‘ನಾವು ಸುಳ್ಳುಬುರುಕರು’; ಬಾಲಿವುಡ್​ನ ಕರಾಳ ಮುಖ ಬಿಚ್ಚಿಟ್ಟ ಕರಣ್ ಜೋಹರ್

ಯಾವ ಸಿನಿಮಾ ಗೆದ್ದಿದೆ ಎಂದು ಹೇಳುವುದು ಈಗ ಸುಲಭ. ಸಿನಿಮಾದ ಕಲೆಕ್ಷನ್​ ನೋಡಿದರೆ ಸಾಕಾಗುತ್ತದೆ. ಆದರೆ, ಸಿನಿಮಾ ಗೆದ್ದಿದೆ ಎಂದು ಹೇಳಿಕೊಳ್ಳಬೇಕು ಎನ್ನುವ ಕಾರಣಕ್ಕೆ, ಮುಂದೆ ಆಫರ್ ಸಿಗಬೇಕು ಎನ್ನುವ ಕಾರಣಕ್ಕೆ ಸುಳ್ಳು ಲೆಕ್ಕ ನೀಡಲಾಗುತ್ತಿದೆ ಎಂಬುದನ್ನು ಕರಣ್ ಜೋಹರ್ ಒಪ್ಪಿಕೊಂಡಿದ್ದಾರೆ.

‘ನಾವು ಸುಳ್ಳುಬುರುಕರು’; ಬಾಲಿವುಡ್​ನ ಕರಾಳ ಮುಖ ಬಿಚ್ಚಿಟ್ಟ ಕರಣ್ ಜೋಹರ್
ಕರಣ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Oct 24, 2024 | 1:16 PM

ಕರಣ್ ಜೋಹರ್ ಅವರು ಇತ್ತೀಚೆಗೆ ಮಾತನಾಡುವ ರೀತಿ ಬದಲಾಗಿದೆ. ಬಾಲಿವುಡ್​ನ ಗುಟ್ಟುಗಳನ್ನು ಕಾಯ್ದುಕೊಳ್ಳುತ್ತಾ ಬರುತ್ತಿದ್ದ ಅವರು ಇತ್ತೀಚೆಗೆ ಅದೆಲ್ಲವನ್ನೂ ಹೊರಹಾಕುತ್ತಿದ್ದಾರೆ ಎಂದು ಕೆಲವರಿಗೆ ಅನಿಸಿದೆ. ಅದರಲ್ಲೂ ಬಾಲಿವುಡ್​ನಲ್ಲಿ ನಡೆಯುವ ಬಾಕ್ಸ್ ಆಫೀಸ್ ಫೇಕ್ ಲೆಕ್ಕಗಳ ಬಗ್ಗೆ ಓಪನ್ ಆಗಿ ಕರಣ್ ಜೋಹರ್ ಹೇಳಿಕೊಂಡಿದ್ದಾರೆ. ಇದು ಅನೇಕರಿಗೆ ಶಾಕಿಂಗ್ ಅನಿಸಿದೆ. ‘ಸತ್ಯ ಯಾವಾಗಲೂ ಕಹಿಯೇ’ ಎಂದು ಕೆಲವರು ಹೇಳಿದ್ದಾರೆ.

ಒಂದು ಸಿನಿಮಾ ಹಿಟ್ ಆಗಿದೆ ಅಥವಾ ಸೋತಿದೆ ಎಂಬುದು ನಿರ್ಧಾರ ಆಗುವುದು ಸಿನಿಮಾದ ಕಲೆಕ್ಷನ್ ಆಧರಿಸಿಯೇ. ಇತ್ತೀಚೆಗಂತೂ ಅದು ಹೆಚ್ಚಾಗಿದೆ. ಯಾವ ಸಿನಿಮಾ ಗೆದ್ದಿದೆ ಎಂದು ಹೇಳುವುದು ಈಗ ಸುಲಭ. ಆದರೆ, ಸಿನಿಮಾ ಗೆದ್ದಿದೆ ಎಂದು ಹೇಳಿಕೊಳ್ಳಬೇಕು ಎನ್ನುವ ಕಾರಣಕ್ಕೆ, ಮುಂದೆ ಆಫರ್ ಸಿಗಬೇಕು ಎನ್ನುವ ಕಾರಣಕ್ಕೆ ಸುಳ್ಳು ಲೆಕ್ಕ ನೀಡಲಾಗುತ್ತಿದೆ ಎಂಬುದನ್ನು ಕರಣ್ ಜೋಹರ್ ಒಪ್ಪಿಕೊಂಡಿದ್ದಾರೆ.

‘ಬಾಕ್ಸ್ ಆಫೀಸ್ ಲೆಕ್ಕ ಬದಲಿಸಲಾಗುತ್ತದೆ. ಇದು ನಿಜ’ ಎಂದಿದ್ದಾರೆ ಕರಣ್. ಕಲಾವಿದರ ಅವರ ಟ್ಯಾಲೆಂಟ್ ನೋಡಿ ಆಯ್ಕೆ ಮಾಡಿಕೊಳ್ಳಲಾಗುತ್ತದೆಯೇ ಎಂದು ಕೇಳಲಾಗಿದೆ. ಇದಕ್ಕೆ ಇಲ್ಲ ಎನ್ನುವ ಉತ್ತರವನ್ನು ಅವರು ಕೊಟ್ಟಿದ್ದಾರೆ. ‘ಬಾಕ್ಸ್ ಆಫೀಸ್​ ಗಳಿಕೆ, ಜನಪ್ರಿಯತೆ ಮುಖ್ಯವಾಗುತ್ತದೆ. ನನಗಿಂತ ಹಲವು ಟ್ಯಾಲೆಂಟೆಡ್ ನಿರ್ದೇಶಕರು ಇದ್ದಾರೆ. ಆದರೆ, ಅವರಿಗೆಲ್ಲ ಅವಕಾಶ ಸಿಗಲ್ಲ. ಆ ಬಗ್ಗೆ ನನಗೆ ಖಚಿತತೆ ಇದೆ. ನಾನು ಸ್ಟಾರ್​ಗಳ ಬಗ್ಗೆ ಮಾತನಾಡಲ್ಲ. ನನಗೆ ಆ ಸವಲತ್ತು ಸಿಕ್ಕಿದೆ ಎಂಬ ಖುಷಿ ಇದೆ’ ಎಂದಿದ್ದಾರೆ ಅವರು.

‘ನಾವು ಸುಳ್ಳು ಬುರುಕರು, ನಾವು ದೊಡ್ಡ ಸುಳ್ಳುಬುರುಕರು’ ಎಂದು ಅವರು ಹೇಳಿದ್ದಾರೆ. ಕರಣ್ ಜೋಹರ್ ಅವರು ಇತ್ತೀಚೆಗೆ ಆಲಿಯಾ ಭಟ್ ಜೊತೆ ಸೇರಿ ‘ಜಿಗ್ರಾ’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದರು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸಾಧಾರಣ ಗಳಿಕೆ ಮಾಡಿತು.

ಇದನ್ನೂ ಓದಿ: ಧರ್ಮ ಪ್ರೊಡಕ್ಷನ್ ಮಾರಾಟ: ಕರಣ್ ಜೋಹರ್ ಕೈ ಹಿಡಿದ ಕೋವಿಶೀಲ್ಡ್ 

ಕರಣ್ ಜೋಹರ್ ಅವರು ಈಗ ತಮ್ಮ ನಿರ್ಮಾಣ ಸಂಸ್ಥೆ ‘ಧರ್ಮ ಪ್ರೊಡಕ್ಷನ್ಸ್’ ಷೇರುಗಳನ್ನು ಮಾರುತ್ತಿದ್ದಾರೆ. ಸೇರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲ್ಲಾ ಅವರು ಈ ಷೇರುಗಳನ್ನು ಖರೀದಿ ಮಾಡುತ್ತಿದ್ದಾರೆ. ಶೇ.50 ಷೇರು ಅವರ ಕೈ ಸೇರುತ್ತಿದೆ. ಕರಣ್ ಅವರು ಯಾಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನೋದು ಇನ್ನೂ ರಿವೀಲ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:15 pm, Thu, 24 October 24