ಕ್ರಿಕೆಟರ್ ಶರತ್ ಜೊತೆ ನಟಿ ಅರ್ಚನಾ ಕೊಟ್ಟಿಗೆ ಮದುವೆ; ಪಡಿಕ್ಕಲ್ ಸೇರಿ ಅನೇಕರು ಭಾಗಿ
ಕನ್ನಡ ಚಿತ್ರರಂಗದ ನಟಿ ಅರ್ಚನಾ ಕೊಟ್ಟಿಗೆ ಮತ್ತು ಕ್ರಿಕೆಟರ್ ಬಿ.ಆರ್. ಶರತ್ ಅವರ ಅದ್ದೂರಿ ವಿವಾಹ ಬೆಂಗಳೂರಿನಲ್ಲಿ ನಡೆಯಿತು.ಆರ್‌ಸಿಬಿ ಮತ್ತು ಜಿಟಿ ತಂಡಗಳ ಆಟಗಾರರು ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡರು. ಈ ಮದುವೆಯ ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕನ್ನಡ ಸಿನಿಮಾ ನಟಿ ಅರ್ಚನಾ ಕೊಟ್ಟಿಗೆ (Archana Kottige) ವಿವಾಹವು ಕರ್ನಾಟಕದ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಬಿಆರ್ ಶರತ್ ಜೊತೆ ನಡೆದಿದೆ. ಈ ಮದುವೆ ಅದ್ದೂರಿಯಾಗಿ ನೆರವೇರಿದ್ದು ಆರ್‌ಸಿಬಿ ಆಟಗಾರ ದೇವದತ್ ಪಡಿಕ್ಕಲ್, ಜಿಟಿ ಆಟಗಾರ ಪ್ರಸೀದ್ ಕೃಷ್ಣ ಸೇರಿದಂತೆ ಅನೇಕ ಕ್ರಿಕೆಟಿಗರು, ಚಿತ್ರರಂಗದವರು ಈ ಸಂದರ್ಭದಲ್ಲಿ ಹಾಜರಿ ಹಾಕಿದ್ದರು. ಗುರುವಾರ (ಏಪ್ರಿಲ್ 24) ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯ ನಡೆಯಲಿದೆ. ಹೀಗಾಗಿ, ದೇವದತ್ ಅವರು ಬೆಂಗಳೂರಿನಲ್ಲೇ ನೆಲಿಸಿದ್ದು, ಮದುವೆಗೆ ಆಗಮಿಸಿದ್ದಾರೆ.
ಅರ್ಚನಾ ಕೊಟ್ಟಿಗೆ ಹಾಗೂ ಬಿಆರ್ ಶರತ್ ಅವರು ಈ ಮೊದಲು ಕುಟುಂಬದ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ವಿವಾಹ ಆಗುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅರ್ಚನಾ ಹಾಗೂ ಶರತ್ ವಿವಾಹದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಕ್ರಿಕೆಟರ್ಗಳು ಹಾಜರಿ ಹಾಕಿದ್ದು ಹೆಚ್ಚು ಗಮನ ಸೆಳೆದಿದೆ.
ಅರ್ಚನಾ ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 2018ರ ‘ಅರಣ್ಯಕಾಂಡ’ ಸಿನಿಮಾ ಮೂಲಕ ಅವರು ಬಣ್ಣದ ಲೋಕಕ್ಕೆ ಬಂದರು. ‘ವಾಸು ನಾನ್ ಪಕ್ಕಾ ಕಮರ್ಷಿಯಲ್’, ‘ಡಿಯರ್ ಸತ್ಯ’, ‘ತ್ರಿಬಲ್ ರೈಡಿಂಗ್’ ರೀತಿಯ ಸಿನಿಮಾಗಳಲ್ಲಿ ಅವರು ನಟಿಸಿದರು. ಈ ವರ್ಷ ರಿಲೀಸ್ ಆದ ‘ಫಾರೆಸ್ಟ್’ ಹೆಸರಿನ ಕನ್ನಡ ಸಿನಿಮಾದಲ್ಲಿ ಅರ್ಚನಾ ನಟಿಸಿದ್ದರು. ಇದರಲ್ಲಿ ಅವರದ್ದು ಮೀನಾಕ್ಷಿ ಹೆಸರಿನ ಪಾತ್ರ. ರಂಗಾಯಣ ರಘು, ಚಿಕ್ಕಣ್ಣ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇನ್ನು, ಶರತ್ ಕ್ರಿಕೆಟರ್ ಕರಿಯರ್ ವಿಚಾರಕ್ಕೆ ಬರೋದಾದರೆ 2024ರಲ್ಲಿ ಅವರು ಜಿಟಿ ಪರ ಆಡಿದರು. ಇದು ಅವರ ಮೊದಲ ಐಪಿಎಲ್ ಸೀಸನ್. ಅವರು ಈ ವರ್ಷ ಯಾವುದೇ ಫ್ರಾಂಚೈಸಿ ಜೊತೆಯೂ ಗುರುತಿಸಿಕೊಂಡಿಲ್ಲ.
ಇದನ್ನೂ ಓದಿ: ನಟಿ ಅರ್ಚನಾ ಮದುವೆಯಲ್ಲಿ ಕ್ರಿಕೆಟ್, ಸಿನಿಮಾ ಸೆಲೆಬ್ರಿಟಿಗಳ ಸಮಾಗಮ
ಅರ್ಚನಾ ಹಾಗೂ ಶರತ್ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಆ ಬಳಿಕ ಇಬ್ಬರ ಮಧ್ಯೆ ಪ್ರೀತಿ ಬೆಳೆಯಿತು. ಶರತ್ ಹಾಗೂ ಅರ್ಚನಾ ಒಂದೇ ಕಾಲೇಜ್ನಲ್ಲಿ ಅಧ್ಯಯನ ನಡೆಸಿದ್ದಾರೆ. ಶರತ್ ಅವರು ಅರ್ಚನಾಗೆ ಸೀನಿಯರ್ ಆಗಿದ್ದರು. ಈಗ ಇಬ್ಬರೂ ವಿವಾಹ ಆಗಿದ್ದು, ಇವರ ದಾಂಪತ್ಯಕ್ಕೆ ಎಲ್ಲರೂ ಶುಭಕೋರುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.