AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನಲ್ಲಿ ಅಚ್ಚರಿಯ ಬೆಳವಣಿಗೆ; ಕರಣ್ ಜೋಹರ್​ಗೆ ಸಿನಿಮಾ ಆಫರ್ ಕೊಟ್ಟ ಕಂಗನಾ  

ಕಂಗನಾ ರಣಾವತ್ ಅವರು ತಮ್ಮ ‘ಎಮರ್ಜೆನ್ಸಿ’ ಚಿತ್ರದ ಪ್ರಚಾರದ ವೇಳೆ ಕರಣ್ ಜೋಹರ್ ಅವರಿಗೆ ಸಿನಿಮಾದಲ್ಲಿ ಪಾತ್ರ ನೀಡುವುದಾಗಿ ಹೇಳಿದ್ದಾರೆ. ಇದು ಇಬ್ಬರ ನಡುವಿನ ಹಳೆಯ ವೈಷಮ್ಯವನ್ನು ಮತ್ತೆ ಜ್ಞಾಪಿಸಿದೆ. 2017ರಲ್ಲಿ ‘ಕಾಫಿ ವಿತ್ ಕರಣ್’ಶೋನಲ್ಲಿ ಕರಣ್ ವಿರುದ್ಧ ಕಂಗನಾ ಹರಿಹಾಯ್ದಿದ್ದರು. ಈಗ ‘ಎಮರ್ಜೆನ್ಸಿ’ ಜನವರಿ 17ರಂದು ಬಿಡುಗಡೆಯಾಗಲಿದೆ.

ಬಾಲಿವುಡ್​ನಲ್ಲಿ ಅಚ್ಚರಿಯ ಬೆಳವಣಿಗೆ; ಕರಣ್ ಜೋಹರ್​ಗೆ ಸಿನಿಮಾ ಆಫರ್ ಕೊಟ್ಟ ಕಂಗನಾ  
ಕಂಗನಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 11, 2025 | 8:52 AM

Share

ಕಂಗನಾ ರಣಾವತ್ ಅವರು ಅನೇಕ ಹೀರೋ-ಹೀರೋಯಿನ್​ಗಳ ಮೇಲೆ, ಸ್ಟಾರ್ ಕಿಡ್​ಗಳ ಮೇಲೆ, ಖ್ಯಾತ ನಿರ್ಮಾಪಕರ ಮೇಲೆ ಕೂಗಾಟ ನಡೆಸುತ್ತಾ ಇರುತ್ತಾರೆ. ವಿವಿಧ ರೀತಿಯ ಆರೋಪಗಳನ್ನು ಅವರು ಮಾಡುತ್ತಾರೆ. ಈಗ ಅವರ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರಕ್ಕೆ ಅವರದ್ದೇ ನಿರ್ದೇಶನವೂ ಇದೆ. ಜನವರಿ 17ರಂದು ತೆರೆಗೆ ಬರುತ್ತಿರುವ ಈ ಚಿತ್ರದ ಪ್ರಚಾರದಲ್ಲಿ ಕಂಗನಾ ಭಾಗಿ ಆಗುತ್ತಿದ್ದಾರೆ. ಈ ವೇಳೆ ಅವರು ಕರಣ್ ಅವರ ಕಾಲನ್ನು ಎಳೆದಿದ್ದಾರೆ. ಅವರಿಗೆ ಸಿನಿಮಾ ಆಫರ್ ಕೂಡ ನೀಡಿದ್ದಾರೆ.

‘ಇದನ್ನು ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ. ಆದರೆ, ಕರಣ್ ಜೋಹರ್ ಸರ್ ಜೊತೆ ಸಿನಿಮಾ ಮಾಡಬೇಕು. ಅವರಿಗೆ ನಾನು ಒಳ್ಳೆಯ ಪಾತ್ರವನ್ನೇ ನೀಡುತ್ತೇನೆ. ನಾನು ಒಳ್ಳೆಯ ಸಿನಿಮಾನೇ ಮಾಡುತ್ತೇನೆ. ಅದು ಅತ್ತೆ-ಸೊಸೆ ಜಗಳ ಅಲ್ಲ. ಇದು ಒಂದೊಳ್ಳೆಯ ಸಿನಿಮಾ. ಅವರಿಗೂ ಒಳ್ಳೆಯ ಪಾತ್ರ ಸಿಗುತ್ತದೆ’ ಎಂದಿದ್ದಾರೆ ಕಂಗನಾ.

ಈ ಮೊದಲು ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಅತ್ತೆ ಹಾಗೂ ಸೊಸೆಯ ಮಧ್ಯೆ ಜಗಳ ಏರ್ಪಡುವ ದೃಶ್ಯಗಳಿವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕಂಗನಾ ಈ ರೀತಿ ಹೇಳಿರಬಹುದು ಎಂದು ಕೂಡ ಹೇಳಲಾಗುತ್ತಿದೆ. ಈ ರೀತಿಯ ಸಿನಿಮಾಗಳು ಕಂಗನಾಗೆ ಇಷ್ಟ ಆಗುವುದಿಲ್ಲ.

ಕಂಗನಾ ರಣಾವತ್ ಹಾಗೂ ಕರಣ್ ಮಧ್ಯೆ ಕಿರಿಕ್ ಆಗುತ್ತಿರುವುದು ಇದೇ ಮೊದಲೇನು ಅಲ್ಲ. ಈ ಮೊದಲು ಕೂಡ ಕಂಗನಾ ಅವರು ಕರಣ್ ಜೋಹರ್ ವಿರುದ್ಧ ಸಿಟ್ಟಾಗಿದ್ದರು. 2017ರಲ್ಲಿ ಕಂಗನಾ ಅವರು ‘ಕಾಫಿ ವಿತ್ ಕರಣ್’ ಶೋಗೆ ಬಂದಿದ್ದರು. ಅವರು ಅಲ್ಲಿಯೇ ಕರಣ್ ವಿರುದ್ಧ ಹರಿಹಾಯ್ದಿದ್ದರು. ಅವರದ್ದೇ ಶೋನಲ್ಲಿ ಕರಣ್ ಮರ್ಯಾದೆಯನ್ನು ತೆಗೆದಿದ್ದರು. ಕಂಗನಾ ಅವಕಾಶ ಸಿಕ್ಕಾಗಲೆಲ್ಲ ಕರಣ್ ಅವರಿಗೆ ಅವಮಾನ ಮಾಡಲು ಕಾಯುತ್ತಾ ಇರುತ್ತಾರೆ.

ಇದನ್ನೂ ಓದಿ: ‘ರಾಜಕೀಯ ವಿಚಾರಗಳ ಸಿನಿಮಾ ಮಾಡಲ್ಲ‘: ‘ಎಮರ್ಜೆನ್ಸಿ’ ಚಿತ್ರ ಮಾಡಿ ಸುಸ್ತಾದ ಕಂಗನಾ

ಸದ್ಯ ಕಂಗನಾ ‘ಎಮರ್ಜೆನ್ಸಿ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಚಿತ್ರಕ್ಕೆ ಅವರೇ ನಿರ್ಮಾಪಕಿಯೂ ಹೌದು. ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಂಗನಾ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನಾಧಾರಿತ ಚಿತ್ರ ಇದಾಗಿದೆ. ಜನವರಿ 17ರಂದು ಸಿನಿಮಾ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?