‘ಹೇರಾ ಫೇರಿ 3’ ಚಿತ್ರದಲ್ಲಿ ನಟಿಸಬೇಕಿತ್ತು ಕಾರ್ತಿಕ್ ಆರ್ಯನ್; ಆಮೇಲೇನಾಯ್ತು?
Karthik Aryan: ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಕೆಲ ತಿಂಗಳ ಹಿಂದಷ್ಟೆ ‘ಭೂಲ್ ಭುಲಯ್ಯ 2’ ಹಿಟ್ ಸಿನಿಮಾ ನೀಡಿದ್ದಾರೆ. ಮೊದಲ ಭೂಲ್ ಭುಲಯ್ಯ ಸಿನಿಮಾದಲ್ಲಿ ಅಕ್ಷಯ್ ನಟಿಸಿದ್ದರು. ಆ ನಂತರ ಅವರ ಬದಲು ಕಾರ್ತಿಕ್ ಅವರನ್ನು ಹಾಕಿಕೊಳ್ಳಲಾಯ್ತು. ಈಗ ಅಕ್ಷಯ್ ನಟಿಸಿದ್ದ ‘ಹೇರಾ ಪೇರಿ’ ಸಿನಿಮಾದ ಸೀಕ್ವೆಲ್ಗೂ ಕಾರ್ತಿಕ್ ಆರ್ಯನ್ ಅವರನ್ನೇ ಹಾಕಿಕೊಳ್ಳಲಾಗಿತ್ತು. ಆದರೆ ಕಾರಣಾಂತರದಿಂದ ಇದೀಗ ಕಾರ್ತಿಕ್ ಅವರನ್ನು ಪ್ರಾಜೆಕ್ಟ್ನಿಂದ ಕೈಬಿಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

‘ಹೇರಾ ಫೇರಿ’ ಮತ್ತು ‘ಫಿರ್ ಹೇರಾ ಫೇರಿ’ ಬಾಲಿವುಡ್‌ನ ಹಿಟ್ ಚಿತ್ರಗಳಲ್ಲಿ ಸೇರಿವೆ. ಈ ಚಿತ್ರಗಳಲ್ಲಿ ನಟರಾದ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಕಾಣಿಸಿಕೊಂಡಿದ್ದರು. ಅವರು ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಈಗ ‘ಹೇರಾ ಫೇರಿ 3′ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಪರೇಶ್ ರಾವಲ್ ಜೊತೆಗೆ ನಟ ಕಾರ್ತಿಕ್ ಆರ್ಯನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಈಗ ಕಾರ್ತಿಕ್ ಅವರನ್ನು ಚಿತ್ರದಿಂದ ತೆಗೆದುಹಾಕಲಾಗಿದೆ. ಈ ಬಗ್ಗೆ ಸ್ವತಃ ಪರೇಶ್ ರಾವಲ್ ಮಾಹಿತಿ ನೀಡಿದ್ದಾರೆ.
ಪರೇಶ್ ರಾವಲ್ ಇತ್ತೀಚೆಗೆ ಸಿದ್ಧಾರ್ಥ್ ಕಣ್ಣನ್ ಅವರಿಗೆ ಸಂದರ್ಶನ ನೀಡಿದರು. ಈ ಸಂದರ್ಶನದಲ್ಲಿ, ಅವರು ಚಿತ್ರಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಹೇಳಿಕೆಗಳನ್ನು ನೀಡಿದರು. ‘ಹೇರಾ ಫೇರಿ 3’ ಚಿತ್ರದ ಸ್ಕ್ರಿಪ್ಟ್ ಎಷ್ಟು ಇಷ್ಟವಾಯಿತೇ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಪರೇಶ್ ರಾವಲ್, ‘ನಾನು ನೀರಜ್ ವೋಹ್ರಾ (ನಿರ್ದೇಶಕ) ಅವರ ಜೊತೆ ಮಾತನಾಡುತ್ತಿದ್ದೆ. ನೀವು ಅದರಲ್ಲಿ ದೃಶ್ಯಗಳನ್ನು ತುಂಬುತ್ತಿದ್ದೀರಿ, ಅದರ ಅಗತ್ಯವಿಲ್ಲ. ಮೊದಲ ಚಿತ್ರದಲ್ಲಿದ್ದ ಸರಳತೆಯನ್ನು ಕಾಪಾಡಿಕೊಳ್ಳಲು ನಾನು ಅವರಿಗೆ ಹೇಳಿದೆ. ನೀವು ದೃಶ್ಯಗಳನ್ನು ಅತಿಯಾಗಿ ತುಂಬಿಸಿದರೆ, ಅದು ಗಲೀಜಾಗಿ ಕಾಣುತ್ತದೆ. ಜನರು ಏನೇ ಸಿಕ್ಕರೂ ನಗುತ್ತಾರೆ. ಯಾರಾದರೂ ಬೆತ್ತಲೆಯಾಗಿ ಓಡುತ್ತಿದ್ದರೆ ನಗುತ್ತಾರೆ, ಆದರೆ ನಾವು ಬೆತ್ತಲೆಯಾಗಿ ತೋರಿಸಿಕೊಳ್ಳುವ ಅಗತ್ಯವಿಲ್ಲ. ಏನು ತೋರಿಸಬೇಕು, ಏನು ತೋರಿಸಬಾರದು ಎಂಬುದರ ಅರಿವು ನಿಮಗಿರಬೇಕು ಎಂದು ಅವರಿಗೆ ಹೇಳಿದ್ದೆ’ ಎಂದಿದ್ದಾರೆ ಪರೇಶ್ ಅವರು.
ಇದನ್ನೂ ಓದಿ:80 ಕೋಟಿ ರೂಪಾಯಿಗೆ ಅಪಾರ್ಟ್ಮೆಂಟ್ ಮಾರಿಕೊಂಡ ಅಕ್ಷಯ್ ಕುಮಾರ್
ಈ ಸಂದರ್ಶನದಲ್ಲಿ, ಪರೇಶ್ ರಾವಲ್ ‘ಹೇರಾ ಫೆರಿ 3’ ತಾರಾಗಣದ ಬಗ್ಗೆಯೂ ಮಾತನಾಡಿದರು. ‘ಈ ಚಿತ್ರಕ್ಕೆ ಕಾರ್ತಿಕ್ ಆರ್ಯನ್ ಅವರನ್ನು ತೆಗೆದುಕೊಳ್ಳಲಾಗಿತ್ತು. ಆ ಸಮಯದಲ್ಲಿ ಚಿತ್ರದ ಕಥೆಯೇ ಬೇರೆಯಾಗಿತ್ತು. ನನಗೆ ಗೊತ್ತಿರೋದು ಇಷ್ಟೇ. ರಾಜು ಪಾತ್ರಕ್ಕಾಗಿ ಕಾರ್ತಿಕ್ ಅವರನ್ನು ಆಯ್ಕೆ ಮಾಡಲಾಗಿಲ್ಲ’ ಎಂದು ಪರೇಶ್ ಹೇಳಿದ್ದಾರೆ. ‘ಹೇರಾ ಫೇರಿ 3’ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರೇ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ