1.3 ಕೋಟಿ ರೂ. ಬೆಲೆಯ ಐಷಾರಾಮಿ ಕಾರು ಖರೀದಿಸಿದ ರಿಷಬ್ ಶೆಟ್ಟಿ; ಫೋಟೋಸ್ ನೋಡಿ
ಹೊಸ ಕಾರು ಖರೀದಿಸಿರುವ ರಿಷಬ್ ಶೆಟ್ಟಿ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ರಿಷಬ್ ಶೆಟ್ಟಿ ಖರೀದಿಸಿದ ಟೊಯೊಟಾ ವೆಲ್ ಫೈರ್ ಕಾರಿನ ಬೆಲೆ ಬರೋಬ್ಬರಿ 1.3 ಕೋಟಿ ರೂಪಾಯಿ. ಹೊಸ ಕಾರಿನ ಫೋಟೋಗಳು ವೈರಲ್ ಆಗುತ್ತಿವೆ. ರಿಷಬ್ ಶೆಟ್ಟಿ ಮಡದಿ ಮತ್ತು ಮಕ್ಕಳು ಕಾರಿನ ಎದುರು ಪೋಸ್ ನೀಡಿದ್ದಾರೆ.
Updated on: Apr 14, 2025 | 10:31 PM

‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಅವರು ಬಹುಬೇಡಿಕೆಯ ನಟ, ನಿರ್ದೇಶಕನಾಗಿ ಹೆಸರು ಮಾಡಿದ್ದಾರೆ. ‘ಕಾಂತಾರ’ ಸಿನಿಮಾ ಬ್ಲಾಕ್ ಬಸ್ಟರ್ ಆದ ಬಳಿಕ ಅವರ ಬೇಡಿಕೆ ಹೆಚ್ಚಾಯಿತು. ಅವರಿಗೆ ಕೈ ತುಂಬ ಸಂಭಾವನೆ ಸಿಗುತ್ತಿದೆ.

ರಿಷಬ್ ಶೆಟ್ಟಿ ಅವರ ಲೈಫ್ ಸ್ಟೈಲ್ ಬದಲಾಗುತ್ತಿದೆ. ಅವರಿಗೆ ಇರುವ ಬೇಡಿಕೆ ಮತ್ತು ಸಂಭಾವನೆಗೆ ತಕ್ಕಂತೆಯೇ ಲೈಫ್ ಸ್ಟೈಲ್ ಇದೆ. ರಿಷಬ್ ಶೆಟ್ಟಿ ಅವರು ಈಗ ಆಕರ್ಷಕವಾದ ಹೊಸ ಕಾರು ಖರೀದಿ ಮಾಡಿದ್ದಾರೆ.

ಟೊಯೊಟಾ ವೆಲ್ ಫೈರ್ ಕಾರು ರಿಷಬ್ ಶೆಟ್ಟಿ ಅವರ ಮನೆಗೆ ಬಂದಿದೆ. ಕೆಲವೇ ಸೆಲೆಬ್ರಿಟಿಗಳ ಬಳಿ ಈ ಐಷಾರಾಮಿ ಕಾರು ಇದೆ. ಅವರ ಜೊತೆ ರಿಷಬ್ ಶೆಟ್ಟಿ ಅವರು ಈಗ ವೆಲ್ ಫೈರ್ ಕಾರಿನ ಮಾಲಿಕನಾಗಿದ್ದಾರೆ.

ವೆಲ್ ಫೈರ್ ಕಾರಿನ ಬೆಲೆ ಬರೋಬ್ಬರಿ 1.3 ಕೋಟಿ ರೂಪಾಯಿ. ಹೊಸ ಕಾರಿನ ಎದುರು ನಿಂತು ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಕ್ಕಳು ಪೋಸ್ ನೀಡಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕೆಲಸಗಳಲ್ಲಿ ರಿಷಬ್ ಶೆಟ್ಟಿ ಬ್ಯುಸಿ ಆಗಿದ್ದಾರೆ. ಜೊತೆಗೆ ಶಿವಾಜಿ ಬಯೋಪಿಕ್ನಲ್ಲೂ ಅವರು ನಟಿಸುತ್ತಿದ್ದಾರೆ. ನಿರ್ಮಾಪಕನಾಗಿ ಕೂಡ ರಿಷಬ್ ಶೆಟ್ಟಿ ಅವರು ಆ್ಯಕ್ಟೀವ್ ಆಗಿದ್ದಾರೆ.



















