ಪಬ್ಲಿಕ್ನಲ್ಲಿ ಡ್ಯಾನ್ಸ್ ಮಾಡೋ ಕೋರಿಕೆ ಇಟ್ಟ ಅಭಿಮಾನಿ; ರಶ್ಮಿಕಾ ಉತ್ತರ ಏನು?
ರಶ್ಮಿಕಾ ಮಂದಣ್ಣ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅಭಿಮಾನಿಯೊಬ್ಬ ಅವರ ಮುಂದೆ ಡ್ಯಾನ್ಸ್ ಮಾಡಿ, ರಶ್ಮಿಕಾಗೂ ನೃತ್ಯಕ್ಕೆ ಆಹ್ವಾನಿಸಿದ್ದಾರೆ. ರಶ್ಮಿಕಾ ಅವರು ನೇರವಾಗಿ ನಿರಾಕರಿಸಿದರೂ, ಅಭಿಮಾನಿಯ ಉತ್ಸಾಹವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ. ಇದು ಅವರ ಸ್ವಭಾವ ಹೇಗಿದೆ ಎಂಬುದನ್ನು ತೋರಿಸುತ್ತದೆ.

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಸ್ವೀಟ್ ಗೆಸ್ಚರ್ಗಳು ಅಭಿಮಾನಿಗಳಿಗೆ ಸದಾ ಇಷ್ಟ ಆಗುತ್ತವೆ. ಅವರು ಏನೇ ಮಾಡಿದರೂ ಫ್ಯಾನ್ಸ್ ಸಾಕಷ್ಟು ಇಷ್ಟಪಡುತ್ತಾರೆ. ಈಗ ರಶ್ಮಿಕಾ ಮಂದಣ್ಣ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಅಭಿಮಾನಿಯೋರ್ವ ಅವರ ಎದರು ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ, ಅವರ ಬಳಿ ಡ್ಯಾನ್ಸ್ ಮಾಡುವಂತೆ ಕೋರಿಕೆ ಇಟ್ಟಿದ್ದಾನೆ. ಇದಕ್ಕೆ ರಶ್ಮಿಕಾ ಮಂದಣ್ಣ ಅವರ ಉತ್ತರ ಏನು? ಆ ಬಗ್ಗೆ ಇಲ್ಲಿದೆ ವಿವರ.
ರಶ್ಮಿಕಾ ಮಂದಣ್ಣ ಅವರು ‘ಸಿಕಂದರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗುವ ಸೂಚನೆ ಸಿಕ್ಕಿದೆ. ಸಲ್ಮಾನ್ ಖಾನ್ ಅವರು ಮಾಸ್ ಅವತಾರದಲ್ಲಿ ಮಿಂಚಿದ್ದಾರೆ. ಇತ್ತೀಚೆಗೆ ರಶ್ಮಿಕಾ ಅವರು ವಿಮಾನ ನಿಲ್ದಾಣದಿಂದ ಹೊರ ಬರುವಾಗ ಕೆಲವರು ಅವರಿಗೆ ಎದುರಾಗಿದ್ದಾರೆ. ಇದರಲ್ಲಿ ಪಾಪರಾಜಿಗಳು ಕೂಡ ಇದ್ದರು.
ರಶ್ಮಿಕಾ ಎದುರು ಬಂದ ವ್ಯಕ್ತಿ ‘ಸಿಕಂದರ್’ ಹಾಡನ್ನು ಹಾಕಿ ಡ್ಯಾನ್ಸ್ ಮಾಡಿದ್ದಾರೆ ಮತ್ತು ರಶ್ಮಿಕಾ ಬಳಿ ಡ್ಯಾನ್ಸ್ ಮಾಡುವಂತೆ ಕೋರಿದ್ದಾರೆ. ಆದರೆ, ರಶ್ಮಿಕಾ ಅವರು ಇದಕ್ಕೆ ನಿರಾಕರಿಸಿದ್ದಾರೆ. ನಾನು ಡ್ಯಾನ್ಸ್ ಮಾಡೋದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಹಾಗಂದ ಮಾತ್ರಕ್ಕೆ ಆ ಅಭಿಮಾನಿ ಬೇಸರವೇನು ಮಾಡಿಕೊಂಡಿಲ್ಲ. ಬದಲಿಗೆ ಖುಷಿಯಿಂದ ಡ್ಯಾನ್ಸ್ ಮುಂದುವರಿಸಿದ್ದಾ.
View this post on Instagram
ರಶ್ಮಿಕಾ ಅವರು ಅಭಿಮಾನಿಯ ಡ್ಯಾನ್ಸ್ ನೋಡಿ ಖುಷಿ ಹೊರಹಾಕಿದ್ದಾರೆ. ಅವರು ಅಭಿಮಾನಿಗೆ ಭೇಷ್ ಎಂದು ಹೇಳಿದ್ದಾರೆ. ರಶ್ಮಿಕಾ ಅವರು ಅಭಿಮಾನಿಗಳ ಜೊತೆ ಸ್ವೀಟ್ ಆಗಿ ನಡೆದುಕೊಳ್ಳುತ್ತಾರೆ. ಯಾರಾದರೂ ಅಭಿಮಾನಿ ಸಿಕ್ಕು ಸೆಲ್ಫಿ ಕೇಳಿದರೆ ಅವರು ಎಂದಿಗೂ ನೋ ಎಂದು ಹೇಳುವುದೇ ಇಲ್ಲ. ಇದು ಅವರ ದೊಡ್ಡತನವಾಗಿದೆ. ಈ ಕಾರಣಕ್ಕೆ ಅವರು ಹೊರ ರಾಜ್ಯದವರಿಗೆ ಸಾಕಷ್ಟು ಇಷ್ಟ ಆಗುತ್ತಾರೆ.
ಇದನ್ನೂ ಓದಿ: ‘ಅನಿಮಲ್ 2’ ಸಿನಿಮಾನಲ್ಲಿ ಇರೋದಿಲ್ಲ ರಶ್ಮಿಕಾ ಮಂದಣ್ಣ, ನಾಯಕಿ ಯಾರು?
ರಶ್ಮಿಕಾ ಮಂದಣ್ಣ ಅವರು ‘ಸಿಕಂದರ್’ ಸಿನಿಮಾ ರಿಲೀಸ್ಗೆ ಕಾದಿದ್ದಾರೆ. ಈ ಚಿತ್ರ ಮಾರ್ಚ್ 30ರಂದು ತೆರೆಗೆ ಬರಲಿದೆ. ಈ ಚಿತ್ರ ಹಿಟ್ ಆದರೆ ರಶ್ಮಿಕಾ ಬದುಕು ಮತ್ತೆ ಬದಲಾಗಲಿದೆ. ತಮಿಳಿನ ಎಆರ್ ಮುರುಗದಾಸ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.