ಜಾಕ್ವೆಲಿನ್ ಫರ್ನಾಂಡಿಸ್ ಹಿನ್ನೆಲೆ ಎಷ್ಟು ಕಾಂಪ್ಲಿಕೇಟ್ ಆಗಿದೆ ನೋಡಿ
Jacqueline Fernandez: ‘ವಿಕ್ರಾಂತ್ ರೋಣ’ ಸಿನಿಮಾದ ರಕ್ಕಮ್ಮ ಹಾಡಿಗೆ ಸಖತ್ ಸ್ಟೆಪ್ಪು ಹಾಕಿರುವ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ಮೂಲತಃ ಭಾರತದವರಲ್ಲ. ಬಾಲಿವುಡ್ನಲ್ಲಿ ಗಟ್ಟಿಯಾಗಿ ನೆಲೆ ಊರಿದ್ದಾರಾದರೂ ಇವರ ಮೂಲ ಭಾರತವಲ್ಲ. ಅಸಲಿಗೆ ಜಾಕ್ವೆಲಿನ್ ಫರ್ನಾಂಡೀಸ್ ನೆರೆಯ ಶ್ರೀಲಂಕಾದ ನಾಗರೀಕತ್ವ ಹೊಂದಿದ್ದಾರೆ. ಹಾಗೆಂದು ಅವರು ಶ್ರೀಲಂಕಾದವರೂ ಸಹ ಅಲ್ಲ. ಅವರ ಹಿನ್ನೆಲೆಯ ಬಗ್ಗೆ ಮಾಹಿತಿ ಇಲ್ಲಿದೆ.

ನಟಿ ಜಾಕ್ವೆಲಿನ್ ಫರ್ನಾಂಡಿಸ್ (jacqueline fernandez) ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರು ಬಾಲಿವುಡ್ನ ಬೇಡಿಕೆಯ ನಟಿಯರಲ್ಲಿ ಒಬ್ಬರು. ಅವರ ಹಿನ್ನೆಲೆ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಅವರು ಭಾರತದವರು ಎಂದೇ ಅನೇಕರು ಭಾವಿಸಿದ್ದಾರೆ. ಆದರೆ, ಅವರು ಭಾರತದ ನಾಗರಿಕತ್ವ ಹೊಂದೇ ಇಲ್ಲ. ಅವರು ಶ್ರೀಲಂಕಾದ ನಾಗರಿಕತ್ವ ಹೊಂದಿದ್ದಾರೆ. ಆದರೆ, ಅವರು ಹುಟ್ಟಿದ್ದು ಶ್ರೀಲಂಕಾದಲ್ಲಿ ಅಲ್ಲ. ಈ ರೀತಿಯ ಸಾಕಷ್ಟು ಕಾಂಪ್ಲಿಕೇಷನ್ ಅವರ ಹಿನ್ನೆಲೆಯಲ್ಲಿ ಇದೆ. ಆ ಬಗ್ಗೆ ಇಲ್ಲಿದೆ ವಿವರ.
ನಟಿ ಜಾಕ್ವೆಲಿನ್ ಅವರಿಗೆ ಬಾಲಿವುಡ್ನಲ್ಲಿ ಭರ್ಜರಿ ಬೇಡಿಕೆ ಇದೆ. ಅವರು ಚೆನ್ನಾಗಿ ಡ್ಯಾನ್ಸ್ ಕೂಡ ಮಾಡುತ್ತಾರೆ. ಈ ಕಾರಣದಿಂದಲೇ ‘ವಿಕ್ರಾಂತ್ ರೋಣ’ ಚಿತ್ರಕ್ಕಾಗಿ ಅವರಿಗೆ ಆಹ್ವಾನ ನೀಡಲಾಯಿತು. ಈ ಚಿತ್ರದ ‘ರುಕ್ಕಮ್ಮ..’ ಹಾಡಿಗೆ ಡ್ಯಾನ್ಸ್ ಮಾಡಿ ಗಮನ ಸೆಳೆದರು. ಜಾಕ್ವೆಲಿನ್ ಫರ್ನಾಂಡಿಸ್ ಅವರ ಹಿನ್ನೆಲೆ ಬಗ್ಗೆ ಈ ಮೊದಲು ವರುಣ್ ಧವನ್ ಮಾತನಾಡಿದ್ದರು.
ಜಾಕ್ವೆಲಿನ್ ಹುಟ್ಟಿದ್ದು ಬಹರೇನ್ನಲ್ಲಿ. ಆ ಬಳಿಕ ಅವರು ಆಸ್ಟ್ರೇಲಿಯಾದಲ್ಲಿ ಶಿಕ್ಷಣ ಪಡೆದರು. ಜಾಕ್ವೆಲಿನ್ ಫರ್ನಾಂಡಿಸ್ ತಾಯಿ ಮಲೇಷಿಯಾದವರು. ತಂದೆ ಶ್ರೀಲಂಕಾದವರು. ಶ್ರೀಲಂಕಾದಲ್ಲಿ ಜಾಕ್ವೆಲಿನ್ ಅವರು ಮನೆ ಹೊಂದಿದ್ದಾರೆ. ಈ ಕಾರಣಕ್ಕೆ ಜಾಕ್ವೆಲಿನ್ ಅವರು ಶ್ರೀಲಂಕಾದವರು ಎಂದು ಎನಿಸಿಕೊಂಡಿದ್ದಾರೆ ಅಷ್ಟೇ. ಸದ್ಯ ಅವರು ಭಾರತದಲ್ಲಿ ವಾಸವಾಗಿದ್ದಾರೆ. ಇಲ್ಲಿ ಅವರು ಯಶಸ್ಸು ಕಂಡು ಕೊಂಡಿದ್ದಾರೆ. ಬಾಲಿವುಡ್ನಲ್ಲಿ ಅವರಿಗೆ ಭರ್ಜರಿ ಬೇಡಿಕೆ ಇದೆ.
ಇದನ್ನೂ ಓದಿ:ಗೊಂಬೆಯಂತೆ ಕಾಣಿಸಿದ ಶ್ರೀಲಂಕಾ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್
ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಬಹುಬೇಡಿಕೆ ಇದೆ. ಅವರು ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆ ಅವರು ನಂಟು ಹೊಂದಿದ ಆರೋಪದ ಮೇಲೆ ಬಂಧನಕ್ಕೆ ಒಳಗಾದರು. ಇದರಿಂದ ಅವರು ತೊಂದರೆ ಅನುಭವಿಸಿದ್ದಾರೆ.
ಜಾಕ್ವೆಲಿನ್ ಫರ್ನಾಂಡಿಸ್ ಅವರು ‘ವೆಲ್ಕಮ್ ಟು ದಿ ಜಂಗಲ್’ ಹಾಗೂ ‘ಹೌಸ್ಫುಲ್ 5’ ಚಿತ್ರಗಳಲ್ಲಿ ನಟಿಸುತ್ತಾ ಇದ್ದಾರೆ. ಎರಡೂ ಸಿನಿಮಾಗಳಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



