Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚ್ಛೇದನ ವದಂತಿಗೆ ಸ್ಪಷ್ಟನೆ ನೀಡಿದ ಗೋವಿಂದ; ಒಪ್ಪಿಕೊಂಡ್ರಾ?

ಗೋವಿಂದ ಮತ್ತು ಸುನಿತಾ ಅಹುಜಾ ಅವರ ವಿಚ್ಛೇದನದ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿವೆ. 37 ವರ್ಷಗಳ ಸಂಸಾರದ ನಂತರ ಈ ದಂಪತಿಗಳು ಬೇರ್ಪಡುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಆತಂಕವನ್ನುಂಟುಮಾಡಿದೆ. ಆದರೆ ಗೋವಿಂದ ಅವರ ಮ್ಯಾನೇಜರ್ ಈ ಸುದ್ದಿಯನ್ನು ತಳ್ಳಿಹಾಕಿದ್ದಾರೆ ಎಂದು ವರದಿ ಆಗಿದೆ.

ವಿಚ್ಛೇದನ ವದಂತಿಗೆ ಸ್ಪಷ್ಟನೆ ನೀಡಿದ ಗೋವಿಂದ; ಒಪ್ಪಿಕೊಂಡ್ರಾ?
ಸುನಿತಾ-ಗೋವಿಂದ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Feb 26, 2025 | 8:02 AM

ಸೆಲೆಬ್ರಿಟಿಗಳ ವಲಯದಲ್ಲಿ ವಿಚ್ಛೇದನ ಎಂಬುದು ಸರ್ವೇ ಸಾಮಾನ್ಯ ಆಗಿದೆ. ಗೋವಿಂದ ಹಾಗೂ ಸುನಿತಾ ಅಹುಜಾ ಇಬ್ಬರೂ ಬೇರೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಹುಟ್ಟಿಕೊಂಡಿದ್ದು ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿ ಮಾಡಿದೆ. 37 ವರ್ಷಗಳ ಸುಖವಾಗಿ ಸಂಸಾರ ನಡೆಸಿದ್ದ ಇವರು ಈಗ ನಿಜಕ್ಕೂ ಬೇರೆ ಆಗುತ್ತಿದ್ದಾರಾ ಎಂಬ ವಿಚಾರ ತಿಳಿದು ಫ್ಯಾನ್ಸ್ ಗೊಂದಲಕ್ಕೆ ಒಳಗಾಗಿದ್ದರು. ಈ ಬಗ್ಗೆ ಗೋವಿಂದ ಅವರ ಮ್ಯಾನೇಜರ್ ಉತ್ತರಿಸಿದ್ದಾರೆ.

ಗೋವಿಂದ ಅವರಾಗಲೀ, ಸುನೀತಾ ಅವರಾಗಲೀ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಗೋವಿಂದ ಅವರು ಈ ವಿಚಾರವನ್ನು ತಳ್ಳಿ ಹಾಕಿದರು ಎಂದು ಹೇಳಲಾಗುತ್ತಿದೆ. ಗೋವಿಂದ ಹಾಗೂ ಸುನಿತಾ ಅವರು ವೈಯಕ್ತಿಕ ವಿಚಾರಗಳನ್ನು ಹೆಚ್ಚು ರಿವೀಲ್ ಮಾಡಲು ಹೋಗಿಲ್ಲ. ಇವರು ಕಳೆದ ಕೆಲ ಸಮಯದಿಂದ ಬೇರೆ ಆಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಇವರು ವಿಚ್ಛೇದನ ಪಡೆದುಕೊಳ್ಳುವ ಯಾವುದೇ ಆಲೋಚನೆ ಹೊಂದಿಲ್ಲ ಎನ್ನಲಾಗಿದೆ.

ಮರಾಠಿ ನಟಿಯೊಂದಿಗೆ ಗೋವಿಂದ ಆಪ್ತತೆ ಹೊಂದಿದರು ಎಂದು ಹೇಳಲಾಗಿದೆ. ಈ ಕಾರಣದಿಂದಲೇ ಸುನಿತಾಗೆ ಗೋವಿಂದ ಬಗ್ಗೆ ಅಸಮಾಧಾನ ಮೂಡಿದೆಯಂತೆ. ಇಬ್ಬರ ಮಧ್ಯೆ ಬಿರುಕು ಮೂಡಲು ಇದು ಪ್ರಮುಖ ಕಾರಣ ಆಯಿತು ಎಂದು ಹೇಳಲಾಗಿದೆ. ಈಗ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.

ಗೋವಿಂದ ಅವರ ಕಾರ್ಯದರ್ಶಿ ಶಶಿ ಸಿನ್ಹಾ ಅವರು ಈ ವಿಚಾರವನ್ನು ತಳ್ಳಿ ಹಾಕಿದ್ದಾರೆ. ಇದರಲ್ಲಿ ಯಾವುದೇ ಸತ್ಯ ಇಲ್ಲ ಎಂದು ಹೇಳಿದ್ದಾರೆ. ಗಾಸಿಪ್ ಹುಟ್ಟಿಕೊಂಡರೆ ಅದನ್ನು ನಿಯಂತ್ರಿಸೋದು ಕಷ್ಟ ಎಂಬುದು ದಂಪತಿಗೆ ಅರ್ಥವಾಗಿದೆ. ಹೀಗಾಗಿ, ಆರಂಭದಲ್ಲೇ ಇದನ್ನು ಚಿವುಟುವ ಪ್ರಯತ್ನ ಮಾಡಿದ್ದಾರೆ. ‘ಈ ವರದಿಗಳಲ್ಲಿ ಸತ್ಯ ಇಲ್ಲ. ನಾನು ಗೋವಿಂದ ಅವರ ಜೊತೆಯೇ ಇದ್ದೇನೆ. ಆ ರೀತಿ ಏನೂ ಇಲ್ಲ’ ಎಂದಿದ್ದಾರೆ.

ಇದನ್ನೂ ಓದಿ: 37 ವರ್ಷ ಸಂಸಾರ ಮಾಡಿ ಈಗ ವಿಚ್ಛೇದನ ಪಡೆಯಲು ಮುಂದಾದ ನಟ ಗೋವಿಂದ?

ಇತ್ತೀಚೆಗೆ ಗೋವಿಂದ ಅವರ ಕಾಲಿಗೆ ಗುಂಡೇಟು ಆಗಿತ್ತು.  ಅವರದ್ದೇ ಗನ್​ನಿಂದ ಬುಲೆಟ್ ಹಾರಿ ಈ ಅವಘಡ ಉಂಟಾಗಿತ್ತು. ಇದು ಸಾಕಷ್ಟು ಚರ್ಚೆ ಸೃಷ್ಟಿಸಿತ್ತು. ಗೋವಿಂದ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಅಚಾನಕ್ಕಾಗಿ ಗುಂಡು ಸಿಡಿದು ಸಮಸ್ಯೆ ಆಗಿದೆ ಎಂದು ಹೇಳಲಾಗಿತ್ತು. ಆದರೆ, ಈ ವಾದವನ್ನು ಪೊಲೀಸರು ಒಪ್ಪಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ