ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಿರಿ: ಬಾಲಿವುಡ್ ನಿರ್ಮಾಪಕರಿಗೆ ಬುದ್ಧಿ ಹೇಳಿದ ಸನ್ನಿ ಡಿಯೋಲ್
Bobby Deol: ‘ಅನಿಮಲ್’ ಸಿನಿಮಾದ ಬಳಿಕ ಬಾಬಿ ಡಿಯೋಲ್ ಗೆ ಅವಕಾಶಗಳ ಮೇಲೆ ಅವಕಾಶಗಳು ಅರಸಿ ಬರುತ್ತಿವೆ. ದಕ್ಷಿಣ ಭಾರತ ಚಿತ್ರರಂಗದಲ್ಲಂತೂ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಬಾಬಿ ನಟಿಸಿದ ಕೆಲವು ಸೌಥ್ ಸಿನಿಮಾಗಳು ಬಿಡುಗಡೆ ಆಗಿವೆ. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಬಾಬಿ, ‘ಬಾಲಿವುಡ್ ನಿರ್ಮಾಪಕರು, ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಬೇಕು’ ಎಂದಿದ್ದಾರೆ.

ಸನ್ನಿ ಡಿಯೋಲ್ ಬಾಲಿವಡ್ನ ಸ್ಟಾರ್ ನಟರಲ್ಲಿ ಒಬ್ಬರು. ವೃತ್ತಿ ಬದುಕು ಇಳಿಜಾರಿನಲ್ಲಿ ಹೋಗುತ್ತಿರುವಾಗ ಕೈಗೆ ಸಿಕ್ಕ ‘ಅನಿಮಲ್’ ಸಿನಿಮಾ, ಬಾಬಿ ವೃತ್ತಿಗೆ ದೊಡ್ಡ ತಿರುವು ನೀಡಿತು. ಈಗ ಬಾಬಿ ಡಿಯೋಲ್ ನಾಯಕನಾಗಿ ಹಾಗೂ ವಿಲನ್ ಆಗಿ ಎರಡೂ ರೀತಿಯ ಪಾತ್ರಗಳಿಗೆ ಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. ‘ಅನಿಮಲ್’ ಬಳಿಕ ಎರಡು ದಕ್ಷಿಣದ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಇನ್ನೂ ಕೆಲವು ದಕ್ಷಿಣ ಭಾರತದ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ದಕ್ಷಿಣ ಭಾರತದವರ ಸಿನಿಮಾ ಮೇಕಿಂಗ್ ಅನ್ನು ಬಹುವಾಗಿ ಕೊಂಡಾಡಿದ್ದಾರೆ ಬಾಬಿ ಡಿಯೋಲ್.
‘ದಕ್ಷಿಣ ಭಾರತದ ನಿರ್ಮಾಪಕರು ಅವರ ನಿರ್ದೇಶಕರ ಮೇಲೆ, ನಟರ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿರುತ್ತಾರೆ. ಒಮ್ಮೆ ಚಿತ್ರಕತೆ ಲಾಕ್ ಆಯಿತು ಎಂದರೆ ಅಲ್ಲಿಗೆ ಮುಗಿಯಿತು. ಹಿಂತಿರುಗಿ ನೋಡದೆ ಕೆಲಸ ಮಾಡುತ್ತಾರೆ. ಕತೆಗೆ ಜೀವ ನೀಡಲು ಹಗಲು-ರಾತ್ರಿ ಶ್ರಮಿಸುತ್ತಾರೆ. ಆದರೆ ಬಾಲಿವುಡ್ನಲ್ಲಿ ಆ ಪರಿಸ್ಥತಿ ಇಲ್ಲ. ನಿರ್ಮಾಪಕರಿಗೆ ಕತೆಯ ಮೇಲೆ, ನಿರ್ದೇಶಕ, ನಟರ ಮೇಲೆ ಪೂರ್ಣ ನಂಬಿಕೆಯೇ ಇರುವಂತೆ ತೋರುವುದಿಲ್ಲ’ ಎಂದಿದ್ದಾರೆ ಬಾಬಿ ಡಿಯೋಲ್.
‘ದಕ್ಷಿಣ ಭಾರತದ ಸಿನಿಮಾ ಮಂದಿ ಪ್ರೀತಿಯಿಂದ, ನಂಬಿಕೆಯಿಂದ, ಪ್ಯಾಷನ್ ಇಂದ ಸಿನಿಮಾ ನಿರ್ಮಾಣ ಮಾಡುತ್ತಾರೆ. ಅದು ಅವರ ಕೆಲಸದ ರೀತಿಯಲ್ಲಿ ಕಾಣುತ್ತದೆ. ಆದರೆ ನಮ್ಮಲ್ಲಿ ಅಪನಂಬಿಕೆಗಳೇ ಹೆಚ್ಚಾಗಿವೆ. ಬಾಲಿವುಡ್ ನಿರ್ಮಾಪಕರು, ದಕ್ಷಿಣ ಭಾರತದ ನಿರ್ಮಾಪಕರನ್ನು ನೋಡಿ ಕಲಿಯಬೇಕಿದೆ’ ಎಂದಿದ್ದಾರೆ ಬಾಬಿ ಡಿಯೋಲ್.
ಇದನ್ನೂ ಓದಿ:‘ರಾಮಾಯಣ’ದಲ್ಲಿ ಬಾಬಿ ಡಿಯೋಲ್, ಸಿನಿಮಾ ಬಗ್ಗೆ ಬಿಚ್ಚಿಟ್ಟರು ಗುಟ್ಟು
‘ಅನಿಮಲ್’ ಸಿನಿಮಾದ ಬಳಿಕ ಬಾಬಿ ಡಿಯೋಲ್ಗೆ ದಕ್ಷಿಣ ಭಾರತದಲ್ಲಿ ಬೇಡಿಕೆ ಹೆಚ್ಚಾಗಿದೆ. ಬಾಲಕೃಷ್ಣ ನಟನೆಯ ‘ಡಾಕೂ ಮಹಾರಾಜ್’, ಸೂರ್ಯ ನಟನೆಯ ತಮಿಳು ಸಿನಿಮಾ ‘ಕಂಗುವ’ ಗಳಲ್ಲಿ ಬಾಬಿ ಡಿಯೋಲ್ ನಟಿಸಿದ್ದಾರೆ. ಇದೀಗ ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಮತ್ತು ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾಗಳಲ್ಲಿ ಬಾಬಿ ಡಿಯೋಲ್ ನಟಿಸುತ್ತಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿಯೂ ಬಾಬಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ