿದೆ. ಅಂದರೆ, ‘ಕಾಂತಾರ’ ಚಿತ್ರದಲ್ಲಿ ತೋರಿಸಿದ ಕಥೆಯ ಹಿಂದಿನ ಭಾಗ ಏನಾಗಿತ್ತು ಎಂಬುದನ್ನು ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾದಲ್ಲಿ ತೋರಿಸಲಾಗುತ್ತದೆ. ಈ ಸಿನಿಮಾ ಬಗ್ಗೆ ಜನರಿಗೆ ಇರುವ ನಿರೀಕ್ಷೆ ದೊಡ್ಡದು. ಅಚ್ಚರಿ ಏನೆಂದರೆ, ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ (Most Anticipated Movies of 2025) ಪಟ್ಟಿಯಲ್ಲಿ ರಜನಿಕಾಂತ್, ಪ್ರಭಾಸ್, ಹೃತಿಕ್ ರೋಷನ್ ಮುಂತಾದ ಘಟಾನುಘಟಿ ನಟರ ಸಿನಿಮಾಗಳನ್ನೂ ಹಿಂದಿಕ್ಕಿದೆ ‘ಕಾಂತಾರ: ಚಾಪ್ಟರ್ 1’ ಚಿತ್ರ!

ಸಿನಿಮಾಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡುವ ಐಎಂಡಿಬಿ ವೆಬ್​ಸೈಟ್​ನಲ್ಲಿ 2025ರ ಅತಿ ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿ ಇದೆ. ಈಗಾಗಲೇ ಈ ವರ್ಷದ 4 ತಿಂಗಳು ಕಳೆದಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆ ಆಗಲಿರುವ ಸಿನಿಮಾಗಳ ಪೈಕಿ ಅತಿ ಹೆಚ್ಚು ನಿರೀಕ್ಷೆ ಇರುವುದು ಯಾವ ಸಿನಿಮಾಗಳ ಮೇಲೆ ಎಂಬ ಮಾಹಿತಿ ಈ ಪಟ್ಟಿಯಲ್ಲಿ ಇದೆ. ಇದರಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ನಂಬರ್ ಒನ್ ಸ್ಥಾನ ಸಿಕ್ಕಿದೆ.

ಒಂದು ಕಾಲದಲ್ಲಿ ಕನ್ನಡದ ಸಿನಿಮಾಗಳ ಮಾರುಕಟ್ಟೆ ಚಿಕ್ಕದು ಎಂದು ಹೇಳಲಾಗುತ್ತಿತ್ತು. ಹಾಗಾಗಿ ಇಂಥ ಪಟ್ಟಿಯಲ್ಲಿ ಯಾವಾಗಲೂ ಹಿಂದಿ, ತಮಿಳು, ತೆಲುಗು ಸಿನಿಮಾಗಳೇ ಸ್ಥಾನ ಪಡೆದುಕೊಂಡಿರುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಬೇರೆ ಭಾಷೆಯ ಸಿನಿಮಾಗಳಿಗಿಂತಲೂ ಕನ್ನಡದ ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ನೋಡಲು ಜನರು ಹೆಚ್ಚು ಕಾತರರಾಗಿದ್ದಾರೆ ಎಂಬುದಕ್ಕೆ ಐಎಂಡಿಬಿ ಪಟ್ಟಿಯೇ ಸಾಕ್ಷಿ ಆಗಿದೆ.

ಇದನ್ನೂ ಓದಿ
Image
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
Image
ನಿನ್ನ ಕೆಲಸ ಹಾಳು ಮಾಡಲು ಸಂಚು ನಡೆದಿದೆ; ರಿಷಬ್ ಶೆಟ್ಟಿ​ಗೆ ದೈವದ ಎಚ್ಚರಿಕೆ
Image
ರಿಷಬ್ ಶೆಟ್ಟಿ ನಟನೆಯ ಬಾಲಿವುಡ್ ಸಿನಿಮಾದ ಪೋಸ್ಟರ್ ಬಿಡುಗಡೆ
Image
ರಿಷಬ್ ಶೆಟ್ಟಿ ಮೊದಲ ಹೆಸರೇನು? ನಾಮ ಬದಲಿಸಿಕೊಳ್ಳಲು ಕಾರಣವಾಯಿತು ಆ ಘಟನೆ

ಸೂರ್ಯ ನಟನೆಯ ‘ರೆಟ್ರೋ’ ಸಿನಿಮಾ ಮೂರನೇ ಸ್ಥಾನದಲ್ಲಿದೆ. ಅಜಯ್ ದೇವಗನ್ ಅಭಿನಯದ ‘ರೇಡ್ 2’ ಚಿತ್ರ ನಾಲ್ಕನೇ ಸ್ಥಾನದಲ್ಲಿದೆ. ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾಗೆ 5ನೇ ಸ್ಥಾನ ಸಿಕ್ಕಿದೆ. 6ನೇ ಸ್ಥಾನದಲ್ಲಿ ಹೃತಿಕ್ ರೋಷನ್, ಜೂನಿಯರ್ ಎನ್​​ಟಿಆರ್​ ಅಭಿನಯದ ‘ವಾರ್ 2’ ಸಿನಿಮಾ ಇದೆ. ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರ 7ನೇ ಸ್ಥಾನದಲ್ಲಿದೆ. ಪ್ರಭಾಸ್ ಅವರ ‘ದಿ ರಾಜಾ ಸಾಬ್’ ಸಿನಿಮಾ 8ನೇ ಸ್ಥಾನ ಪಡೆದುಕೊಂಡಿದೆ. 9ನೇ ಸ್ಥಾನದಲ್ಲಿ ಆಮಿರ್ ಖಾನ್ ಅವರ ‘ಸಿತಾರೆ ಜಮೀನ್ ಪರ್’ ಇದೆ. 10ನೇ ಸ್ಥಾನದಲ್ಲಿ ರಶ್ಮಿಕಾ ಮಂದಣ್ಣ ನಟನೆಯ ‘ಥಮ’ ಸಿನಿಮಾ ಇದೆ.

ಇದನ್ನೂ ಓದಿ: ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ನಾಗರಾಜ್ ವಾರ್ನಿಂಗ್

ಇಂಥ ಎಲ್ಲ ಸಿನಿಮಾಗಳನ್ನು ಹಿಂದಿಕ್ಕಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ನಂಬರ್ ಒನ್ ಸ್ಥಾನ ಪಡೆದುಕೊಂಡಿರುವುದು ವಿಶೇಷ. ಈ ಸಿನಿಮಾಗೆ ಭರದಿಂದ ಚಿತ್ರೀಕರಣ ನಡೆಯುತ್ತಿದೆ. ರಿಷಬ್ ಶೆಟ್ಟಿ ಅವರು ನಟಿಸಿ, ನಿರ್ದೇಶನ ಮಾಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಮೂಲಕ ಅದ್ದೂರಿಯಾಗಿ ನಿರ್ಮಾಣ ಆಗುತ್ತಿದೆ. ಅಕ್ಟೋಬರ್ 2ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ