ಊರ್ವಶಿ ರೌಟೇಲಾ ಧರಿಸಿದ ಈ ಗೌನ್ ಬೆಲೆ ಬರೋಬ್ಬರಿ 40 ಕೋಟಿ ರೂಪಾಯಿ!
ಸಾವಿರ ಅಲ್ಲ, ಲಕ್ಷ ಅಲ್ಲ.. ಬರೋಬ್ಬರಿ 40.41 ಕೋಟಿ ರೂಪಾಯಿ ಬೆಲೆಯ ಬಟ್ಟೆ ಧರಿಸಿ ಊರ್ವಶಿ ರೌಟೇಲಾ ಮಿಂಚಿದ್ದಾರೆ. 78ನೇ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಭಾರತದ ಅನೇಕ ಸೆಲೆಬ್ರಿಟಿಗಳು ಈ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ. ಊರ್ವಶಿ ರೌಟೇಲಾ ಅವರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

ಪ್ಯಾನ್ ಇಂಡಿಯಾ ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಕೆಲವೊಮ್ಮೆ ಅನಗತ್ಯವಾದ ವಿವಾದಗಳಲ್ಲಿ ಅವರ ಹೆಸರು ತಳುಕು ಹಾಕಿಕೊಳ್ಳುತ್ತದೆ. ಅದನ್ನು ಹೊರತುಪಡಿಸಿದರೆ ಅವರಿಗೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ಇದೆ. ಈಗ ಊರ್ವಶಿ ರೌಟೇಲಾ ಅವರು ಕಾನ್ (Cannes 2025) ಫಿಲ್ಮ್ ಫೆಸ್ಟಿವಲ್ನಲ್ಲಿ ಪಾಲ್ಗೊಂಡಿದ್ದಾರೆ. ರೆಟ್ ಕಾರ್ಪೆಟ್ನಲ್ಲಿ ಅವರು ಹೆಜ್ಜೆ ಹಾಕಿದ್ದಾರೆ. ನೆರೆದಿದ್ದ ಸಾವಿರಾರು ಕ್ಯಾಮೆರಾಗಳ ಎದುರು ಅವರು ಪೋಸ್ ನೀಡಿದ್ದಾರೆ. ಅವರು ಧರಿಸಿದ ಅತಿ ದುಬಾರಿ ಡ್ರೆಸ್ (Urvashi Rautela Gown) ಬಗ್ಗೆ ಈಗ ಎಲ್ಲರೂ ಮಾತನಾಡುತ್ತಿದ್ದಾರೆ. ಯಾಕೆಂದರೆ ಇದರ ಬೆಲೆ ಕೇಳಿದರೆ ಎಂಥವರೂ ಹೌಹಾರುತ್ತಾರೆ.
ಹೌದು, ವರದಿಗಳ ಪ್ರಕಾರ ಊರ್ವಶಿ ರೌಟೇಲಾ ಅವರು ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ನಲ್ಲಿ ಮೊದಲ ದಿನ ಧರಿಸಿದ ಗೌನ್ ಬೆಲೆ ಬರೋಬ್ಬರಿ 40.41 ಕೋಟಿ ರೂಪಾಯಿ! ಬಹಳ ವಿಶೇಷವಾಗಿ ಇದನ್ನು ತಯಾರಿಸಲಾಗಿದೆಯಂತೆ. ತುಂಬ ಕಲರ್ಫುಲ್ ಆಗಿರುವ ಈ ಗೌನ್ ಧರಿಸಿ ಊರ್ವಶಿ ರೌಟೇಲಾ ಅವರು ಮಿಂಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ.
ಫ್ಯಾಷನ್ ಜಗತ್ತಿನಲ್ಲಿ ಊರ್ವಶಿ ರೌಟೇಲಾ ಅವರು ಸದಾ ಮಿಂಚುತ್ತಾರೆ. ಆಗಾಗ ಅವರ ಬಣ್ಣ ಬಣ್ಣದ ಫೋಟೋಶೂಟ್ ಮಾಡಿಸುತ್ತಾರೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸುವ ಅವಕಾಶ ಪಡೆದಿರುವ ಅವರು ಬಹುಕೋಟಿ ರೂಪಾಯಿ ಬೆಲೆ ಬಾಳುವ ಗೌನ್ ಧರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
View this post on Instagram
ಅಂದಹಾಗೆ, ಕೆಲವರು ಊರ್ವಶಿ ರೌಟೇಲಾ ಅವರ ಡ್ರೆಸ್ ನೋಡಿ ಟ್ರೋಲ್ ಮಾಡಿದ್ದಾರೆ ಕೂಡ. ಇದರ ಬೆಲೆ 40.41 ಕೋಟಿ ರೂಪಾಯಿ ಆಗಿದ್ದರೂ ಕೂಡ ನೋಡಲು ಆಕರ್ಷಕವಾಗಿಲ್ಲ. ಅತಿಯಾದ ಬಣ್ಣಗಳಿಂದ ತುಂಬಿದೆ. 40 ಕೋಟಿ ರೂಪಾಯಿ ಎನ್ನುವಂತಹ ವಿಶೇಷ ಇದರಲ್ಲಿ ಏನೂ ಇಲ್ಲ ಎಂಬ ಕಮೆಂಟ್ಗಳು ಬಂದಿವೆ.
ಇದನ್ನೂ ಓದಿ: ಊರ್ವಶಿ ರೌಟೇಲಾ ಹಾಡಿನಂತೆಯೇ ವೈರಲ್ ಆಗುತ್ತಿದೆ ಮೇಕಿಂಗ್ ವಿಡಿಯೋ
ಇದು ಊರ್ವಶಿ ರೌಟೇಲಾ ಅವರ ಮೊದಲ ಲುಕ್. ವಾರ ಪೂರ್ತಿ ನಡೆಯುವ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಅವರ ಮುಂದಿನ ಡ್ರೆಸ್ ಯಾವ ರೀತಿ ಇರಲಿದೆ ಎಂಬುದನ್ನು ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








