ಕರಣ್ ಜೋಹರ್ಗೆ ಇರೋದು ರೋಗವೇ? ವಿಪರೀತ ತೂಕ ಇಳಿದಿದ್ದಕ್ಕೆ ಕಾರಣ ನೀಡಿದ ನಿರ್ಮಾಪಕ
ಕರಣ್ ಜೋಹರ್ ಅವರ ಇತ್ತೀಚಿನ ತೂಕ ಇಳಿಕೆಯಿಂದಾಗಿ ಅವರ ಆರೋಗ್ಯದ ಬಗ್ಗೆ ಚರ್ಚೆಗಳು ಹೆಚ್ಚಾಗಿವೆ. ಅವರು ಇದನ್ನು ಆರೋಗ್ಯಕರ ಬದಲಾವಣೆ ಎಂದು ಹೇಳಿದ್ದಾರೆ. ಆದರೆ, ಅವರ ದಿನಚರಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಅವರು ಐಫಾ ಡಿಜಿಟಲ್ ಅವಾರ್ಡ್ಸ್‌ನಲ್ಲಿ ಭಾಗವಹಿಸಿದ್ದರು

ಕರಣ್ ಜೋಹರ್ (Karan Johar) ಅವರು ಇತ್ತೀಚೆಗೆ ಹೆಚ್ಚು ಚರ್ಚೆಯಲ್ಲಿ ಇದ್ದಾರೆ. ಅವರು ತಮ್ಮ ‘ಧರ್ಮ ಪ್ರೊಡಕ್ಷನ್ಸ್’ ನಿರ್ಮಾಣ ಸಂಸ್ಥೆಯ ಅರ್ಧದಷ್ಟು ಷೇರುಗಳನ್ನು ಮಾರಾಟ ಮಾಡಿದ್ದು ಇದಕ್ಕೆ ಕಾರಣ. ಇದೇ ವೇಳೆ ಅವರು ಸಾಕಷ್ಟು ಬಲಹೀನರಾಗಿ ಕಾಣಿಸಿಕೊಂಡಿದ್ದಾರೆ. ವಿಪರೀತ ತೂಕ ಕಳೆದುಕೊಂಡ ಅವರು ಸಣಕಲಾಗಿ ಹೋಗಿದ್ದಾರೆ. ಇದಕ್ಕೆ ಕಾರಣವೇನು? ಅವರಿಗೆ ಏನಾದರೂ ರೋಗ ಇದೆಯೇ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವವ ಆಗಿದ್ದವು. ಇದಕ್ಕೆ ಕರಣ್ ಜೋಹರ್ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಇದನ್ನು ಅವರು ಆರೋಗ್ಯಕರ ಬೆಳವಣಿಗೆ ಎಂದೇ ಹೇಳಿದ್ದಾರೆ.
ಕರಣ್ ಜೋಹರ್ ಅವರು ಇತ್ತೀಚೆಗೆ ಪಾಪರಾಜಿಗಳ ಕ್ಯಾಮೆರಾ ಎದುರು ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರ ಸಣಕಲು ದೇಹ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಕರಣ್ ಜೋಹರ್ಗೆ ಯಾವುದೋ ಅನಾರೋಗ್ಯ ಸಮಸ್ಯೆ ಉಂಟಾಗಿದ್ದರಿಂದಲೇ ಅವರು ಈ ರೀತಿ ಆಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಆ ರೀತಿ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
‘ಐಫಾ ಡಿಜಿಟಲ್ ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಭಾಗಿ ಆಗಿದ್ದಾರೆ. ವಿಪರೀತಿ ತೂಕ ಕಳೆದುಕೊಳ್ಳಲು ಕಾರಣ ಏನು ಎಂದು ಅವರಿಗೆ ಕೇಳಲಾಗಿದೆ. ‘ಇದು ಆರೋಗ್ಯಕರ. ಒಳ್ಳೆಯ ಊಟ ಮಾಡಬೇಕು, ವ್ಯಾಯಾಮ ಮಾಡಬೇಕು. ಉತ್ತಮವಾಗಿ ಕಾಣಲು ನಿಮ್ಮ ಕೈಲಾದಷ್ಟು ಪ್ರಯತ್ನಿಸಬೇಕು’ ಎಂದು ಅವರು ಹೇಳಿದ್ದಾರೆ.
‘ನಿಮ್ಮ ದಿನಚರಿ ಏನು’ ಎಂಬ ಪ್ರಶ್ನೆಯೂ ಕರಣ್ ಜೋಹರ್ ಅವರಿಗೆ ಕೇಳಲಾಗಿದೆ. ಇದಕ್ಕೆ ಅವರು ಉತ್ತರಿಸೋಕೆ ನಿರಾಕರಿಸಿದ್ದಾರೆ. ‘ಹಾಗೆ ಹೇಳಿದರೆ ಗುಟ್ಟು ರಟ್ಟಾಗಿಬಿಡುತ್ತದೆ’ ಎಂದು ಕರಣ್ ಜೋಹರ್ ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ‘ರಾಜಮೌಳಿ ಸಿನಿಮಾಗಳಲ್ಲೂ ಲಾಜಿಕ್ ಇರಲ್ಲ’: ಕರಣ್ ಜೋಹರ್ ವಾದ
‘ಕುಚ್ ಕುಚ್ ಹೋತಾ ಹೇ’, ‘ಕಭಿ ಖುಷಿ ಕಭಿ ಗಮ್’, ‘ಮೈ ನೇಮ್ ಈಸ್ ಖಾನ್’ ರೀತಿಯ ಸಿನಿಮಾಗಳನ್ನು ಕರಣ್ ಜೋಹರ್ ನಿರ್ದೇಶನ ಮಾಡಿದ್ದಾರೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಕರಣ್ ಜೋಹರ್ ನಿರ್ದೇಶನದ ಕೊನೆಯ ಸಿನಿಮಾ. ಅವರು ಹಲವು ಸೆಲೆಬ್ರಿಟಿ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಿ ಫೇಮಸ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:44 am, Mon, 10 March 25