ನಟಿಯಾಗೋ ಪ್ಲ್ಯಾನ್ ಇರಲಿಲ್ಲ; ರಚಿತಾ ಹೀರೋಯಿನ್ ಆಗಿರದಿದ್ದರೆ ಏನಾಗಿರುತ್ತಿದ್ದರು?
ರಚಿತಾ ರಾಮ್ ಅವರು ಕನ್ನಡ ಚಿತ್ರರಂಗದ ಜನಪ್ರಿಯ ನಟಿ. ಆದರೆ, ಅವರ ಆರಂಭಿಕ ಆಸೆ ವಕೀಲೆಯಾಗುವುದಾಗಿತ್ತು. 'ಬುಲ್ ಬುಲ್' ಚಿತ್ರದ ಮೂಲಕ ಖ್ಯಾತಿ ಪಡೆದ ಅವರು ದರ್ಶನ್ ಅವರೊಂದಿಗೆ ನಟಿಸಿ ಜನಪ್ರಿಯತೆ ಗಳಿಸಿದರು. ಚಿತ್ರರಂಗಕ್ಕೆ ಬರುವ ಮೊದಲು ಅವರು ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದರು. ಇಂದು ಅವರು ಕನ್ನಡ ಚಿತ್ರರಂಗದ ಪ್ರಮುಖ ನಟಿಯಾಗಿದ್ದಾರೆ.

ನಟಿ ರಚಿತಾ ರಾಮ್ (Rachita Ram) ಅವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಬೇಡಿಕೆ ಕಡಿಮೆ ಸದ್ಯಕ್ಕೆ ಕಡಿಮೆ ಆಗುವುದಲ್ಲ. ದರ್ಶನ್, ಪುನೀತ್ ರಾಜ್ಕುಮಾರ್ ಸೇರಿದಂತೆ ಕನ್ನಡದ ಹಲವು ಸ್ಟಾರ್ ಹೀರೋಗಳ ಜೊತೆ ಅವರು ನಟಿಸಿದ್ದಾರೆ. ರಚಿತಾ ರಾಮ್ ಅವರಿಗೆ ಚಿತ್ರರಂಗದ ಬಗ್ಗೆ ಆಸಕ್ತಿಯೇ ಇದ್ದವರಲ್ಲ. ಆದಾಗ್ಯೂ ಚಿತ್ರರಂಗಕ್ಕೆ ಕಾಲಿಟ್ಟರು ಎಂಬುದು ಇಲ್ಲಿ ಗಮನಸಬೇಕಾದ ವಿಚಾರ. ಹಾಗಾದರೆ ನಟನೆಗೆ ಬರದೇ ಇದ್ದಿದ್ದರೆ ರಚಿತಾ ರಾಮ್ ಅವರು ಏನಾಗಬೇಕು ಎಂದುಕೊಂಡಿದ್ದರು? ಆ ಬಗ್ಗೆ ತಿಳಿದುಕೊಳ್ಳೋಣ.
ರಚಿತಾ ರಾಮ್ ಅವರಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿದೆ. ಅವರು ಮೊದಲು ಕಿರುತೆರೆಯಲ್ಲಿ ಮಿಂಚಿದವರು. 2013ರಲ್ಲಿ ‘ಬುಲ್ ಬುಲ್’ ಹೆಸರಿನ ಸಿನಿಮಾ ಮಾಡಿದರು. ಈ ಚಿತ್ರವು ಸೂಪರ್ ಹಿಟ್ ಆಯಿತು. ದರ್ಶನ್ ಜೊತೆ ನಟಿಸಿ ಗಮನ ಸೆಳೆದರು. ಅವರ ಕೆಮಿಸ್ಟ್ರಿ ಜನರಿಗೆ ಇಷ್ಟ ಆಯಿತು ಎಂದೇ ಹೇಳಬಹುದು. ರಚಿತಾ ನಟನೆಗೆ ಬರದೇ ಇದ್ದರೆ ಏನಾಗುತ್ತಿದ್ದೆ ಎಂಬುದನ್ನು ವಿವರಿಸಿದ್ದರು.
ಇದನ್ನೂ ಓದಿ: ಈ ವರ್ಷವೇ ರಚಿತಾ ರಾಮ್ ಮದುವೆ: ಅಪ್ಡೇಟ್ ಕೊಟ್ಟ ರವಿಚಂದ್ರನ್
‘ವಕೀಲೆ ಆಗಬೇಕು, ಕೆಪಿಎಸ್ ಮಾಡಬೇಕು ಎಂದುಕೊಂಡಿದ್ದವಳು ನಾನು. ನಟನೆಗೆ ಬರಬೇಕು ಎಂಬ ಯಾವುದೇ ಉದ್ದೇಶ ಇರಲಿಲ್ಲ. ನನಗೆ ಬುದ್ಧಿ ಬಂದಾಗಿಂದ ಆ ರೀತಿ ಅಂದುಕೊಂಡೇ ಇರಲಿಲ್ಲ. ನಾನು ಟಾಮ್ ಬಾಯ್ ತರ ಇದ್ದೆ. ಸ್ಪೋರ್ಟ್ ಆಡುತ್ತಿದ್ದೆ. ಸೈಕ್ಲಿಂಗ್ ಮಾಡುತ್ತಿದ್ದೆ. ಯಾವುದೇ ಕಾನ್ಶಿಯಸ್ ಇರಲಿಲ್ಲ. ಆಟ ಆಡಿದರೆ ಟ್ಯಾನ್ ಹಾಳಾಗುತ್ತದೆ ಎಂಬ ಆಲೋಚನೆಯೂ ಇರಲಿಲ್ಲ’ ಎಂದಿದ್ದರು ಅವರು.
View this post on Instagram
ರಚಿತಾ ರಾಮ್ ಅವರು ದರ್ಶನ್ ಅವರನ್ನು ಸಾಕಷ್ಟು ಆರಾಧಿಸುತ್ತಾರೆ. ‘ಬುಲ್ ಬುಲ್’ ಚಿತ್ರದಲ್ಲಿ ರಚಿತಾಗೆ ಅವಕಾಶ ಸಿಗಲು ದರ್ಶನ್ ಕಾರಣರಾಗಿದ್ದರು. ಈ ಕಾರಣದಿಂದಲೇ ದರ್ಶನ್ ಮೇಲೆ ಅವರಿಗೆ ವಿಶೇಷ ಪ್ರೀತಿ ಇದೆ ಎಂದೇ ಹೇಳಬಹುದು. ಇದನ್ನು ಸಾಕಷ್ಟು ಸಂದರ್ಭದಲ್ಲಿ ಅವರು ವ್ಯಕ್ತಪಡಿಸಿದ್ದರು. ಇತ್ತೀಚೆಗೆ ದರ್ಶನ್ ಅವರು ಬಂಧನಕ್ಕೆ ಒಳಗಾದಾಗ ರಚಿತಾ ಅವರು ದರ್ಶನ್ ಪರ ಮಾತನಾಡಿದ್ದರು. ರಚಿತಾ ರಾಮ್ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ಬಗ್ಗೆ ಇತ್ತೀಚೆಗೆ ಕೆಲವು ವದಂತಿ ಹುಟ್ಟಿಕೊಂಡಿದ್ದವು. ಆದರೆ, ಇದನ್ನು ಅವರು ತಳ್ಳಿ ಹಾಕಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







