ತೆಲುಗು ಚಿತ್ರರಂಗದಲ್ಲಿ ಆದ ಕೆಟ್ಟ ಅನುಭವ ಹಂಚಿಕೊಂಡ ನಟಿ
Shweta Basu: ಬಾಲಿವುಡ್ ನಟಿ ಶ್ವೇತಾ ಬಸು ತೆಲುಗು ಹಾಗೂ ತಮಿಳಿನ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿ ನಟಿಸುವಾಗ ಒಂದು ಸಿನಿಮಾ ತಂಡದಿಂದ ತೀವ್ರ ನಿಂದನೆಗೆ ಶ್ವೇತಾ ಬಸು ಒಳಗಾಗಿದ್ದರಂತೆ. ಆ ವಿಷಯದ ಬಗ್ಗೆ ಇತ್ತೀಚೆಗಿನ ಸಂದರ್ಶನದಲ್ಲಿ ಶ್ವೇತಾ ಮಾತನಾಡಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಸಲು ಬಾಲಿವುಡ್ ನಟ, ನಟಿಯರು ಸಾಲುಗಟ್ಟಿ ನಿಂತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅಂತೂ ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ಹೊಗಳಿಕೆಗಳ ಸುರಿಮಳೆಯನ್ನೇ ಸುರಿಸಲಾಗುತ್ತಿದೆ. ಅದರಲ್ಲೂ ತೆಲುಗು ಚಿತ್ರರಂಗದ ಬಗ್ಗೆ ಹಲವು ನಟರು ಬಹಳ ಒಳ್ಳೆಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬಹಳ ವರ್ಷಗಳಿಂದಲೂ ತೆಲುಗು ಚಿತ್ರರಂಗದಲ್ಲಿ ಬಾಲಿವುಡ್ ನಟಿಯರು ಬಂದು ನಟಿಸಿ ಹೋಗುತ್ತಿದ್ದಾರೆ. ಇದೀಗ ತೆಲುಗು ಚಿತ್ರರಂಗದಲ್ಲಿ ನಟಿಸಿರುವ ಬಾಲಿವುಡ್ ನಟಿಯೊಬ್ಬರು, ತೆಲುಗು ಚಿತ್ರರಂಗದಲ್ಲಿ ಆದ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ.
‘ಮಕಡೀ’ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದ ಶ್ವೇತಾ ಬಸು, ತೆಲುಗಿನಲ್ಲಿ ‘ಕೊತ್ತ ಬಂಗಾರು ಲೋಕಂ ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಶಾಲಾ ವಿದ್ಯಾರ್ಥಿಗಳ ಪ್ರೇಮ ಕತೆ ಹೊಂದಿದ್ದ ಈ ಸಿನಿಮಾದಲ್ಲಿ ಶ್ವೇತಾ ಅದ್ಬುತ ಅಭಿನಯ ನೀಡಿದ್ದರು. ಸಿನಿಮಾ ಸೂಪರ್ ಹಿಟ್ ಆಯ್ತು. ಆ ನಂತರವೂ ಶ್ವೇತಾ ಇನ್ನೂ ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸಿದರು. ಆದರೆ ಶ್ವೇತಾಗೆ ತೆಲುಗು ಚಿತ್ರರಂಗದಲ್ಲಿ ಒಳ್ಳೆಯ ಅನುಭವ ಆಗಲಿಲ್ಲವಂತೆ.
ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಶ್ವೇತಾ ಬಸು, ತೆಲುಗು ಚಿತ್ರರಂಗದ ಸೆಟ್ಗಳಲ್ಲಿ ಶ್ವೇತಾ ಬಸು ಪದೇ ಪದೇ ನಿಂದನೆ, ಮೂದಲಿಕೆ ಅನುಭವಿಸಿದ್ದರಂತೆ. ಶ್ವೇತಾ ಬಸು ಹೇಳಿರುವಂತೆ, ‘ನಾನು ಹೆಚ್ಚು ಎತ್ತರ ಇಲ್ಲದ ಕಾರಣ ಪದೇ ಪದೇ ನಾನು ನಿಂದನೆ ಕೇಳಬೇಕಾಗಿತ್ತು, ನಾನು ಕುಳ್ಳ ಇದ್ದೆ ನನ್ನೊಟ್ಟಿಗೆ ನಟಿಸುವ ನಟರು ಎತ್ತರ ಇರುತ್ತಿದ್ದರು’ ಎಂದಿದ್ದಾರೆ ಶ್ವೇತಾ ಬಸು.
ಇದನ್ನೂ ಓದಿ:ಸಿಸಿಎಲ್ಗೂ ಮೊದಲು ಪುನೀತ್ ಸಮಾಧಿಗೆ ಟಾಲಿವುಡ್ ಸೆಲೆಬ್ರಿಟಿಗಳ ಭೇಟಿ
ಮುಂದುವರೆದು, ‘ನನಗೆ ಸರಿಯಾಗಿ ತೆಲುಗು ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೂ ಸಹ ಸಾಕಷ್ಟು ಬೈಸಿಕೊಂಡಿದ್ದೇನೆ. ಒಂದು ಸಿನಿಮಾ ಸೆಟ್ನಲ್ಲಿ ನನ್ನ ಸಹನಟನಿಗೂ ತೆಲುಗು ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಆದರೆ ಚಿತ್ರತಂಡದವರು ನನ್ನನ್ನು ಬೈಯ್ಯುತ್ತಿದ್ದರು, ಆತನಿಗೆ ಏನೂ ಹೇಳುತ್ತಿರಲಿಲ್ಲ. ಒಂದು ತೆಲುಗು ಸಿನಿಮಾದಲ್ಲಿ ಮಾತ್ರ ನಾನು ಈ ಸಮಸ್ಯೆಯನ್ನು ಎದುರಿಸಿದೆ’ ಎಂದಿದ್ದಾರೆ ಶ್ವೇತಾ ಬಸು.
ಶ್ವೇತಾ ಬಸು, ಹಲವಾರು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟ ನಾನಿ ಸೇರಿದಂತೆ ಕೆಲವು ಪ್ರಮುಖ ನಟರೊಟ್ಟಿಗೂ ಶ್ವೇತಾ ನಟಿಸಿದ್ದಾರೆ. ತೆಲುಗು, ತಮಿಳು ಮಾತ್ರವೇ ಅಲ್ಲದೆ ಒಂದು ಬೆಂಗಾಲಿ ಸಿನಿಮಾ ಹಾಗೂ ಹಲವಾರು ಹಿಂದಿ ಸಿನಿಮಾಗಳಲ್ಲಿ ಶ್ವೇತಾ ಬಸು ನಟಿಸಿದ್ದಾರೆ. 2022 ರಲ್ಲಿ ನಟಿಸಿದ್ದ ‘ಇಂಡಿಯಾ ಲಾಕ್ಡೌನ್’ ಅವರ ಕೊನೆಯ ಸಿನಿಮಾ. ಇತ್ತೀಚೆಗೆ ಕೆಲ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. 2014 ರಲ್ಲಿ ಹೈದರಾಬಾದ್ನ ಹೋಟೆಲ್ ಒಂದರಿಂದ ನಟಿ ಶ್ವೇತಾ ಅವರನ್ನು ವ್ಯಭಿಚಾರ ಪ್ರಕರಣದಲ್ಲಿ ಬಂಧಿಸಲಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ