AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊರ್ವಶಿ ರೌಟೆಲಾಗೆ ಕಾನ್ ಫೆಸ್ಟಿವಲ್​ನಲ್ಲಿ ಅವಮಾನ, ರೆಡ್ ಕಾರ್ಪೇಟ್​ ಮೇಲೆ ನಡೆದಿದ್ದೇನು?

Urvashi Rautela: ನಟಿ ಊರ್ವಶಿ ರೌಟೆಲಾ ಕಾನ್ ಸಿನಿಮೋತ್ಸವದಲ್ಲಿ ಭಾಗವಹಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಊರ್ವಶಿ ಧರಿಸಿದ್ದ ಉಡುಪು, ಅವರು ಕೈಯಲ್ಲಿ ಹಿಡಿದಿದ್ದ ಗಿಣಿ ಸಖತ್ ಗಮನ ಸೆಳೆಯಿತು. ಆದರೆ ಅದೇ ಕಾನ್ ಉತ್ಸವದಲ್ಲಿ ಊರ್ವಶಿ ರೌಟೆಲಾಗೆ ಆಯೋಜಕರಿಂದ ಅವಮಾನ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ನಿಜಕ್ಕೂ ನಡೆದಿದ್ದೇನು?

ಊರ್ವಶಿ ರೌಟೆಲಾಗೆ ಕಾನ್ ಫೆಸ್ಟಿವಲ್​ನಲ್ಲಿ ಅವಮಾನ, ರೆಡ್ ಕಾರ್ಪೇಟ್​ ಮೇಲೆ ನಡೆದಿದ್ದೇನು?
Urvashi Rautela
ಮಂಜುನಾಥ ಸಿ.
|

Updated on: May 15, 2025 | 12:24 PM

Share

ನಟಿ ಊರ್ವಶಿ ರೌಟೆಲಾ (Urvashi Rautela) ತಮ್ಮ ಸಿನಿಮಾ, ಐಟಂ ಹಾಡುಗಳ ಜೊತೆಗೆ ತಮ್ಮ ಫ್ಯಾಷನ್​ನಿಂದಲೂ ಗಮನ ಸೆಳೆಯುತ್ತಾರೆ. ಭಾರತದ ಬಲು ಬೇಡಿಕೆಯ ಐಟಂ ಸಾಂಗ್ ಡ್ಯಾನ್ಸರ್ ಆಗಿರುವ ಊರ್ವಶಿ ರೌಟೆಲಾ ಮಾಡೆಲಿಂಗ್ ಸಹ ಮಾಡುತ್ತಾರೆ. ಸಿನಿಮೋತ್ಸವಗಳಲ್ಲಿ ರೆಡ್ ಕಾರ್ಪೇಟ್ ಮೇಲೆ ಕ್ಯಾಟ್ ವಾಕ್ ಮಾಡುವುದೆಂದರೆ ಊರ್ವಶಿಗೆ ಎಲ್ಲಿಲ್ಲದ ಪ್ರೀತಿ. ಇದೀಗ ಕಾನ್​ನಲ್ಲಿ ನಡೆಯುತ್ತಿರುವ ಸಿನಿಮೋತ್ಸವದಲ್ಲಿ ಊರ್ವಶಿ ಭಾಗಿ ಆಗಿದ್ದು, ಅಲ್ಲಿ ರೆಡ್ ಕಾರ್ಪೇಟ್ ಮೇಲೆ ಅದ್ಭುತವಾಗಿ ಕಾಣುತ್ತಿರುವ ಉಡುಗೆ ತೊಟ್ಟು ನಡೆದಿದ್ದಾರೆ. ಸಹಜವಾಗಿಯೇ ತಮ್ಮ ಉಡುಪು, ಸೌಂದರ್ಯದಿಂದ ಊರ್ವಶಿ ಗಮನ ಸೆಳೆದಿದ್ದಾರೆ. ಆದರೆ ಆ ಕಾರ್ಯಕ್ರಮದಲ್ಲಿ ಊರ್ವಶಿಗೆ ಆಯೋಜಕರು ಅವಮಾನ ಮಾಡಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಊರ್ವಶಿ ರೌಟೆಲಾ, ಕಾನ್ ಫೆಸ್ಟ್​ನ ರೆಡ್ ಕಾರ್ಪೇಟ್​ನ ಮೇಲೆ ಇತರೆ ಕೆಲವು ಸೆಲೆಬ್ರಿಟಿಗಳೊಟ್ಟಿಗೆ ಹೆಜ್ಜೆ ಹಾಕಿದರು. ನೂರಾರು ಕ್ಯಾಮರಾಮನ್​ಗಳಿಗೆ ಫೋಸು ಸಹ ನೀಡುತ್ತಿದ್ದರು. ಆದರೆ ಅಲ್ಲಿದ್ದ ಭದ್ರತೆಯವರು ಊರ್ವಶಿ ರೌಟೆಲಾ ಅವರನ್ನು ಬಲವಂತದಿಂದ ಹೊರಗೆ ಕಳಿಸಿದರು. ಊರ್ವಶಿಯನ್ನು ಭದ್ರತೆಯವರು ರೆಡ್ ಕಾರ್ಪೆಟ್​ನಿಂದ ಹೊರಗೆ ಬರಲು ಸೂಚಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ನಟಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಅಸಲಿಗೆ ಅಲ್ಲಿ ಆಗಿದ್ದೇ ಬೇರೆ. ಈ ಬಾರಿ ಕಾನ್ ರೆಡ್ ಕಾರ್ಪೆಟ್ ವಾಕ್​ಗೆ ಕೆಲವು ನಿಯಮಗಳನ್ನು ಮಾಡಲಾಗಿದೆ. ಉಡುಪುಗಳ ಬಗ್ಗೆ ಹಾಗೂ ರೆಡ್ ಕಾರ್ಪೆಟ್ ಮೇಲೆ ಎಷ್ಟು ಹೊತ್ತು ಇರಬಹುದು ಎಂಬ ಬಗ್ಗೆ ನಿಯಮಗಳನ್ನು ಮಾಡಲಾಗಿದೆ. ಪ್ರತಿ ವರ್ಷ ರೆಡ್ ಕಾರ್ಪೆಟ್ ವಾಕ್​ ನಿಂದಾಗಿ ಸಿನಿಮಾ ಪ್ರದರ್ಶನ ಹಾಗೂ ಇತರೆ ಕಾರ್ಯಕ್ರಮ ತಡವಾಗುತ್ತಿರುವ ಕಾರಣ ಈ ನಿಯಮ ಮಾಡಲಾಗಿದೆ. ಆದರೆ ರೆಡ್ ಕಾರ್ಪೆಟ್​ ಮೇಲೆ ನಡೆದ ಊರ್ವಶಿ ನಿಗದಿತ ಸಮಯಕ್ಕಿಂತಲೂ ಹೆಚ್ಚು ಹೊತ್ತು ರೆಡ್ ಕಾರ್ಪೆಟ್​ ಮೇಲೆ ನಿಂತು ಕ್ಯಾಮೆರಾಕ್ಕೆ ಫೋಸು ನೀಡುತ್ತಿದ್ದರು. ಇದೇ ಕಾರಣಕ್ಕೆ ಭದ್ರತೆಯವರು ನಟಿಯನ್ನು ಹೊರಗೆ ಕರೆದರು ಎನ್ನಲಾಗುತ್ತಿದೆ.

ಇದನ್ನೂ ಓದಿ:ನಾಲಗೆ ಹರಿಬಿಟ್ಟ ಊರ್ವಶಿ ರೌಟೆಲಾ, ಎಚ್ಚರಿಕೆ ನೀಡಿದ ದೇವಿ ಆರಾಧಕರು

ಏನೇ ಆಗಲಿ, ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಊರ್ವಶಿ ರೌಟೆಲಾ ಕಾನ್ ಸಿನಿಮೋತ್ಸವದಲ್ಲಿ ಗಮನ ಸೆಳೆದಿದ್ದಾರೆ. ಬಲು ಅದ್ಧೂರಿಯಾಗಿ ಕಾಣುತ್ತಿದ್ದ ಉಡುಗೆಯನ್ನು ಊರ್ವಶಿ ಧರಿಸಿದ್ದರು. ಊರ್ವಶಿ ಧರಿಸಿದ್ದ ಉಡುಗೆಯ ಬೆಲೆ ಬರೋಬ್ಬರಿ 40 ಕೋಟಿ ರೂಪಾಯಿಗಳಂತೆ. ಅದರ ಜೊತೆಗೆ ಒಂದು ಗಿಣಿಯನ್ನು ಸಹ ಊರ್ವಶಿ ಹಿಡಿದುಕೊಂಡಿದ್ದರು. ಅದೂ ಸಹ ಸಖತ್ ಗಮನ ಸೆಳೆಯಿತು. ಊರ್ವಶಿ ಪ್ರಸ್ತುತ ‘ವೆಲ್ ಕಮ್ ಟು ಜಂಗಲ್’, ‘ಕಸೂರ್ 2’ ಮತ್ತು ತೆಲುಗಿನ ‘ಬ್ಲಾಕ್ ರೋಸ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ