AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಔಷಧ ತೆಗೆದುಕೊಂಡು ಸಣ್ಣ ಆಗಿದ್ದಾನೆ ಎಂದವರಿಗೆ ಪ್ರತ್ಯುತ್ತರ ಕೊಟ್ಟ ಕರಣ್ ಜೋಹರ್

Karan Johar: ಕರಣ್ ಜೋಹರ್ ಬಾಲಿವುಡ್​ನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ. ಇತ್ತೀಚೆಗೆ ಅವರು ಬಹಳ ತೆಳ್ಳಗಾಗಿದ್ದಾರೆ. ಕರಣ್, ಆರೋಗ್ಯ ಸಮಸ್ಯೆಯಿಂದ ತೆಳ್ಳಗಾಗಿದ್ದಾರೆ ಎನ್ನುತ್ತಿದ್ದಾರೆ. ಆದರೆ ಅದೆಲ್ಲ ಸುಳ್ಳು ಎಂದು ಸ್ವತಃ ಕರಣ್ ಜೋಹರ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ತಾವು ತಮ್ಮ ದೇಹತೂಕವನ್ನು ಹೇಗೆ ಇಳಿಸಿಕೊಂಡಿದ್ದು ಎಂದು ಸಹ ಹೇಳಿದ್ದಾರೆ.

ಔಷಧ ತೆಗೆದುಕೊಂಡು ಸಣ್ಣ ಆಗಿದ್ದಾನೆ ಎಂದವರಿಗೆ ಪ್ರತ್ಯುತ್ತರ ಕೊಟ್ಟ ಕರಣ್ ಜೋಹರ್
Karan Johar
Follow us
ಮಂಜುನಾಥ ಸಿ.
|

Updated on:Apr 20, 2025 | 7:45 PM

ಕರಣ್ ಜೋಹರ್ (Karan Johar) ಬಹಳ ಸಣ್ಣಕಾಗಿಬಿಟ್ಟಿದ್ದಾರೆ. ಅವರ ಅಭಿಮಾನಿಗಳಿಗೆ ಆತಂಕವಾಗುವಷ್ಟು ಅವರು ಸಣ್ಣಗಾಗಿದ್ದಾರೆ. ಇದೇನು ಕರಣ್​ ಜೋಹರ್​ಗೆ ಯಾವುದಾದರೂ ಖಾಯಿಲೆ ಬಂದಿದೆಯಾ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡಲಾಗುತ್ತಿದೆ. ಆದರೆ ಕರಣ್ ಜೋಹರ್​ಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾಗಿಲ್ಲ. ಬದಲಿಗೆ ಅವರು ತಮ್ಮ ಸ್ವ ಇಚ್ಛೆಯಿಂದ ದೇಹ ತೂಕ ಇಳಿಸಿಕೊಂಡಿದ್ದಾರೆ. ಆದರೆ ಕರಣ್, ತಮ್ಮ ದೇಹ ತೂಕ ಇಳಿಸಿಕೊಂಡ ಬಗ್ಗೆಯೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದು, ಆಪರೇಷನ್ ಅಥವಾ ಯಾವುದೋ ಔಷಧಿಗಳ ಮೂಲಕ ದೇಹ ತೂಕವನ್ನು ಕರಣ್ ಇಳಿಸಿಕೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆಲ್ಲ ತಕ್ಕ ಉತ್ತರವನ್ನು ಕರಣ್ ಜೋಹರ್ ನೀಡಿದ್ದಾರೆ.

ಅಕ್ಷಯ್ ಕುಮಾರ್ ನಟನೆಯ ‘ಕೇಸರಿ 2’ ಸಿನಿಮಾದ ನಿರ್ಮಾಪಕ ಕರಣ್ ಜೋಹರ್ ಇತ್ತೀಚೆಗಷ್ಟೆ ಸಿನಿಮಾದ ಪ್ರಚಾರಕ್ಕಾಗಿ ಇನ್​ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಕರಣ್ ಜೋಹರ್ ದೇಹ ತೂಕ ಇಳಿಸಿಕೊಂಡ ಬಗ್ಗೆ ಪ್ರಶ್ನೆ ಕೇಳಿದರು. ಪ್ರಶ್ನೆಗೆ ಉತ್ತರಿಸಿದ ಕರಣ್ ಜೋಹರ್, ‘ದೇಹ ತೂಕ ಇಳಿಸಿಕೊಳ್ಳುವುದು ಬಹಳ ಶ್ರಮದಾಯಕ ಕೆಲಸ. ರೂಮರ್ ಹಬ್ಬಿರುವಂತೆ ಇದು ವೈದ್ಯಕೀಯ ಚಿಕಿತ್ಸೆಯಿಂದ ತೂಕ ಇಳಿಸಿಕೊಂಡಿದ್ದಲ್ಲ’ ಎಂದಿದ್ದಾರೆ.

ಕೆಲವರು ಕರಣ್ ಆರೋಗ್ಯ ಸರಿ ಇಲ್ಲ ಹಾಗಾಗಿ ಆತನ ದೇಹ ತೂಕ ಇಳಿಕೆ ಆಗಿದೆ ಎಂಬ ಸುದ್ದಿಗೂ ಪ್ರತಿಕ್ರಿಯೆ ನೀಡಿರುವ ಕರಣ್ ಜೋಹರ್, ‘ನನ್ನ ಜೀವನದಲ್ಲಿಯೇ ಇಷ್ಟು ಆರೋಗ್ಯವಾಗಿ ನಾನು ಎಂದೂ ಇರಲಿಲ್ಲ. ನಾನು ನಡೆಯುತ್ತಿದ್ದರೆ ನನ್ನ ಕಾಲಿಗೆ ನನ್ನ ದೇಹ ತೂಕದ ಅನುಭವವೇ ಆಗುತ್ತಿಲ್ಲ. ನಡೆದಂತ ಅಲ್ಲ ಬದಲಿಗೆ ಹಾರಿದಂತೆ ನನಗೆ ಭಾಸವಾಗುತ್ತಿದೆ. ನಾನು ಸರಿಯಾದ ರೀತಿಯಲ್ಲಿ ತೂಕ ಇಳಿಸಿಕೊಂಡಿದ್ದೇನೆ. ನನ್ನ ಮುಂಜಾನೆಗಳು ಅದ್ಭುತ ಎನಿಸುತ್ತಿವೆ. ಬೆಳಿಗಿನಿಂದ ರಾತ್ರಿ ಮಲಗುವವರೆಗೂ ನಾನು ಆಕ್ಟಿವ್ ಅಗಿ ಇರುತ್ತೇನೆ, ನನ್ನ ದೇಹದಲ್ಲಿ ಜೋಶ್ ತುಂಬಿರುತ್ತದೆ, ನನಗಂತೂ ನನ್ನ ಈ ದಿನಗಳು ಬಹಳ ಖುಷಿ ಕೊಡುತ್ತಿವೆ’ ಎಂದಿದ್ದಾರೆ ಕರಣ್.

ಇದನ್ನೂ ಓದಿ:‘ಖಾನ್, ಕಪೂರ್​ಗಳೇ ಒಜಿ​ಗಳು, ಹೊಸಬರು ಬಂದು ಫ್ರಾಂಚೈಸಿ ಕದಿಯುತ್ತಾರೆ’; ಕರಣ್ ಜೋಹರ್

ತಮ್ಮ ವೇಟ್ ಲಾಸ್ ಜರ್ನಿ ಬಗ್ಗೆ ಮಾತನಾಡಿರುವ ಕರಣ್ ಜೋಹರ್, ‘ನಾನು ದೇಹತೂಕ ಇಳಿಸಿಕೊಳ್ಳುವ ನಿರ್ಣಯ ಮಾಡಿದಾಗ ಮೊದಲಿಗೆ ನಾನು ನನ್ನ ರಕ್ತದ ಪರೀಕ್ಷೆ, ವಿಟಮಿನ್ ಪರೀಕ್ಷೆಗಳನ್ನು ಮಾಡಿಸಿದೆ. ಯಾವುದನ್ನು ಮೊದಲು ಸರಿ ಮಾಡಬೇಕೋ ನೋಡಿಕೊಂಡು ಅದಕ್ಕೆ ಟ್ರೀಟ್​ಮೆಂಟ್ ತೆಗೆದುಕೊಂಡೆ. ಬಳಿಕ ನನ್ನ ದೇಹ ತೂಕದ ಜರ್ನಿ ಪ್ರಾರಂಭಿಸಿದೆ. ನಾನು ಈಗ ದಿನಕ್ಕೆ ಕೇವಲ ಒಂದು ಬಾರಿ ಮಾತ್ರ ಊಟ ಮಾಡುತ್ತೇನೆ. ಅದರ ಜೊತೆಗೆ ಸ್ವಿಮ್ಮಿಂಗ್, ಎಕ್ಸ್​ಸೈಸ್ ಸೇರಿದಂತೆ ಹಲವು ಆಕ್ಟಿವಿಟಿಗಳನ್ನು ಮಾಡುತ್ತೇನೆ. ಜೀವನದಲ್ಲಿ ತುಸು ಶಿಸ್ತು ತಂದಿದ್ದೇನೆ. ಈ ಬದಲಾವಣೆಗಳಿಂದಾಗಿ ದೇಹ ತೂಕ ಇಳಿಸಿಕೊಂಡಿದ್ದೇನೆ’ ಎಂದಿದ್ದಾರೆ ಕರಣ್ ಜೋಹರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:17 pm, Sun, 20 April 25

ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​