ಒಟಿಟಿಯಲ್ಲಿ ರಿಲೀಸ್ ಆದ ‘ಮಾರ್ಟಿನ್’ ಸಿನಿಮಾ; ಮತ್ತದೇ ರಿಯಾಕ್ಷನ್ ಕೊಟ್ಟ ಪ್ರೇಕ್ಷಕ
ಧ್ರುವ ಸರ್ಜಾ ಅವರು ‘ಮಾರ್ಟಿನ್’ ಸಿನಿಮಾದಲ್ಲಿ ಅರ್ಜುನ್ ಸಕ್ಸೇನಾ ಹಾಗೂ ಮಾರ್ಟಿನ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ದೊಡ್ಡ ಬಜೆಟ್ನಲ್ಲಿ ಸಿದ್ಧವಾದ ಚಿತ್ರ. ಈ ಸಿನಿಮಾ ಥಿಯೇಟರ್ನಲ್ಲಿ ಮಿಶ್ರಪ್ರತಿಕ್ರಿಯೆ ಪಡೆದಿತ್ತು. ಈ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಂಡಿದೆ.
ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 11ರಂದು ಥಿಯೇಟರ್ನಲ್ಲಿ ಬಿಡುಗಡೆ ಕಂಡಿತ್ತು. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಸಿನಿಮಾ ರಿಲೀಸ್ ಆಗಿತ್ತು. ಈಗ ಈ ಚಿತ್ರ ಒಟಿಟಿಗೆ ಕಾಲಿಟ್ಟಿದೆ. ಹೌದು, ಅಮೆರಿಕ ಹಾಗೂ ಯುನೈಟೆಡ್ ಕಿಂಗ್ಡಮ್ ಭಾಗದಲ್ಲಿ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಈ ಚಿತ್ರ ರೆಂಟ್ಗೆ ಲಭ್ಯವಿದೆ. ಇದರ ಜೊತೆಗೆ ಎಚ್ಡಿ ಪ್ರಿಂಟ್ ಕೂಡ ಆನ್ಲೈನ್ನಲ್ಲಿ ಲೀಕ್ ಆಗಿದೆ.
ಧ್ರುವ ಸರ್ಜಾ ಅವರು ‘ಮಾರ್ಟಿನ್’ ಸಿನಿಮಾದಲ್ಲಿ ಅರ್ಜುನ್ ಸಕ್ಸೇನಾ ಹಾಗೂ ಮಾರ್ಟಿನ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ದೊಡ್ಡ ಬಜೆಟ್ನಲ್ಲಿ ಸಿದ್ಧವಾದ ಚಿತ್ರ. ಈ ಸಿನಿಮಾ ಥಿಯೇಟರ್ನಲ್ಲಿ ಮಿಶ್ರಪ್ರತಿಕ್ರಿಯೆ ಪಡೆದಿತ್ತು. ಈ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಕಂಡಿದೆ. ಶೀಘ್ರವೇ ಭಾರತದ ವೀಕ್ಷಕರಿಗೂ ಇದು ಲಭ್ಯ ಆಗಲಿದೆ.
St:- #Martin
I love taking risks. They feel like a challenge, and I’m so competitive with myself.@DhruvaSarja pic.twitter.com/hEGcxzVotU
— MaDMa𝕏ᴠͥɪͣᴘͫ (@Mad_MaXX_2) November 16, 2024
@AP_Arjun_film Worst cinema of the decade theesav raa 😑😑#Martin
— alphonso_jo (@alphonso_jo) November 16, 2024
#Martin – A Text Book to Upcoming filmmaker’s ❤️🔥
How Can’t be a Movie!🙏
— BAS (@Bas_369) November 16, 2024
‘ಮಾರ್ಟಿನ್’ ಸಿನಿಮಾದಲ್ಲಿ ವೈಭವೀ ಶಾಂಡಿಲ್ಯ, ಅಚ್ಯುತ್ ಕುಮಾರ್, ಸುಕೃತಾ ವಾಘ್ಲೆ, ಚಿಕ್ಕಣ್ಣ, ಮಾಳವಿಕಾ ಅವಿನಾಶ್ ಮೊದಲಾದವರು ನಟಿಸಿದ್ದಾರೆ. ಉದಯ್ ಕೆ. ಮೆಹ್ತಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಗಳಿಕೆಗೂ ಬಜೆಟ್ಗೂ ಅಜಗಜಾಂತರ ವ್ಯತ್ಯಾಸ ಇದೆ.
ಇದನ್ನೂ ಓದಿ: ‘ಮಾರ್ಟಿನ್’ ಚೆನ್ನಾಗಿಲ್ಲ ಎಂದ ಯೂಟ್ಯೂಬರ್ಗೆ ಧ್ರುವ ಅಭಿಮಾನಿಗಳಿಂದ ಬೆದರಿಕೆ
ಎಪಿ ಅರ್ಜುನ್ ಅವರು ‘ಮಾರ್ಟಿನ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅವರ ನಿರ್ಮಾಪಕರಿಗೆ ಮೋಸ ಮಾಡಿರುವ ಆರೋಪ ಕೂಡ ಕೇಳಿ ಬಂದಿತ್ತು. ಎಪಿ ಅರ್ಜುನ್ ಅವರು ಈ ಚಿತ್ರದ ನಿರ್ದೇಶನದಿಂದ ಸಾಕಷ್ಟು ಟೀಕೆ ಎದುರಿಸಬೇಕಾಯಿತು. ಒಟಿಟಿಯಲ್ಲಿ ಸಿನಿಮಾ ನೋಡಿದವರೂ ನೆಗೆಟಿವ್ ಟಾಕ್ ಶುರುವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:10 pm, Sat, 16 November 24