Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿವಿಆರ್​ನಲ್ಲಿ ಸಿನಿಮಾ ಮಾತ್ರವಲ್ಲ, ಪ್ರದರ್ಶನ ಕಾಣಲಿದೆ ಐಪಿಎಲ್ ಮ್ಯಾಚ್

ಪಿವಿಆರ್ ಇನಾಕ್ಸ್ ಸಿನಿಮಾ ಮಂದಿರಗಳು ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ದೊಡ್ಡ ಪರದೆಯಲ್ಲಿ ಪ್ರದರ್ಶಿಸುವ ಮೂಲಕ ಹೊಸ ಆದಾಯದ ಮಾರ್ಗವನ್ನು ಕಂಡುಕೊಂಡಿದೆ. ಸಿನಿಮಾಗಳ ಬಿಡುಗಡೆ ಕಡಿಮೆಯಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬೆಂಗಳೂರು, ಮುಂಬೈ ಮುಂತಾದ 30ಕ್ಕೂ ಹೆಚ್ಚು ನಗರಗಳಲ್ಲಿ ಐಪಿಎಲ್ ಪಂದ್ಯಗಳನ್ನು ಪ್ರದರ್ಶಿಸಲಾಗುತ್ತಿದೆ.

ಪಿವಿಆರ್​ನಲ್ಲಿ ಸಿನಿಮಾ ಮಾತ್ರವಲ್ಲ, ಪ್ರದರ್ಶನ ಕಾಣಲಿದೆ ಐಪಿಎಲ್ ಮ್ಯಾಚ್
ಪಿವಿಆರ್
Follow us
ರಾಜೇಶ್ ದುಗ್ಗುಮನೆ
|

Updated on:Mar 25, 2025 | 8:09 AM

ಸಿನಿಮಾ ಪ್ರದರ್ಶಕರಾದ ಪಿವಿಆರ್ ಐನಾಕ್ಸ್ (PVR INOX) ಸಂಸ್ಥೆ ಈಗ ಆದಾಯಕ್ಕೆ ಬೇರೆ ದಾರಿ ಕಂಡುಕೊಂಡಿದೆ. ದೇಶಾದ್ಯಂತ ಸದ್ಯ ಐಪಿಎಲ್ ಜ್ವರ ಜೋರಾಗಿದೆ. ಹೀಗಾಗಿ, ಹೊಸ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಈ ಕಾರಣಕ್ಕೆ ಐಪಿಎಲ್​ನೇ ದೊಡ್ಡ ಪರದೆಮೇಲೆ ಪ್ರದರ್ಶನ ಮಾಡುವ ನಿರ್ಧಾರಕ್ಕೆ ಮುಂದಾಗಿದೆ. ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೇಶದ 30ಕ್ಕೂ ಹೆಚ್ಚು ನಗರಗಳಲ್ಲಿ ಮ್ಯಾಚ್ ವೀಕ್ಷಣೆಗೆ ಅವಕಾಶ ಇದೆ. ದೊಡ್ಡ ಪರದೆಮೇಲೆ ಕ್ರಿಕೆಟ್ ವೀಕ್ಷಣೆ ಮಾಡಿ ಹೊಸ ಅನುಭವ ಪಡೆಯುವ ಅವಕಾಶವನ್ನು ಕ್ರಿಕೆಟ್ ಪ್ರೇಮಿಗಳಿಗೆ ಪಿವಿಆರ್ ನೀಡಿದೆ.

ಈಗಾಗಲೇ ಓಪನಿಂಗ್ ಸೆರೆಮನಿಯ ಮ್ಯಾಚ್​​ನ ಲೈವ್​ ಸ್ಟ್ರೀಮ್ ಮಾಡಿಯಾಗಿದೆ. ಅದೇ ರೀತಿ ವೀಕೆಂಡ್ ಮ್ಯಾಚ್ ಹಾಗೂ ಪ್ಲೇಯ್​ ಆಫ್, ಫೈನಲ್​​ನ ಪ್ರದರ್ಶನ ಮಾಡಲು ಪಿವಿಆರ್​ ನಿರ್ಧರಿಸಿದೆ. ದೊಡ್ಡ ಪರದೆ ಮೇಲೆ ಕ್ರಿಕೆಟ್​ನ ನೀವು ಅನುಭವಿಸುವ ಅವಕಾಶವನ್ನು ಪಿವಿಆರ್ ನೀಡಿದೆ. ಇದಕ್ಕಾಗಿ ಬಿಸಿಸಿಐ ಜೊತೆ ಅವರು ಒಪ್ಪಂದ ಮಾಡಿಕೊಂಡಿದ್ದಾರೆ.

ಈ ಮೊದಲು ಕೆಲವು ಪಂದ್ಯಗಳನ್ನು ಪಿವಿಆರ್ ದೊಡ್ಡ ಪರದೆಮೇಲೆ ಪ್ರದರ್ಶನ ಮಾಡಿತ್ತು. ಆ ಸಂದರ್ಭದಲ್ಲಿ ಸಿನಿಮಾ ಮಂದಿ ಕಡೆಯಿಂದ ವಿರೋಧ ವ್ಯಕ್ತವಾಗಿತ್ತು. ‘ಪಿವಿಆರ್ ರೀತಿಯ ಪರದೆಗಳು ಇರೋದು ಸಿನಿಮಾ ಪ್ರದರ್ಶನಕ್ಕಾಗಿ. ಅಲ್ಲಿ ಕ್ರಿಕೆಟ್ ಸ್ಟ್ರೀಮ್ ಮಾಡೋದು ಎಷ್ಟು ಸರಿ’ ಎಂಬ ಪ್ರಶ್ನೆಯನ್ನು ವ್ಯಕ್ತಪಡಿಸಲಾಗಿತ್ತು. ಆದರೆ, ಇದಕ್ಕೆ ಪಿವಿಆರ್ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಏಕೆಂದರೆ ಕ್ರಿಕೆಟ್ ಪ್ರದರ್ಶನ ಮಾಡಿದಾಗ ಜನರು ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು.

ಹೀಗಾಗಿ ಮುಂದಿನ ದಿನಗಳಲ್ಲಿ ಸಂಜೆ ವೇಳೆಗೆ ಐಪಿಎಲ್ ಪ್ರದರ್ಶನಕ್ಕೆ ಒಂದಷ್ಟು ಸ್ಕ್ರೀನ್​ಗಳು ಮುಡಿಪಾಗಿ ಇಡಲು ಪಿವಿಆರ್ ನಿರ್ಧರಿಸಿದೆ. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೆ ಪರದೆಗಳ ಸಂಖ್ಯೆಯನ್ನು ಹೆಚ್ಚಿಸುವ ಆಲೋಚನೆಯೂ ಅವರಿಗೆ ಬಂದಿದೆ. ಮೆಟ್ರೋ ನಗರಗಳ ಜೊತೆ ಟೈಯರ್, ಟೈಯರ್ 3 ರೀತಿಯ ನರಗಳಲ್ಲೂ ಐಪಿಎಲ್ ಪ್ರದರ್ಶನ ಆಗಲಿದೆ.

ಇದನ್ನೂ ಓದಿ: ಹೆಚ್ಚು ಜಾಹೀರಾತು ತೋರಿಸಿದ್ದಕ್ಕೆ ದಂಡ ಕಟ್ಟಿದ ಪಿವಿಆರ್

ದೊಡ್ಡ ಸಿನಿಮಾಗಳಿಲ್ಲ

ಸದ್ಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬ್ಯುಸಿ ಇದ್ದಾರೆ. ಯುವಕರು ಸಂಜೆ ವೇಳೆಗೆ ಐಪಿಎಲ್ ಪಂದ್ಯ ನೋಡುತ್ತಾ ಸಮಯ ಕಳೆಯುತ್ತಾ ಇದ್ದಾರೆ. ಈ ಕಾರಣಕ್ಕೆ ದೊಡ್ಡ ಬಜೆಟ್ ಚಿತ್ರಗಳು ರಿಲೀಸ್ ಆಗುತ್ತಿಲ್ಲ. ಇದರಿಂದ ಆದಾಯಕ್ಕೆ ಬೇರೆ ಮೂಲ ಕಂಡುಕೊಳ್ಳುವ ಅನಿವಾರ್ಯತೆ ಮಲ್ಟಿಪ್ಲೆಕ್ಸ್​ಗೆ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:09 am, Tue, 25 March 25