AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೌಂಡೇಶನ್ ಪ್ರಶಸ್ತಿ ಪ್ರದಾನ ಸಮಾರಂಭ, ಪ್ರಶಸ್ತಿಗಳ ಮೇಲೆ ಸ್ಟಾರ್​ಗಳ ಕಣ್ಣು

Dada saheb phalke film foundation award: ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಫೌಂಡೇಶನ್ ಪ್ರಶಸ್ತಿಯು ಮುಂಬೈನಲ್ಲಿ ಮೇ 20ರಂದು ನಡೆಯಲಿದೆ.

ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೌಂಡೇಶನ್ ಪ್ರಶಸ್ತಿ ಪ್ರದಾನ ಸಮಾರಂಭ, ಪ್ರಶಸ್ತಿಗಳ ಮೇಲೆ ಸ್ಟಾರ್​ಗಳ ಕಣ್ಣು
ದಾದಾ ಸಾಹೇಬ್ ಫಾಲ್ಕೆ ಫೌಂಡೇಶನ್ ಅವಾರ್ಡ್
ಮಂಜುನಾಥ ಸಿ.
|

Updated on: May 19, 2023 | 7:10 PM

Share

ಚಿತ್ರರಂಗದಲ್ಲಿ (Movie Industry) ಹಲವು ವರ್ಷ ದುಡಿದು ಸಾಧನೆ ಮಾಡಿದವರಿಗೆ ಚಿತ್ರರಂಗ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ. ಈ ಪ್ರಶಸ್ತಿಗಳು ತಾರೆಯರು ಮತ್ತು ಮನರಂಜನಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಇತರರಿಗೆ ಸ್ಪೂರ್ತಿ ನೀಡುತ್ತದೆ. ಪೂರ್ಣ ಹೃದಯದಿಂದ ಕೆಲಸ ಮಾಡಲು ಒಂದು ಕಾರಣವನ್ನು ನೀಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾಳೆ ಅಂದರೆ ಮೇ 20 ರಂದು ಮುಂಬೈನಲ್ಲಿ ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೌಂಡೇಶನ್ ಪ್ರಶಸ್ತಿ (Dada saheb phalke film foundation award) ಪ್ರದಾನ ಸಮಾರಂಭ ನಡೆಯಲಿದೆ. ಈ ಪ್ರಶಸ್ತಿಯು ಅನೇಕ ತಾರೆಯರಿಗೆ ಪ್ರಮುಖವಾದ ಪ್ರಶಸ್ತಿಯಾಗಿದೆ.

ಟಿವಿ ಸೆಲೆಬ್ರಿಟಿಗಳಿಂದ ಹಿಡಿದು ಬಾಲಿವುಡ್​ನ ಅನೇಕ ತಾರೆಯರು ಈ ದೊಡ್ಡ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನಾಳೆ (ಮೇ 20) ಸಂಜೆ 6 ಗಂಟೆಯಿಂದ ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೌಂಡೇಶನ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ತಾರಾ ಸಂಜೆಯ ಎಲ್ಲಾ ವ್ಯವಸ್ಥೆಗಳನ್ನು ಎಂಪಿ ಆಡಿಟೋರಿಯಂ, ಜೆವಿಪಿಡಿ ಸ್ಕೀಮ್, ವೈಲ್ ಪಾರ್ಲೆ ವೆಸ್ಟ್, ಮುಂಬೈನಲ್ಲಿ ಮಾಡಲಾಗಿದೆ. ಈ ಅವಾರ್ಡ್ ನೈಟ್ ನಲ್ಲಿ ಕಿರುತೆರೆಯಿಂದ ಬಾಲಿವುಡ್ ವರೆಗಿನ ಹಲವು ಸುಂದರಿಯರು ಭಾಗವಹಿಸಲಿದ್ದಾರೆ.

ಈ ಹಿಂದೆ ನಡೆದ ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೌಂಡೇಶನ್ ಪ್ರಶಸ್ತಿ ಸಮಾರಂಭದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ಹಿರಿಯ ನಟಿ ಮನಿಶಾ ಕೊಯಿರಾಲಾ, ಕಾರ್ತಿಕ್ ಆರ್ಯನ್ ಮುಂತಾದ ಅನೇಕ ದೊಡ್ಡ ತಾರೆಯರು ಭಾಗವಹಿಸಿದ್ದಾರೆ. ಹೀಗಿರುವಾಗ ನಾಳಿನ ಕಾರ್ಯಕ್ರಮವೂ ಗ್ಲಾಮರ್ ಹಾಗೂ ದೊಡ್ಡ ತಾರೆಯರಿಂದಲೇ ಕೂಡಿರುವ ನಿರೀಕ್ಷೆ ಇದೆ. ಮತ್ತೊಂದೆಡೆ, ನಾವು ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೌಂಡೇಶನ್ ಪ್ರಶಸ್ತಿಯ ತೀರ್ಪುಗಾರರ ಸದಸ್ಯರ ಬಗ್ಗೆ ಮಾತನಾಡುವುದಾದರೆ, ಉದ್ಯಮಕ್ಕೆ ಸಂಬಂಧಿಸಿದ ಹಲವು ಪ್ರಮುಖರ ಹೆಸರುಗಳು ಪಟ್ಟಿಯಲ್ಲಿವೆ.

ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೆ ಆಯ್ಕೆ ಆದ ಅದ್ವಿತಿ ಶೆಟ್ಟಿ ನಟನೆಯ ‘ಬ್ರಹ್ಮ ಕಮಲ’ ಸಿನಿಮಾ

ಎಲ್ಲರು ನಿರೀಕ್ಷೆ ಇಟ್ಟಿರುವ ನಾಲ್ಕು ವಿಭಾಗಗಳೆಂದರೆ ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಮತ್ತು ನಟಿ ಅತ್ಯುತ್ತಮ ಹೊಸ ನಟ-ನಟಿ. ಇದರ ಹೊರತಾಗಿ, ಅನೇಕ ವಿಭಾಗಗಳಲ್ಲಿ ಸ್ಟಾರ್‌ಗಳು ಮತ್ತು ಮನರಂಜನೆಗೆ ಸಂಬಂಧಿಸಿದ ಜನರಿಗೆ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ಪ್ರದಾನದ ಜೊತೆಗೆ ಮನರಂಜನೆಯ ಡೋಸ್ ಇರುತ್ತದೆ. ಈವೆಂಟ್‌ನಲ್ಲಿ ಸುಂದರಿಯರು ಮತ್ತು ನಟರು ಕೂಡ ನೃತ್ಯ ಪ್ರದರ್ಶಿಸಲಿದ್ದಾರೆ. ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೌಂಡೇಶನ್ ಪ್ರಶಸ್ತಿಗೆ ಇನ್ನೂ ಒಂದು ದಿನ ಬಾಕಿ ಇದೆ. ಆದರೆ ಈಗಿನಿಂದ ಎಲ್ಲೆಡೆ ಚರ್ಚೆಯಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ