‘ದೊಡ್ಡ ಬಜೆಟ್​ ಸಿನಿಮಾಗಳಿಂದ ಲಾಭ ಇಲ್ಲ’; ನಿರ್ಮಾಣ ಸಂಸ್ಥೆ ಮಾರಿದ್ದಕ್ಕೆ ಕಾರಣ ತಿಳಿಸಿದ ಕರಣ್ ಜೋಹರ್

ಕರಣ್ ಜೋಹರ್ ಅವರು ‘ಧರ್ಮ ಪ್ರೊಡಕ್ಷನ್ಸ್’ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಈ ಸಂಸ್ಥೆಯ ಶೇ.50 ಷೇರನ್ನು ಸೇರಂ ಇನ್​ಸ್ಟಿಟ್ಯೂಟ್​ನ ಮುಖ್ಯಸ್ಥ ಅದಾರ್ ಪೂನಾವಾಲಾಗೆ ಮಾರಿದ್ದರು. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

‘ದೊಡ್ಡ ಬಜೆಟ್​ ಸಿನಿಮಾಗಳಿಂದ ಲಾಭ ಇಲ್ಲ’; ನಿರ್ಮಾಣ ಸಂಸ್ಥೆ ಮಾರಿದ್ದಕ್ಕೆ ಕಾರಣ ತಿಳಿಸಿದ ಕರಣ್ ಜೋಹರ್
ಕರಣ್ ಜೋಹರ್
Follow us
ರಾಜೇಶ್ ದುಗ್ಗುಮನೆ
|

Updated on: Nov 16, 2024 | 11:40 AM

ಕರಣ್ ಜೋಹರ್ ಅವರು ತಮ್ಮ ಒಡೆತನದ ಧರ್ಮ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯ ಶೇ.50 ಷೇರನ್ನು ಸೇರಂ ಇನ್​ಸ್ಟಿಟ್ಯೂಟ್​ನ ಮುಖ್ಯಸ್ಥ ಅದಾರ್ ಪೂನಾವಾಲಾಗೆ ಮಾರಿದ್ದರು. ಇದು ಅನೇಕರಿಗೆ ಶಾಕಿಂಗ್ ಎನಿಸಿತ್ತು. ಕರಣ್ ನಿರಂತರವಾಗಿ ನಷ್ಟ ಅನುಭವಿಸಿದ್ದರಿಂದ ಈ ರೀತಿ ಮಾಡಿದರು ಎಂದು ಹೇಳಲಾಗಿತ್ತು. ಈಗ ಈ ನಿರ್ಧಾರದ ಹಿಂದಿನ ಕಾರಣವನ್ನು ಅವರು ಬಿಚ್ಚಿಟ್ಟಿದ್ದಾರೆ.

‘ದೊಡ್ಡ ಸಿನಿಮಾ ನಿರ್ಮಾಣ ಮಾಡುವಾಗ ನಾವು ದೊಡ್ಡ ಸ್ಟುಡಿಯೋಗಳ ಜೊತೆ ಕೈ ಜೋಡಿಸಬೇಕಾಗುತ್ತದೆ. ನಾವು ದೊಡ್ಡ ಹಿಟ್ ಕೊಟ್ಟರೂ ಲಾಭವನ್ನು ಹಂಚಿಕೊಳ್ಳಬೇಕಾಗುತ್ತದೆ. ನಾವು ಬ್ರಹ್ಮಾಸ್ತ್ರ ಸಿನಿಮಾ ಮಾಡಿದೆವು. ಇದಕ್ಕೆ ಬೇರೆ ಸ್ಟುಡಿಯೋದ ಬೆಂಬಲ ಬೇಕಾಯಿತು. ಈ ರೀತಿಯ ಸಿನಿಮಾಗೆ 250-300 ಕೋಟಿ ರೂಪಾಯಿ ಹಾಕಬೇಕಾಗುತ್ತದೆ. ಒಬ್ಬಂಟಿಯಾಗಿ ಅಷ್ಟು ಹಣ ಹಾಕಲು ಸಾಧ್ಯವಿಲ್ಲ’ ಎಂದಿದ್ದಾರೆ ಕರಣ್.

ಸಣ್ಣ ಬಜೆಟ್​ನ ಸಿನಿಮಾಗಳನ್ನು ಮಾಡಿ ಅದು ಯಶಸ್ಸು ಕಂಡರೆ ಬರೋ ಲಾಭ ಹೆಚ್ಚು. ಮುಂದಿನ ದಿನಗಳಲ್ಲಿ ಕರಣ್ ಜೋಹರ್ ಈ ರೀತಿಯ ಸಿನಿಮಾ ನಿರ್ಮಾಣ ಮಾಡಲು ಬಯಸಿದ್ದಾರೆ. ‘ಮಧ್ಯಮ ಬಜೆಟ್​ನ ಸಿನಿಮಾ ಮಾಡಿದರೆ ಲಾಭ ಜಾಸ್ತಿ ಸಿಗುತ್ತದೆ. ನಾವಾಗೇ ಸಂಪೂರ್ಣವಾಗಿ ಹಣ ಹಾಕಬಹುದು. ಅದು ನಮಗೆ ನಿಜವಾಗಿಯೂ ಊಟ ಕೊಡುತ್ತದೆ. ಈ ರೀತಿಯ ಸಿನಿಮಾಗಳಿಂದಲೇ ಹಣ ಬರೋದು’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ನಾವು ಸುಳ್ಳುಬುರುಕರು’; ಬಾಲಿವುಡ್​ನ ಕರಾಳ ಮುಖ ಬಿಚ್ಚಿಟ್ಟ ಕರಣ್ ಜೋಹರ್

ದೊಡ್ಡ ಬಜೆಟ್ ಸಿನಿಮಾ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ ಎಂಬುದು ಅನೇಕರ ನಂಬಿಕೆ. ಆದರೆ, ಆ ನಂಬಿಕೆ ಸುಳ್ಳು ಎಂದಿದ್ದಾರೆ ಕರಣ್ ಹೋಹರ್. ಕರಣ್ ಜೋಹರ್ ನಿರ್ಮಾಣ ಮಾಡಿದ ‘ಬ್ರಹ್ಮಾಸ್ತ್ರ’ 420 ಕೋಟಿ ರೂಪಾಯಿ ಗಳಿಕೆ ಮಾಡಿತ್ತು ನಿಜ. ಆದರೆ, ಚಿತ್ರದ ಬಜೆಟ್ 400 ಕೋಟಿ ರೂಪಾಯಿ ದಾಟಿತ್ತು. ಹೀಗಾಗಿ, ಈ ಸಿನಿಮಾದಿಂದ ಕರಣ್​ಗೆ ಹೆಚ್ಚಿನ ಲಾಭ ಆಗಿಲ್ಲ. ಈ ಕಾರಣದಿಂದಲೇ 50-80 ಕೋಟಿ ರೂಪಾಯಿ ಬಜೆಟ್​ನ ಸಿನಿಮಾ ಮಾಡುವ ಇಂಗಿತವನ್ನು ಅವರು ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ