Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ನ್ ಸಿನಿಮಾನಲ್ಲಿ ಭಾರತೀಯ ಸೈನಿಕರ ಪಾತ್ರ, ನಿರ್ಮಾಪಕಿ ವಿರುದ್ಧ ದೂರು

Ekta Kapoor: ಏಕ್ತಾ ಕಪೂರ್, ಭಾರತದ ಕಿರುತೆರೆಯ ರಾಣಿ ಎಂದೇ ಕರೆಸಿಕೊಳ್ಳುವ ನಿರ್ಮಾಪಕಿ. ಹಲವಾರು ಸೂಪರ್-ಡೂಪರ್ ಹಿಟ್ ಧಾರವಾಹಿಗಳನ್ನು ಏಕ್ತಾ ಕಪೂರ್ ನಿರ್ಮಾಣ ಮಾಡಿದ್ದಾರೆ. ಕೆಲವು ಒಟಿಟಿಗಳ ಮೇಲೂ ಬಂಡವಾಳ ತೊಡಗಿಸಿರುವ ಏಕ್ತಾ ಕಪೂರ್, ಇದೀಗ, ಸೈನಿಕರಿಗೆ ಅವಮಾನ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ಪಾರ್ನ್ ಸಿನಿಮಾನಲ್ಲಿ ಭಾರತೀಯ ಸೈನಿಕರ ಪಾತ್ರ, ನಿರ್ಮಾಪಕಿ ವಿರುದ್ಧ ದೂರು
Ekta Kapoor
Follow us
ಮಂಜುನಾಥ ಸಿ.
|

Updated on:Feb 16, 2025 | 7:00 PM

ಭಾರತದಲ್ಲಿ ಅತಿ ಹೆಚ್ಚು ಗೌರವಿಸಲ್ಪಡುವ ವೃತ್ತಿಗಳೆಂದರೆ ರೈತ ವೃತ್ತಿ ಮತ್ತು ಸೈನಿಕ ವೃತ್ತಿ. ‘ಜವಾನ್ ಮತ್ತು ಕಿಸಾನ್’ ಭಾರತೀಯರ ಪಾಲಿಗೆ ದೈವ ಸಮಾನ. ಈ ಇಬ್ಬರಿಗೆ ಅನ್ಯಾಯ ಅಥವಾ ಅವಮಾನ ಆದಲ್ಲಿ ಭಾರತೀಯರು ಸಹಿಸುವುದಿಲ್ಲ. ಇದೀಗ ಸಿನಿಮಾ ನಿರ್ಮಾಪಕಿಯೊಬ್ಬರು, ಭಾರತೀಯ ಸೈನಿಕರಿಗೆ ಅಪಮಾನ ಎಸಗಿದ್ದಾರೆ ಎಂಬ ಆರೋಪ ಹೊತ್ತಿದ್ದು, ನಿರ್ಮಾಪಕಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಭಾರತೀಯ ಟಿವಿ ಲೋಕದ ಬಾದ್​​ಶಾ, ಕಿಂಗ್ ಮೇಕರ್ ಎಂದೇ ಕರೆಯಲಾಗುವ ಏಕ್ತಾ ಕಪೂರ್ ಅವರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದ್ದು, ಏಕ್ತಾ ಕಪೂರ್, ಭಾರತೀಯ ಸೈನಿಕರಿಗೆ ಅಪಮಾನ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಹಲವಾರು ಟಿವಿ ಧಾರಾವಾಹಿಗಳ ನಿರ್ಮಾಪಕಿ ಆಗಿರುವ ಏಕ್ತಾ ಕಪೂರ್ ಆಲ್ಟ್ ಬಾಲಾಜಿ ಹೆಸರಿನ ಒಟಿಟಿಯನ್ನೂ ಸಹ ನಡೆಸುತ್ತಿದ್ದು, ಈ ಆಲ್ಟ್ ಬಾಲಾಜಿ ಒಟಿಟಿಯಲ್ಲಿ ಸಾಫ್ಟ್ ಪಾರ್ನ್ ರೀತಿಯ ವೆಬ್ ಸರಣಿ, ಸಿನಿಮಾಗಳನ್ನು ಮಾತ್ರವೇ ಪ್ರಸಾರ ಮಾಡಲಾಗುತ್ತದೆ.

ಇಂಥಹುದೇ ಸಾಫ್ಟ್ ಪಾರ್ನ್ ವೆಬ್ ಸರಣಿಯೊಂದರಲ್ಲಿ ಸೈನಿಕರ ಪಾತ್ರವನ್ನು ಬಳಸಿಕೊಳ್ಳಲಾಗಿದ್ದು, ಸೈನಿಕ ತನ್ನ ಸಮವಸ್ತ್ರದಲ್ಲಿದ್ದಾಗಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಈ ವಿಷಯವಾಗಿ ಯೂಟ್ಯೂಬರ್ ವಿಕಾಸ್ ಪಾಠಕ್ (ಹಿಂದೂಸ್ತಾನಿ ಬಾವ್) ಪೊಲೀಸ್ ಠಾಣೆಗೆ ಏಕ್ತಾ ಕಪೂರ್ ವಿರುದ್ಧ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ಎಫ್​ಐಆರ್ ನಮೂದು ಮಾಡಿಕೊಂಡಿದ್ದರು. ಆದರೆ ವಿಚಾರಣೆ ನಡೆಸಿರಲಿಲ್ಲ. ಇದೀಗ ನ್ಯಾಯಾಲಯವು, ಪೊಲೀಸರಿಗೆ ಸೂಚನೆ ನೀಡಿದ್ದು, ಏಕ್ತಾ ಕಪೂರ್ ವಿಚಾರಣೆ ನಡೆಸಿ, ಮೇ 9ರ ಒಳಗಾಗಿ ವರದಿ ನೀಡುವಂತೆ ಸೂಚಿಸಿದೆ.

ಇದನ್ನೂ ಓದಿ:

ಯೂಟ್ಯೂಬರ್ ವಿಕಾಸ್ ಪಾಠಕ್ (ಹಿಂದೂಸ್ತಾನಿ ಬಾವ್) ಏಕ್ತಾ ಕಪೂರ್ ವಿರುದ್ಧ ದೂರು ನೀಡಿ ಬಹಳ ಸಮಯವೇ ಆಗಿದೆ. ಸೆಕ್ಷನ್ 202 ಅಡಿಯಲ್ಲಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಏಕ್ತಾ ಕಪೂರ್ ವಿಚಾರಣೆ ನಡೆಸಿರಲಿಲ್ಲ. ಏಕ್ತಾ ಕಪೂರ್ ಮಾತ್ರವೇ ಅಲ್ಲದೆ, ಆಲ್ಟ್ ಬಾಲಾಜಿಯ ಇತರೆ ಸಹ ಮಾಲೀಕರು, ಆ ವೆಬ್ ಸರಣಿಯ ನಿರ್ದೇಶಕರು ಇನ್ನೂ ಕೆಲವರ ವಿರುದ್ಧ ದೂರು ದಾಖಲಾಗಿದೆ. ದೂರು ದಾಖಲಿಸಿರುವ ವಿಕಾಸ್ ಪಾಠಕ್ (ಹಿಂದೂಸ್ತಾನಿ ಬಾವ್) ಸಹ ಸಾಮಾನ್ಯ ವ್ಯಕ್ತಿಯೇನಲ್ಲ. ಕಾರಿನಲ್ಲಿ ಕೂತು ಕೆಟ್ಟ ಕೆಟ್ಟದಾಗಿ ಜನರನ್ನು, ಸೆಲೆಬ್ರಿಟಿಗಳನ್ನು ಬೈಯ್ಯುವ ಮೂಲಕ ಜನಪ್ರಿಯ ಆಗಿದ್ದಾರೆ ಈ ವ್ಯಕ್ತಿ. ಇದೀಗ ಇದೇ ವ್ಯಕ್ತಿಯೇ ಏಕ್ತಾ ಕಪೂರ್ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:30 pm, Sun, 16 February 25

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ