Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿಕಂದರ್’ ಚಿತ್ರದಲ್ಲಿ ಹಳೇ ಕಥೆಗೆ ಹೊಸ ಮಸಾಲೆ ಹಾಕಿದ್ರಾ ಸ್ಟಾರ್ ನಿರ್ದೇಶಕ? ಸಿಕ್ತು ಸ್ಪಷ್ಟನೆ

‘ಘಜಿನಿ’ ಸಿನಿಮಾ ಮೂಲಕ ಬಾಲಿವುಡ್​ನಲ್ಲಿ ದೊಡ್ಡ ಸಕ್ಸಸ್ ಕಂಡವರು ನಿರ್ದೇಶಕ ಎ.ಆರ್​. ಮುರುಗದಾಸ್. ಈಗ ಅವರು ಹಿಂದಿಯ ‘ಸಿಕಂದರ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಸಲ್ಮಾನ್ ಖಾನ್ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಸಿನಿಮಾದ ಕಥೆ ಬಗ್ಗೆ ಜನರಿಗೆ ಇದ್ದ ಒಂದು ಅನುಮಾನ ಈಗ ಪರಿಹಾರ ಆಗಿದೆ.

‘ಸಿಕಂದರ್’ ಚಿತ್ರದಲ್ಲಿ ಹಳೇ ಕಥೆಗೆ ಹೊಸ ಮಸಾಲೆ ಹಾಕಿದ್ರಾ ಸ್ಟಾರ್ ನಿರ್ದೇಶಕ? ಸಿಕ್ತು ಸ್ಪಷ್ಟನೆ
AR Murugadoss, Salman Khan
Follow us
ಮದನ್​ ಕುಮಾರ್​
|

Updated on: Mar 09, 2025 | 6:57 PM

ಕಾಲಿವುಡ್ ನಿರ್ದೇಶಕ ಎ.ಆರ್​. ಮುರುಗದಾಸ್ ಅವರಿಗೆ ಬಾಲಿವುಡ್​ನಲ್ಲೂ ಬೇಡಿಕೆ ಇದೆ. ಈಗ ಅವರು ಸಲ್ಮಾನ್ ಖಾನ್ (Salman Khan) ಜೊತೆ ‘ಸಿಕಂದರ್’ (Sikandar) ಸಿನಿಮಾ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಟೀಸರ್​ ಬಿಡುಗಡೆ ಆಯಿತು. ಆ ಟೀಸರ್ ನೋಡಿದ ಬಳಿಕ ಅನೇಕರು ಒಂದು ಅನುಮಾನ ವ್ಯಕ್ತಪಡಿಸಿದರು. ‘ಸಿಕಂದರ್’ ಸಿನಿಮಾದಲ್ಲಿ ಎ.ಆರ್​. ಮುರುಗದಾಸ್ ಅವರು ಯಾವುದೋ ಹಳೇ ಕಥೆಯನ್ನೇ ತೋರಿಸಲಿದ್ದಾರೆ ಎಂಬ ಶಂಕೆ ಮೂಡಿತು. ಆದರೆ ಆ ಅನುಮಾನಕ್ಕೆ ಈಗ ಸ್ವತಃ ಎ.ಆರ್​. ಮುರುಗದಾಸ್ ಅವರು ಸ್ಪಷ್ಟನೆ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

2018ರಲ್ಲಿ ಎ.ಆರ್. ಮುರುಗದಾಸ್ ಅವರು ‘ಸರ್ಕಾರ್’ ಸಿನಿಮಾ ಮಾಡಿದ್ದರು. ಆ ಸಿನಿಮಾದಲ್ಲಿ ದಳಪತಿ ವಿಜಯ್ ನಟಿಸಿದ್ದರು. ಬಾಕ್ಸ್ ಆಫೀಸ್​ನಲ್ಲಿ ‘ಸರ್ಕಾರ್’ ಚಿತ್ರಕ್ಕೆ ಸಾಧಾರಣ ಗಳಿಕೆ ಆಗಿತ್ತು. ಈಗ ಅದೇ ಸಿನಿಮಾವನ್ನು ಎ.ಆರ್. ಮುರುಗದಾಸ್ ಅವರು ‘ಸಿಕಂದರ್’ ಹೆಸರಿನಲ್ಲಿ ರಿಮೇಕ್ ಮಾಡಿರಬಹುದು ಎಂಬುದು ಕೆಲವರ ಅನುಮಾನ ಆಗಿತ್ತು. ಆದರೆ ಅದನ್ನು ಮುರುಗದಾಸ್ ಅಲ್ಲಗಳೆದಿದ್ದಾರೆ.

ಒಂದುವೇಳೆ ಎ.ಆರ್​. ಮುರುಗದಾಸ್ ಅವರು ‘ಸರ್ಕಾರ್’ ಸಿನಿಮಾದ ಕಥೆಗೆ ಹೊಸ ಮಸಾಲೆ ಸೇರಿಸಿ ‘ಸಿಕಂದರ್’ ಸಿನಿಮಾ ಮಾಡಿದ್ದರೆ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಖಂಡಿತಾ ನಿರಾಸೆ ಆಗುತ್ತದೆ. ಆದರೆ ಆ ರೀತಿ ಏನಿಲ್ಲ ಎಂದು ಮುರುಗದಾಸ್ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ. ‘ಸಿಕಂದರ್’ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಸಲುವಾಗಿಯೇ ತಾವು ಹೊಸ ಕಥೆ ಬರೆದಿರುವುದಾಗಿ ಮುರುಗದಾಸ್ ಅವರು ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ.

ಇದನ್ನೂ ಓದಿ
Image
ಸಲ್ಲು ಜೊತೆ ಪ್ರೇಮ, ಇಬ್ಬರು ಮಕ್ಕಳ ತಂದೆಯ ಜೊತೆ ವಿವಾಹ, ಆ ಬಳಿಕ ವಿಚ್ಛೇದನ
Image
ಸಿನಿಮಾ ಕೈಬಿಟ್ಟು ಸಲ್ಮಾನ್ ಖಾನ್​ಗೆ ಕ್ಷಮೆ ಕೇಳಿದ ಅಟ್ಲಿ; ರಾಂಗ್ ಆದ ನಟ?
Image
ದಕ್ಷಿಣದ ನಿರ್ದೇಶಕನ ಮೇಲೆ ಉರಿದು ಬಿದ್ದ ಸಲ್ಮಾನ್ ಖಾನ್ ಅಭಿಮಾನಿಗಳು, ಕಾರಣ?
Image
ಸಲ್ಮಾನ್ ಖಾನ್​ಗೆ ಬಂದಿರಲಿಲ್ಲ ಆಫರ್; ಜೀವನ ಬದಲಾಯಿಸಿದ ವ್ಯಕ್ತಿ ಇವರು

ಇದನ್ನೂ ಓದಿ: ‘ಸಿಕಂದರ್’ ಚಿತ್ರಕ್ಕಾಗಿ ಸಲ್ಮಾನ್ ಖಾನ್ ಪಡೆದ ಸಂಭಾವನೆ ಇಷ್ಟೊಂದಾ?

ಈದ್ ಹಬ್ಬದ ಪ್ರಯುಕ್ತ ಮಾರ್ಚ್​ ಕೊನೇ ವಾರದಲ್ಲಿ ‘ಸಿಕಂದರ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈಗಾಗಲೇ ‘ಛಾವ’ ಸಿನಿಮಾ ಮೂಲಕ ಭಾರಿ ಸಕ್ಸಸ್ ಕಂಡಿರುವ ರಶ್ಮಿಕಾ ಅವರು ಇನ್ನೊಂದು ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ. ಸಾಜಿದ್ ನಾಡಿಯದ್ವಾಲ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.