ಪ್ರಿಯಾಂಕಾ ಗಾಂಧಿಯನ್ನು ಹಾಡಿ ಹೊಗಳಿದ ಕಂಗನಾ ರನೌತ್
Kangana Ranaut: ಕಂಗನಾ ರಣಾವತ್ ಅವರು ಇತ್ತೀಚೆಗೆ ಸಂಸತ್ತಿನಲ್ಲಿ ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಪ್ರಿಯಾಂಕಾ ಅವರ ವಿನಮ್ರತೆಯನ್ನು ಕಂಗನಾ ಶ್ಲಾಘಿಸಿದರೆ, ರಾಹುಲ್ ಗಾಂಧಿ ಅವರ ಬಗ್ಗೆ ಟೀಕಿಸಿದ್ದಾರೆ. 'ಎಮರ್ಜೆನ್ಸಿ' ಚಿತ್ರವನ್ನು ವೀಕ್ಷಿಸುವಂತೆ ಅವರು ಇಬ್ಬರಿಗೂ ಒತ್ತಾಯಿಸಿದ್ದಾರೆ. ಈ ಭೇಟಿಯ ವಿವರಗಳನ್ನು ಕಂಗನಾ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ನಟಿ, ನಿರ್ದೇಶಕಿ ಹಾಗೂ ಸಂಸದೆ ಕಂಗನಾ ರನೌತ್ ಕಳೆದ ಕೆಲವು ದಿನಗಳಿಂದ ತಮ್ಮ ಮುಂಬರುವ ಚಿತ್ರ ‘ಎಮರ್ಜೆನ್ಸಿ’ ಪ್ರಚಾರದಲ್ಲಿದ್ದಾರೆ. ಸೆನ್ಸಾರ್ ಪ್ರಮಾಣಪತ್ರ ಸಮಸ್ಯೆ ಮತ್ತು ಸಿಖ್ ಸಮುದಾಯದ ಆರೋಪಗಳ ನಂತರ, ಚಿತ್ರವು ಅಂತಿಮವಾಗಿ ಬಿಡುಗಡೆ ಆಗುತ್ತಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಕಂಗನಾ ಅವರು ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾದ ಕಥೆಯನ್ನು ಹೇಳಿದರು. ಈ ವೇಳೆ ಕಂಗನಾ ‘ಎಮರ್ಜೆನ್ಸಿ’ ಸಿನಿಮಾ ನೋಡುವಂತೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ಈ ಚಿತ್ರದ ಬಗ್ಗೆ ರಾಹುಲ್ ಗಾಂಧಿಗೂ ಅವರು ಹೇಳಿದ್ದರು. ಅವರಿಬ್ಬರ ಪ್ರತಿಕ್ರಿಯೆ ಏನು ಎಂಬುದನ್ನು ಕಂಗನಾ ಈ ಸಂದರ್ಶನದಲ್ಲಿ ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ. ಒಂದೆಡೆ ಪ್ರಿಯಾಂಕಾ ಗಾಂಧಿ ಅವರ ವಿನಮ್ರ ಗುಣವನ್ನು ಶ್ಲಾಘಿಸಿದ ಅವರು, ಮತ್ತೊಂದೆಡೆ ರಾಹುಲ್ ಗಾಂಧಿಗೆ ಸಭ್ಯತೆಯೇ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಪ್ರಿಯಾಂಕಾ ಗಾಂಧಿ ಅವರೊಂದಿಗಿನ ಭೇಟಿಯ ಬಗ್ಗೆ ಅವರು, ‘ಪ್ರಿಯಾಂಕಾ ಅವರು ನಿಜಕ್ಕೂ ತನ್ನ ಸಹೋದರನಿಗಿಂತ (ರಾಹುಲ್ ಗಾಂಧಿ) ಹೆಚ್ಚು ವಿನಮ್ರ ಅವರು ಎಂದು ನಾನು ಹೇಳುತ್ತೇನೆ. ಅವರು ಸಂಸತ್ತಿನ ಮೂಲಕ ನಡೆದುಕೊಂಡು ಹೋಗುತ್ತಿರುವಾಗ, ಯಾರೋ ಸಣ್ಣ ಧ್ವನಿಯಲ್ಲಿ ಮಾತನಾಡುವುದುನ್ನು ನಾನು ಕೇಳಿದೆ. ನೋಡಿದರೆ ಪ್ರಿಯಾಂಕಾ. ಅವರ ಕೂದಲು ಮತ್ತು ಅವರ ಉಡುಗೆ ಎಷ್ಟು ಚೆಂದ. ಅವರು ತುಂಬಾ ಆಕರ್ಷಯುತ ವ್ಯಕ್ತಿ. ಅವರ ಮುಖದಲ್ಲಿ ನಗು ಇತ್ತು. ನಾನು ನಟಿ ಎಂಬ ಕಾರಣಕ್ಕಾಗಿ ಸಂಸತ್ತಿನಲ್ಲಿ ಹೆಚ್ಚಿನ ಜನರು ನನ್ನೊಂದಿಗೆ ಸಂವಹನ ನಡೆಸುತ್ತಿದ್ದಾರೆ ಎಂದು ನಾನು ಭಾವಿಸಿದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ:ಆಲಿಯಾ, ಕರಣ್ ವಿರುದ್ಧ ಸಿಟ್ಟು ಹೊರಹಾಕಿದ ನಟಿ, ಸಂಸದೆ ಕಂಗನಾ ರನೌತ್
ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಸಂವಾದ
‘ನಾನು ಸಹ ಅವರನ್ನು ನೋಡಿ ಮುಗುಳ್ನಕ್ಕು ಧನ್ಯವಾದ ಹೇಳಿದೆ. ಅವರು ತುಂಬಾ ಸುಂದರ, ಪ್ರಭಾವಶಾಲಿ ಮತ್ತು ಎತ್ತರದವರಾಗಿದ್ದಾರೆ. ಸಂಸತ್ತಿನಲ್ಲಿ ನನ್ನ ಅನುಭವ ಹೇಗಿತ್ತು ಎಂದು ಕೇಳಿದರು. ಇದು ತುಂಬಾ ಆಸಕ್ತಿದಾಯಕವಾಗಿದೆ ಮತ್ತು ನಾನು ಇಲ್ಲಿಯವರೆಗೆ ಮಾಡುತ್ತಿದ್ದದ್ದಕ್ಕಿಂತ ವಿಭಿನ್ನವಾಗಿದೆ ಎಂದು ನಾನು ಅವರಿಗೆ ಹೇಳಿದೆ’ ಎಂದಿದ್ದಾರೆ ಕಂಗನಾ.
‘ಈ ವೇಳೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಅಜ್ಜಿ ಇಂದಿರಾಗಾಂಧಿ ಅವರ ಮೇಲೆ ಸಿನಿಮಾ ಮಾಡಿದ್ದೇನೆ ಎಂದು ಹೇಳಿದೆ. ಆಗ ಅವರಿಗೆ ಸ್ವಲ್ಪ ಆಶ್ಚರ್ಯವಾಯಿತು. ನಾನು ಹೇಳಿದೆ, ನನ್ನ ಚಿತ್ರದ ಹೆಸರು ಎಮರ್ಜೆನ್ಸಿ. ನೀವು ಅದನ್ನು ನೋಡಬೇಕು’ ಎಂದು ಕೇಳಿದೆ. ಸಿನಿಮಾದ ಕಥೆಯನ್ನು ಎಲ್ಲಿಂದ ತೆಗೆದುಕೊಂಡಿದ್ದೇನೆ ಎಂದು ಕಂಗನಾ ಅವರಿಗೆ ವಿವರಿಸಿದರು. ಅಲ್ಲದೆ, ಸಿನಿಮಾ ವೀಕ್ಷಣೆಗೆ ಆಹ್ವಾನಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ