ಕಾರ್ತಿಕ್ ಖಾತೆಯಿಂದ ಫೋಟೋ ಕದ್ದು ಪೋಸ್ಟರ್ ಮಾಡಿದ ಕರಣ್; ಟ್ರೋಲ್ ಮೇಲೆ ಟ್ರೋಲ್
ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರ 'ನಾಗ್‌ಜಿಲ್ಲಾ' ಚಿತ್ರದ ಪೋಸ್ಟರ್ ವೈರಲ್ ಆಗಿದೆ. ಇದರ ಜೊತೆ ಟ್ರೋಲ್ಗೂ ಒಳಗಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ಗೆ ಭಾರೀ ಟೀಕೆಗಳು ವ್ಯಕ್ತವಾಗಿವೆ. ನೆಟ್ಟಿಗರು ಪೋಸ್ಟರ್ ಮತ್ತು ಇನ್‌ಸ್ಟಾಗ್ರಾಮ್ ಫೋಟೋ ನಡುವಿನ ಹೋಲಿಕೆಯನ್ನು ಗಮನಿಸಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಕಾರ್ತಿಕ್ ಆರ್ಯನ್ ಅವರು ಇದೇ ಮೊದಲ ಬಾರಿಗೆ ಕರಣ್ ಜೋಹರ್ (Karan Johar) ನಿರ್ಮಾಣದ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದಾಗಲೇ ಕುತೂಹಲ ಹೆಚ್ಚಿತ್ತು. ಧರ್ಮ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ಚಿತ್ರ ಹೊರ ಬರಲಿದೆ. ಈ ಸಿನಿಮಾಗೆ ‘ನಾಗ್‌ಜಿಲ್ಲಾ’ ಎನ್ನುವ ಟೈಟಲ್ ಇಡಲಾಗಿದೆ. ಸಾಮಾನ್ಯ ವ್ಯಕ್ತಿ ಹಾವಾಗಿ ಬದಲಾಗುವ ರೀತಿಯಲ್ಲಿ ಪೋಸ್ಟರ್ ಮೂಡಿ ಬಂದಿದೆ. ಆದರೆ, ಕಾರ್ತಿಕ್ ಆರ್ಯನ್ ಸಿನಿಮಾ ಪೋಸ್ಟರ್ ನೋಡಿದ ಬಳಿಕ ಒಂದು ದೊಡ್ಡ ತಪ್ಪು ಕಾಣಿಸಿದೆ. ಇದನ್ನು ಅಭಿಮಾನಿಗಳು ಕಂಡು ಹಿಡಿದಿದ್ದಾರೆ.
ಸಾಮಾನ್ಯವಾಗಿ ಹೊಸ ಸಿನಿಮಾ ಘೋಷಣೆ ಮಾಡುವಾಗ ಪೋಸ್ಟರ್ಗಾಗಿ ಫೋಟೋಶೂಟ್ ಮಾಡಿಸಲಾಗುತ್ತದೆ. ಇದಕ್ಕಾಗಿ ಸ್ವಲ್ಪ ಹಣ ಖರ್ಚಾಗುತ್ತದೆ. ಆದರೆ, ತಂಡದವರು ಇದನ್ನು ಉಳಿಸೋ ಪ್ಲ್ಯಾನ್ ಮಾಡಿದಂತಿದೆ. ಈ ಪೋಸ್ಟರ್ ಹಿಂದಿನ ಅಸಲಿ ಮರ್ಮವನ್ನು ನೆಟ್ಟಿಗರು ಬಿಚ್ಚಿಟ್ಟಿದ್ದಾರೆ. ಇದರಿಂದ ಧರ್ಮ ಸಂಸ್ಥೆಗೆ ಮುಜುಗರ ಆಗಿದೆ.
ಕಾರ್ತಿಕ್ ಆರ್ಯನ್ ಅವರ ‘ನಾಗ್‌ಜಿಲ್ಲಾ’ ಸಿನಿಮಾ ಪೋಸ್ಟರ್ ನೋಡಿದವರಿಗೆ ಅವರು ಈ ಮೊದಲು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದ ಫೋಟೋ ನೆನಪಾಗಿದೆ. ಅವರು ಈ ಮೊದಲು ಮಾಡಿದ್ದ ಫೋಟೋ ಹಾಗೂ ಪೋಸ್ಟರ್ ಮಧ್ಯೆ ಸಾಕಷ್ಟು ಸಾಮ್ಯತೆ ಇದೆ. ಹೇರ್ಸ್ಟೈಲ್ನಿಂದ ಹಿಡಿದು ಎಲ್ಲವೂ ಬಹುತೇಕ ಹೋಲಿಕೆ ಇದೆ. ಎರಡೂ ಕಡೆಗಳಲ್ಲಿ ಕಾರ್ತಿಕ್ ಶರ್ಟ್ ಧರಿಸಿಲ್ಲ. ಹೀಗಾಗಿ, ಪೋಸ್ಟರ್ ಮಾಡಲು ಫೋಟೋಶೂಟ್ ಮಾಡೋದು ಬಿಟ್ಟು ಅವರದ್ದೇ ಖಾತೆಯ ಹಳೆಯ ಫೋಟೋಗಳನ್ನು ತೆಗದರೇ ಎನ್ನುವ ಪ್ರಶ್ನೆ ಮೂಡಿದೆ.
So dharma basically re used Kartik’s old Instagram post to make the official poster of their next movie 😂 kjo and his team really have stopped putting in efforts byu/NoProfessionn inBollyBlindsNGossip
ಈಗ ಜಗತ್ತು ವೇಗವಾಗಿದೆ. ಸೋಶಿಯಲ್ ಮೀಡಿಯಾ ಬಳಕೆ ಹೆಚ್ಚಿದೆ. ಹೀಗಾಗಿ, ಈ ಸಂದರ್ಭದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ಬಂದೊದಗಿದೆ. ‘ಧರ್ಮ ಪ್ರೊಡಕ್ಷನ್ಸ್ನವರು ಶ್ರಮ ಇಲ್ಲದೆ ಪೋಸ್ಟರ್ ಮಾಡಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಕಥೆ ಎಲ್ಲಿಂದ ಕದಿಯುವ ಆಲೋಚನೆಯಲ್ಲಿ ಇದ್ದೀರಿ’ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಔಷಧ ತೆಗೆದುಕೊಂಡು ಸಣ್ಣ ಆಗಿದ್ದಾನೆ ಎಂದವರಿಗೆ ಪ್ರತ್ಯುತ್ತರ ಕೊಟ್ಟ ಕರಣ್ ಜೋಹರ್
ಕರಣ್ ಜೋಹರ್, ಮಹಾವೀರ್ ಜೈನ್, ಅದಾರ್ ಪೂನವಾಲ್ಲ, ಅಪೂರ್ವ ಮೆಹ್ತಾ, ಸುಜಿತ್ ಜೈನ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದ ರಿಲೀಸ್ ದಿನಾಂಕ ಕೂಡ ಘೋಷಣೆ ಆಗಿದ್ದು, 2026ರ ಆಗಸ್ಟ್ 14ರಂದು ಚಿತ್ರ ತೆರೆಗೆ ಬರಲಿದೆ. ಅಂದುಕೊಂಡಂತೆ ನಡೆದರೆ ಮಾತ್ರ ಸಿನಿಮಾ ಈ ಡೇಟ್ಗೆ ಬಿಡುಗಡೆ ಹೊಂದಲಿದೆ ಇಲ್ಲವಾದಲ್ಲಿ ಸಿನಿಮಾ ರಿಲೀಸ್ ಮತ್ತಷ್ಟು ವಿಳಂಬ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:33 am, Fri, 25 April 25








