‘ರಾಜಮೌಳಿ ಸಿನಿಮಾಗಳಲ್ಲೂ ಲಾಜಿಕ್ ಇರಲ್ಲ’: ಕರಣ್ ಜೋಹರ್ ವಾದ
ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಈ ಸಿನಿಮಾಗಳಲ್ಲಿ ಲಾಜಿಕ್ ಇಲ್ಲ ಎಂದು ಕರಣ್ ಜೋಹರ್ ಹೇಳಿದ್ದಾರೆ. ರಾಜಮೌಳಿ ಮಾತ್ರವಲ್ಲದೇ ಅನೇಕ ದೊಡ್ಡ ದೊಡ್ಡ ನಿರ್ದೇಶಕರ ಸಿನಿಮಾಗಳಲ್ಲಿ ಕೂಡ ಲಾಜಿಕ್ ಇರುವುದಿಲ್ಲ ಎಂಬುದು ಕರಣ್ ಜೋಹರ್ ಅವರ ಅನಿಸಿಕೆ.

ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾದಲ್ಲಿ ಅವರ ಅನುಭವ ಅಪಾರ. ಸಾಕಷ್ಟು ಏಳು-ಬೀಳುಗಳನ್ನು ಅವರು ಕಂಡಿದ್ದಾರೆ. ಅನೇಕ ಹೊಸಬರಿಗೆ ಅವರು ಚಾನ್ಸ್ ಕೊಟ್ಟು ಸ್ಟಾರ್ ಪಟ್ಟ ಸಿಗುವಂತೆ ಮಾಡಿದ್ದಾರೆ. ಈಗ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಜಮೌಳಿಯ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ರಾಜಮೌಳಿ ನಿರ್ದೇಶನ ಮಾಡಿದ ಚಿತ್ರಗಳಲ್ಲಿ ಲಾಜಿಕ್ ಇರುವುದಿಲ್ಲ ಎಂದು ಕರಣ್ ಜೋಹರ್ ಅವರು ಹೇಳಿದ್ದಾರೆ.
ಅನೇಕ ಸಿನಿಮಾಗಳಲ್ಲಿ ಲಾಜಿಕ್ ಇಲ್ಲ ಎಂದು ಪ್ರೇಕ್ಷಕರು ಮೂಗು ಮುರಿಯುತ್ತಾರೆ. ಆದರೆ ಎಷ್ಟೇ ಸೂಪರ್ ಹಿಟ್ ಸಿನಿಮಾಗಳಲ್ಲಿ ಲಾಜಿಕ್ ಇರುವುದೇ ಇಲ್ಲ. ಆ ಕುರಿತು ಕರಣ್ ಜೋಹರ್ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಪ್ರೇಕ್ಷಕರ ನಂಬಿಕೆ ಬಲವಾಗಿದ್ದಾಗ ಲಾಜಿಕ್ನ ಪ್ರಶ್ನೆ ಎದುರಾಗುವುದಿಲ್ಲ ಎಂಬುದು ಕರಣ್ ಜೋಹರ್ ಅವರ ವಾದ. ಈ ಮಾತಿಗೆ ಅವರು ಕೆಲವು ಸಿನಿಮಾಗಳನ್ನು ಉದಾಹರಣೆಯಾಗಿ ನೀಡಿದ್ದಾರೆ.
ಇದನ್ನೂ ಓದಿ: ರಾಜಮೌಳಿ ಮನೆಯಲ್ಲಿದೆ ಅಂಬೇಡ್ಕರ್ ಅವರ ದೊಡ್ಡ ಚಿತ್ರ: ಹಿಂದಿದೆ ಆಸಕ್ತಿಕರ ಕಾರಣ
‘ನಂಬಿಕೆ ಎಂಬುದು ಬಹಳ ಮುಖ್ಯ. ದೊಡ್ಡ ನಿರ್ದೇಶಕರ ಸಿನಿಮಾಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ದೊಡ್ಡ ಸಿನಿಮಾಗಳು ಯಶಸ್ಸು ಕಂಡಿರುವುದೇ ನಂಬಿಕೆ ಮೇಲೆ. ಸಿನಿಮಾದಲ್ಲಿ ಲಾಜಿಕ್ ಎಂಬುದು ಮುಖ್ಯವಾಗಲ್ಲ. ರಾಜಮೌಳಿ ಮಾಡಿದ ಯಾವುದೇ ಸಿನಿಮಾವನ್ನು ಉದಾಹರಣೆಯಾಗಿ ಹೇಳಬಹುದು. ಅವುಗಳಲ್ಲಿ ಲಾಜಿಕ್ ಏನಿದೆ? ಅಲ್ಲಿ ನಂಬಿಕೆಯೇ ಮುನ್ನೆಲೆಗೆ ಬರುತ್ತದೆ’ ಎಂದಿದ್ದಾರೆ ಕರಣ್ ಜೋಹರ್.
ಇದನ್ನೂ ಓದಿ: ‘ದೊಡ್ಡ ಬಜೆಟ್ ಸಿನಿಮಾಗಳಿಂದ ಲಾಭ ಇಲ್ಲ’; ನಿರ್ಮಾಣ ಸಂಸ್ಥೆ ಮಾರಿದ್ದಕ್ಕೆ ಕಾರಣ ತಿಳಿಸಿದ ಕರಣ್ ಜೋಹರ್
‘ಅನಿಮಲ್, ಆರ್ಆರ್ಆರ್, ಗದರ್ ಸಿನಿಮಾಗಳಲ್ಲಿ ಲಾಜಿಕ್ ಇಲ್ಲ. ಒಬ್ಬ ವ್ಯಕ್ತಿ ಸಾವಿರ ಜನರಿಗೆ ಹೊಡೆಯುತ್ತಾನೆ ಎಂದರೆ ಅದು ನಂಬಿಕೆ ಅಷ್ಟೇ. ಸನ್ನಿ ಡಿಯೋಲ್ ಅದನ್ನು ಮಾಡುತ್ತಾರೆ ಎಂಬುದು ಗದರ್ ಸಿನಿಮಾದ ನಿರ್ದೇಶಕ ಅನಿಲ್ ಶರ್ಮ ಅವರ ನಂಬಿಕೆ. ನಿಮ್ಮ ಮೇಲೆ ನಿಮಗೆ ನಂಬಿಕೆ ಇಲ್ಲದಿದ್ದರೆ, ಪ್ರೇಕ್ಷಕರನ್ನು ನೀವು ಅನುಮಾನಿಸಿದರೆ, ಲಾಜಿಕ್ ಬಗ್ಗೆ ತುಂಬ ಗಮನ ಹರಿಸಿದರೆ ಸಮಸ್ಯೆ ಆರಂಭ ಆಗುತ್ತದೆ’ ಎಂದು ಕರಣ್ ಜೋಹರ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.