ಯಶ್ನ ಪ್ರೀತಿಸುತ್ತಿದ್ದ ವಿಚಾರವನ್ನು ಈ ನಟಿಯರ ಬಳಿ ಹೇಳಿಕೊಂಡಿದ್ದ ರಾಧಿಕಾ ಪಂಡಿತ್
ಯಶ್ ಮತ್ತು ರಾಧಿಕಾ ಪಂಡಿಟ್ ಅವರ ಪ್ರೇಮಕಥೆಯ ರಹಸ್ಯವನ್ನು ಕನ್ನಡದ ನಟಿಯರು ಬಹಿರಂಗಪಡಿಸಿದ್ದಾರೆ. ‘ರಾಮಾಚಾರಿ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡ ಅವರು, ರಾಧಿಕಾ ಅವರು ತಮ್ಮ ಪ್ರೇಮ ಸಂಬಂಧವನ್ನು ದೃಢೀಕರಿಸಿದ್ದನ್ನು ಹಂಚಿಕೊಂಡಿದ್ದಾರೆ. ಈ ಜೋಡಿ 2016 ರಲ್ಲಿ ವಿವಾಹವಾಯಿತು ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

ರಾಧಿಕಾ ಪಂಡಿತ್ ಹಾಗೂ ಯಶ್ (Yash) ಪ್ರೀತಿಸಿ ವಿವಾಹ ಆಗಿದ್ದಾರೆ. ಇವರ ದಾಂಪತ್ಯಕ್ಕೆ ಈಗ 10 ವರ್ಷಗಳು ತುಂಬುತ್ತಾ ಬಂದಿವೆ. ಈ ದಂಪತಿಗೆ ಇಬ್ಬರು ಮಕ್ಕಳು. ಇವರು ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ. ಯಶ್ ಜೊತೆಗಿನ ಪ್ರೀತಿ ವಿಚಾರವನ್ನು ರಾಧಿಕಾ ಪಂಡಿತ್ ಅವರು ಗುಟ್ಟಾಗಿ ಇಟ್ಟಿದ್ದರು. ಈ ಬಗ್ಗೆ ಅವರು ಹೆಚ್ಚು ಹೇಳಿಕೊಳ್ಳಲು ಹೋಗಿರಲಿಲ್ಲ. ಆದರೆ, ಈ ನಟಿಯರ ಬಳಿ ರಾಧಿಕಾ ಪಂಡಿತ್ ಅವರು ತಮ್ಮ ಪ್ರೀತಿ ವಿಚಾರವನ್ನು ಹೇಳಿಕೊಂಡಿದ್ದರು. ಆ ಬಗ್ಗೆ ನಟಿಯರು ಮಾತನಾಡಿದ್ದಾರೆ.
ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್ಗೆ ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ ಸಂದರ್ಶನ ನೀಡಿದ್ದಾರೆ. ಇವರು ಟ್ವಿನ್ಸ್. ಇಬ್ಬರೂ ‘ರಾಮಾಚಾರಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಒಬ್ಬರು ಒಳ್ಳೆಯ ಮನಸ್ಸಾಗಿ ಕಾಣಿಸಿಕೊಂಡರೆ, ಮತ್ತೊಬ್ಬರು ಕೆಟ್ಟ ಮನಸ್ಸು ಎಂಬರ್ಥದಲ್ಲಿ ಇವರ ಪಾತ್ರ ಇತ್ತು. ಈ ಸಿನಿಮಾಗಳ ಮೂಲಕ ಇವರಿಗೆ ಖ್ಯಾತಿ ಸಿಕ್ಕಿದೆ. ಅವರು ಸಂದರ್ಶನದಲ್ಲಿ ಹಳೆಯ ಘಟನೆಯ ಬಗ್ಗೆ ಮಾತನಾಡಿದ್ದಾರೆ.
‘ಮೈಸೂರಿನಲ್ಲಿ ಶೂಟಿಂಗ್ ಮಾಡುತ್ತಿದ್ದೆವು. ಒಂದೇ ಗ್ಲಾಸ್ ಮೂಲಕ ಯಶ್-ರಾಧಿಕಾ ಜ್ಯೂಸ್ ಕುಡಿಯುವ ದೃಶ್ಯ ಶೂಟ್ ಮಾಡುತ್ತಾ ಇದ್ದೆವು. ರಾಧಿಕಾ ನಮ್ಮ ಬಳಿ ಕೂತಿದ್ದರು. ರಾಧಿ ನಿಮ್ಮ ಬಳಿ ಏನೋ ಕೇಳೋದು ಇದೆ ಎಂದು ಹೇಳಿದೆವು. ಇದಕ್ಕೆ ರಾಧಿಕಾ ನೀವು ಏನು ಅಂದುಕೊಂಡಿದ್ದೀರೋ ಅದೆ ಎಂದರು. ಯೆಸ್ ಎಂದರು. ನಮಗೆ ಶಾಕ್ ಆಯ್ತು’ ಎಂದರು.
ಇದನ್ನೂ ಓದಿ: ಶಿವಣ್ಣನ ಮನೆಗೆ ಯಶ್-ರಾಧಿಕಾ ಪಂಡಿತ್ ಭೇಟಿ, ಇಲ್ಲಿವೆ ನೋಡಿ ಚಿತ್ರ
‘ನೀವು ಡೇಟ್ ಮಾಡ್ತೀರಾ ಎಂದು ನಾನು ಕೇಳೋಕೆ ಹೊರಟಿದ್ದು. ಅವರಿಗೆ ಆ ವಿಚಾರ ಗೊತ್ತಾಗಿ ಯೆಸ್ ಎಂದರು. ಆ ಕ್ಷಣ ಸಖತ್ ಕ್ಯೂಟ್ ಆಗಿ ಇತ್ತು’ ಎಂದು ಅದ್ವಿತಿ ಅವರು ಅಂದು ನಡೆದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದರು. 2016ರಲ್ಲಿ ಇವರು ವಿವಾಹ ಆದರು. ಈ ಜೋಡಿಗೆ ಈಗ ಆಯ್ರಾ ಹಾಗೂ ಯಥರ್ವ್ ಹೆಸರಿನ ಇಬ್ಬರು ಮಕ್ಕಳು ಇದ್ದಾರೆ. ಇವರ ದಾಂಪತ್ಯ ಸುಖವಾಗಿ ಸಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.