Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಸುಂದರಿಗೆ ಮುಳುವಾಯ್ತು ಮದುವೆ? 16ನೇ ನಟಿ, 18ನೇ ವಯಸ್ಸಿಗೆ ಮದುವೆ, 21ಕ್ಕೆ ಸಾವು

Divya Bharathi: ದಿವ್ಯಾ ಅವರು ಜನಿಸಿದ್ದು 1974ರಲ್ಲಿ. ಅವರಿಗೆ ಚಿತ್ರರಂಗದ ಯಾವುದೇ ಹಿನ್ನೆಲೆ ಇರಲಿಲ್ಲ. ಅವರು 14 ವರ್ಷ ಇದ್ದಾಗ ನಿರ್ಮಾಪಕ ನಂದು ತೊಲಾನಿ ಅವರು ನಟಿಯನ್ನು ಗುರುತಿಸಿದರು. ಇಬ್ಬರೂ ಸಿನಿಮಾ ಮಾಡಬೇಕಿತ್ತು. ಆದರೆ, ಸಿನಿಮಾ ರದ್ದಾಯಿತು. ಆದರೆ, ದಿವ್ಯಾ ಅವರು ಅನೇಕ ನಿರ್ಮಾಪಕರ ಕಣ್ಣು ಕುಕ್ಕಿದರು. 1990ರಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆಗಿನ್ನೂ ಅವರಿಗೆ 16 ವರ್ಷ.  ಯಶಸ್ಸಿನ ಬೆನ್ನಲ್ಲೆ ಅವಸಾನವೂ ಆಗಿ ಹೋದರು.

ಈ ಸುಂದರಿಗೆ ಮುಳುವಾಯ್ತು ಮದುವೆ? 16ನೇ ನಟಿ, 18ನೇ ವಯಸ್ಸಿಗೆ ಮದುವೆ, 21ಕ್ಕೆ ಸಾವು
Divya Bharati
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Feb 18, 2025 | 4:04 PM

ದಿವ್ಯಾ ಓಂ ಪ್ರಕಾಶ್ ಭಾರತಿ ಅವರು ದಿವ್ಯಾ ಭಾರತಿ ಎಂದೇ ಫೇಮಸ್ ಆಗಿದ್ದರು. ಅವರು ಸಣ್ಣ ವಯಸ್ಸಿನಲ್ಲೇ ಬಾಲಿವುಡ್ನಲ್ಲಿ ಮಿಂಚಿದರು. ತಮ್ಮ ಮುಗ್ಧ ನೋಟದಿಂದ ಎಲ್ಲರ ಗಮನ ಸೆಳೆದರು. ಆದರೆ, ಮೂರೇ ವರ್ಷಗಳಲ್ಲಿ ಅವರು ಬಣ್ಣದ ಲೋಕ ತೊರೆಯಬೇಕಾಯಿತು. ಅವರು ಏಪ್ರಿಲ್ 5ರ 1993ರಲ್ಲಿ ಮೃತಪಟ್ಟರು. ಈ ನಟಿ ಬಾಲಿವುಡ್ನ ಖ್ಯಾತ ನಿರ್ಮಾಪಕ ಸಾಜಿದ್ ನಾಡಿಯಾದ್ವಾಲ ಅವರನ್ನು ಮದುವೆ ಆಗಿದ್ದರು.

 ದಿವ್ಯಾ ಅವರು ಜನಿಸಿದ್ದು 1974ರಲ್ಲಿ. ಅವರಿಗೆ ಚಿತ್ರರಂಗದ ಯಾವುದೇ ಹಿನ್ನೆಲೆ ಇರಲಿಲ್ಲ. ಅವರು 14 ವರ್ಷ ಇದ್ದಾಗ ನಿರ್ಮಾಪಕ ನಂದು ತೊಲಾನಿ ಅವರು ನಟಿಯನ್ನು ಗುರುತಿಸಿದರು. ಇಬ್ಬರೂ ಸಿನಿಮಾ ಮಾಡಬೇಕಿತ್ತು. ಆದರೆ, ಸಿನಿಮಾ ರದ್ದಾಯಿತು. ಆದರೆ, ದಿವ್ಯಾ ಅವರು ಅನೇಕ ನಿರ್ಮಾಪಕರ ಕಣ್ಣು ಕುಕ್ಕಿದರು. 1990ರಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆಗಿನ್ನೂ ಅವರಿಗೆ 16 ವರ್ಷ.

ದಕ್ಷಿಣದಲ್ಲಿ ಅವರಿಗೆ ಮೊದಲು ಅವಕಾಶ ಸಿಕ್ಕಿತು. ಅವರು 1992ರಲ್ಲಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ‘ವಿಶ್ವಾತ್ಮ’ ಸಿನಿಮಾದಲ್ಲಿ ಸನ್ನಿ ಡಿಯೋಲ್ ಜೊತೆ ಅವರು ನಟಿಸಿದರು. ಅವರು ಮೂರು ವರ್ಷಗಳಲ್ಲಿ 21 ಸಿನಿಮಾ ಮಾಡಿದರು. 30ಕ್ಕೂ ಅಧಿಕ ಸಿನಿಮಾಗಳು ಜೈಯಲ್ಲಿ ಇದ್ದವು. ಆದರೆ, ಆಗಲೇ ಅವರು ನಿಧನ ಹೊಂದರು.

ಇದನ್ನೂ ಓದಿ:ಬಾಲಿವುಡ್ ಹೀರೋ ಕಾರ್ತಿಕ್ ಆರ್ಯನ್​ಗೆ ಜೋಡಿಯಾದ ಶ್ರೀಲೀಲಾ

ದಿವ್ಯಾ ಅವರ ಎರಡನೇ ಸಿನಿಮಾ ‘ಶೋಲಾ ಔರ್ ಶಬ್ನಮ್’ ಸಿನಿಮಾ. ಗೋವಿಂದ ಅವರು ಈ ಚಿತ್ರದಲ್ಲಿ ನಟಿಸಿದ್ದರು. ಸಾಜಿದ್ ಅವರು ಆಗತಾನೇ ಸ್ವತಂತ್ರವಾಗಿ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದರು. ಆಗ ಸಾಜಿದ್ ಅವರು ಸೆಟ್ಗೆ ‘ಶೋಲಾ ಔರ್ ಶಬ್ನಮ್’ ಸೆಟ್ಗೆ ಭೇಟಿ ನೀಡುತ್ತಾ ಇದ್ದರು. ಅವರಿಗೆ ದಿವ್ಯಾ ಮೇಲೆ ಕಣ್ಣು ಬಿತ್ತು. ಮೊದಲ ನೋಟದಲ್ಲೇ ಲವ್ ಆಯಿತು.

ಆ ಬಳಿಕ ಇಬ್ಬರ ಮಧ್ಯೆ ಪ್ರೀತಿ ಮೂಡಿತು. ಇಬ್ಬರೂ ಸುತ್ತಾಡಿದರು. ಪದೇ ಪದೇ ಭೇಟಿ ಆದರು.  ದಿವ್ಯಾ ಆಗತಾನೇ ವೃತ್ತಿ ಜೀವನ ಆರಂಭಿಸಿದ್ದರು. ಸಾಜಿದ್ ಅವರದ್ದು ಬೇರೆ ಧರ್ಮ. ಹೀಗಾಗಿ, ಇವರ ಮದುವೆಗೆ ವಿರೋಧ ವ್ಯಕ್ತವಾಗುವ ಸೂಚನೆ ಸಿಕ್ಕಿತ್ತು. ನಂತರ 1992ರಲ್ಲಿ ಇವರು ಮದುವೆ ಆದರು. ದಿವ್ಯಾ 18ನೇ ವಯಸ್ಸಿಗೆ ಕಾಲಿಡಲಿ ಎಂದು ಸಾಜಿದ್ ಕಾಯುತ್ತಿದ್ದರು.

1993ರ ಏಪ್ರಿಲ್ 5ರಂದು ದಿವ್ಯಾ ಅವರು ಅಚಾನಕ್ಕಾಗಿ ತಮ್ಮ ನಿವಾಸದಿಂದ ಬಿದ್ದು ಸತ್ತರು. ಇದು ಅನೇಕ ಅನುಮಾಗಳಿಗೆ ಕಾರಣ ಆಯಿತು. ಸಾಜಿದ್ ಅವರೇ ದಿವ್ಯಾನ ಕೊಲೆ ಮಾಡಿದ್ದಾರೆ ಎನ್ನುವ ಆರೋಪವೂ ಕೇಳಿ ಬಂತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ
ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್