AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮ ಪ್ರೊಡಕ್ಷನ್ ಮಾರಾಟ: ಕರಣ್ ಜೋಹರ್ ಕೈ ಹಿಡಿದ ಕೋವಿಶೀಲ್ಡ್

ಕರಣ್ ಜೋಹರ್​ರ ತಂದೆ ಯಶ್ ಜೋಹರ್ ಕಟ್ಟಿ ಬೆಳೆಸಿದ್ದ ಧರ್ಮಾ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯನ್ನು ಅನ್ನು ಕರಣ್ ಜೋಹರ್ ಮಾರಾಟಕ್ಕಿಟ್ಟಿದ್ದಾರೆ. ಭಾರತದ ಜನಪ್ರಿಯ ಮತ್ತು ಯಶಸ್ವಿ ಉದ್ಯಮಿ ಆಧಾರ್ ಪೂನಾವಾಲ ಧರ್ಮಾ ಪ್ರೊಡಕ್ಷನ್​ನ ಅರ್ಧ ಭಾಗವನ್ನು ಖರೀದಿ ಮಾಡುತ್ತಿದೆ.

ಧರ್ಮ ಪ್ರೊಡಕ್ಷನ್ ಮಾರಾಟ: ಕರಣ್ ಜೋಹರ್ ಕೈ ಹಿಡಿದ ಕೋವಿಶೀಲ್ಡ್
ಮಂಜುನಾಥ ಸಿ.
|

Updated on:Oct 22, 2024 | 12:23 PM

Share

ಕರಣ್ ಜೋಹರ್ ಬಾಲಿವುಡ್​ನ ಜನಪ್ರಿಯ ನಿರ್ಮಾಪಕ. ಅವರ ತಂದೆ ಯಶ್ ಜೋಹರ್ ಸಹ ಬಾಲಿವುಡ್​ನ ದಿಗ್ಗಜ ನಿರ್ಮಾಪಕರು. ಅವರು ಸ್ಥಾಪಿಸಿದ್ದ ಧರ್ಮ ಪ್ರೊಡಕ್ಷನ್ಸ್ ಬಾಲಿವುಡ್​ನ ಹಳೆಯ ಮತ್ತು ಗೌರವಾನ್ವಿತ ನಿರ್ಮಾಣ ಸಂಸ್ಥೆ. ಭಾರತೀಯ ಚಿತ್ರರಂಗಕ್ಕೆ ಹಲವು ಅತ್ಯುತ್ತಮ ಸಿನಿಮಾಗಳನ್ನು 45 ವರ್ಷಗಳಿಂದಲೂ ನೀಡುತ್ತಾ ಬಂದಿದೆ. ಧರ್ಮಾ ಪ್ರೊಡಕ್ಷನ್​ ಅತ್ಯುತ್ತಮ ಸಿನಿಮಾಗಳನ್ನು ನೀಡುತ್ತಿರುವ ಜೊತೆಗೆ ಹಲವು ಅತ್ಯುತ್ತಮ ನಟ-ನಟಿ, ನಿರ್ದೇಶಕರನ್ನು ಚಿತ್ರರಂಗಕ್ಕೆ ನೀಡಿದೆ. ಯಶ್ ಜೋಹರ್ ಅಗಲಿಕೆ ಬಳಿಕ ಅವರ ಪುತ್ರ ಕರಣ್ ಜೋಹರ್ ಧರ್ಮಾ ಪ್ರೊಡಕ್ಷನ್ಸ್ ಅನ್ನು ನಡೆಸುತ್ತಾ ಬಂದಿದ್ದರು. ಆದರೆ ಈಗ ಕರಣ್ ತಮ್ಮ ತಂದೆ ಕಟ್ಟಿ ಬೆಳೆಸಿದ್ದ ಸಂಸ್ಥೆಯನ್ನು ಮಾರಾಟಕ್ಕಿದ್ದಾರೆ. ಭಾರತದ ಶ್ರೀಮಂತ ಉದ್ಯಮಿಯೊಬ್ಬರು ಖರೀದಿಗೆ ಮುಂದಾಗಿದ್ದಾರೆ.

ಧರ್ಮಾ ಪ್ರೊಡಕ್ಷನ್ ಅನ್ನು ಕರಣ್ ಜೊಹರ್ ಮಾರಾಟ ಮಾಡುತ್ತಿದ್ದು, ನಿರ್ಮಾಣ ಸಂಸ್ಥೆಯ 50% ಅಂದರೆ ಬರೋಬ್ಬರಿ ಅರ್ಧ ಭಾಗವನ್ನು ಸೀರಮ್ ಇನ್​ಸ್ಟಿಟ್ಯೂಪ್ ಆಫ್ ಇಂಡಿಯಾದ ಸಿಇಓ ಆಗಿರುವ ಆಧಾರ್ ಪೂನಾವಾಲಾ ಖರೀದಿ ಮಾಡಲಿದ್ದಾರೆ. ಧರ್ಮಾ ಪ್ರೊಡಕ್ಷನ್​ನ ಒಟ್ಟು ಮೌಲ್ಯ 2000 ಕೋಟಿ ಎಂದು ಅಂದಾಜಿಸಲಾಗಿದ್ದು, ಅದರಲ್ಲಿ ಅರ್ಧ ಭಾಗವನ್ನು 1000 ಕೋಟಿ ರೂಪಾಯಿ ಹಣ ನೀಡಿ ಖರೀದಿ ಮಾಡುತ್ತಿದ್ದಾರೆ ಆಧಾರ್ ಪೂನಾವಾಲ. ಕೋವಿಡ್ ಸಮಯದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ನಿರ್ಮಾಣ ಮಾಡಿ ಮಾರಾಟ ಮಾಡಿದ್ದರು ಆಧಾರ್ ಪೂನಾವಾಲ.

ಇದನ್ನೂ ಓದಿ:ಕರಣ್ ಜೋಹರ್ ಸಿನಿಮಾ ಹೆಸರು ಕೇಳಿ ಬೈದು ಕಳಿಸಿದ್ದ ಜಾವೇದ್ ಅಖ್ತರ್

‘ನಾವು ಧರ್ಮಾ ಪ್ರೊಡಕ್ಷನ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಭರವಸೆ ಹೊಂದಿದ್ದೇವೆ’ ಎಂದು ಆಧಾರ್ ಪೂನಾವಾಲ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಧರ್ಮಾ ಪ್ರೊಡಕ್ಷನ್​ನ ಬಾಕಿ ಅರ್ಧ ಭಾಗವನ್ನು ಕರಣ್ ಜೋಹರ್ ತಮ್ಮ ಬಳಿಯೇ ಇಟ್ಟುಕೊಳ್ಳಲಿದ್ದಾರೆ. ಮಾತ್ರವಲ್ಲದೆ ಧರ್ಮಾ ಪ್ರೊಡಕ್ಷನ್ ಸಂಸ್ಥೆಯ ಎಕ್ಸಿಕ್ಯೂಟಿವ್ ಚೇರ್​ಮನ್ ಸ್ಥಾನ ಸಹ ಅವರ ಬಳಿಯೇ ಇರಲಿದೆ. ‘ಈ ಪಾಲುದಾರಿಕೆಯು ಅತ್ಯುತ್ತಮವಾಗಿದ್ದು, ಭಾವನಾತ್ಮಕ ಕಥೆ ಹೇಳುವ ಸಾಮರ್ಥ್ಯ ಮತ್ತು ವ್ಯವಹಾರ ತಂತ್ರಗಳ ಪರಿಪೂರ್ಣ ಮಿಶ್ರಣವನ್ನು ಪ್ರತಿನಿಧಿಸುತ್ತದೆ. ನಮ್ಮ ಸಂಸ್ಕೃತಿಯನ್ನು ಗೌರವಿಸುತ್ತಾ ಆಧುನಿಕ ಶೈಲಿನ ಕತೆಗಳನ್ನು ಹೇಳುವ ಪ್ರಯತ್ನ ಮಾಡಲಿದ್ದೇವೆ’ ಎಂದು ಆಧಾರ್ ಪೂನಾವಾಲ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಧರ್ಮಾ ಪ್ರೊಡಕ್ಷನ್ ಅನ್ನು ಕರಣ್ ಜೋಹರ್ ತಂದೆ ಯಶ್ ಜೋಹರ್ 1974 ರಲ್ಲಿ ನಿರ್ಮಾಣ ಮಾಡಿದರು. 1980 ರಲ್ಲಿ ಬಿಡುಗಡೆ ಆದ ‘ದೋಸ್ತಾನ’ ಸಿನಿಮಾ ಮೂಲಕ ಸಿನಿಮಾ ನಿರ್ಮಾಣ ಆರಂಭಿಸಿದ ಯಶ್ ಜೋಹರ್ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. 2004 ರಲ್ಲಿ ಯಶ್ ಜೋಹರ್ ನಿಧನ ಹೊಂದಿದ ಬಳಿಕ ಕರಣ್ ಜೋಹರ್ ಧರ್ಮಾ ಪ್ರೊಡಕ್ಷನ್ ಅನ್ನು ಮುಂದುವರೆಸಿಕೊಂಡು ಬರುತ್ತಿದ್ದರು. ಕರಣ್ ಸಹ ವೃತ್ತಿಪರತೆಯಿಂದಲೇ ಧರ್ಮಾ ಪ್ರೊಡಕ್ಷನ್ ಅನ್ನು ಬೆಳೆಸುತ್ತಿದ್ದರು. ಆದರೆ ಈಗ ನಿರ್ಮಾಣ ಸಂಸ್ಥೆಯ ಅರ್ಧ ಭಾಗವನ್ನು ಸೀರಮ್​ ಇನ್​ಸ್ಟಿಟ್ಯೂಟ್​ಗೆ ಮಾರಾಟ ಮಾಡಿದ್ದಾರೆ. ಅಸಲಿಗೆ ಕರಣ್ ಬಳಿ ಧರ್ಮಾ ಪ್ರೊಡಕ್ಷನ್​​ನ 90.70 ಭಾಗವಷ್ಟೆ ಇತ್ತು, ಉಳಿದ 9.30 ಭಾಗ ಕರಣ್​ರ ತಾಯಿ ಹೀರೂ ಜೋಹರ್ ಬಳಿ ಇತ್ತು. ಆದರೆ ಹೀರೂ ಜೋಹರ್ ತಮ್ಮ ಭಾಗವನ್ನು ಮಗನಿಗೆ ವರ್ಗಾವಣೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:22 pm, Tue, 22 October 24

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ