AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ವರ್ಷ ಮೋಹನ್​ಲಾಲ್ ನಟನೆಯ 34 ಚಿತ್ರಗಳು ರಿಲೀಸ್; 25 ಸೂಪರ್ ಹಿಟ್

ಮೋಹನ್​ಲಾಲ್ ಅವರಿಗೆ ಈಗ 65ನೇ ಜನ್ಮದಿನ. ಅವರ 45 ವರ್ಷಗಳ ಚಲನಚಿತ್ರ ಜೀವನದ ಅಪರೂಪದ ಸಾಧನೆ ಮಾಡಿದ್ದಾರೆ. 1986ರಲ್ಲಿ 34 ಚಿತ್ರಗಳಲ್ಲಿ ನಟಿಸಿ ದಾಖಲೆ ನಿರ್ಮಿಸಿದರು. 'ವಾನಪ್ರಸ್ತಮ್' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದರು. ಕೇರಳ ರಾಜ್ಯ ಕುಸ್ತಿ ಚಾಂಪಿಯನ್ ಆಗಿದ್ದರು. 31 ಹಾಡುಗಳನ್ನು ಹಾಡಿದ್ದಾರೆ.

ಒಂದೇ ವರ್ಷ ಮೋಹನ್​ಲಾಲ್ ನಟನೆಯ 34 ಚಿತ್ರಗಳು ರಿಲೀಸ್; 25 ಸೂಪರ್ ಹಿಟ್
ಮೋಹನ್​ಲಾಲ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: May 21, 2025 | 8:05 AM

Share

ಮೋಹನ್​ಲಾಲ್ (Mohanlal) ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಅವರಿಗೆ ಇಂದು (ಮೇ 21) ಜನ್ಮದಿನ. ಅವರ ಬಗ್ಗೆ ಹಲವು ಅಪರೂಪದ ವಿಚಾರಗಳು ಇವೆ. ಅವರಿಗೆ ಈಗ 65 ವರ್ಷ. ಈ ವಯಸ್ಸಿನಲ್ಲೂ ಅವರು ಶ್ರಮವಹಿಸಿ ನಟನೆ ಮಾಡುತ್ತಾ ಇದ್ದಾರೆ. ವಿಶೇಷ ಎಂದರೆ ಒಂದೇ ವರ್ಷ ಮೋಹನ್​ಲಾಲ್ ನಟನೆಯ 34 ಚಿತ್ರಗಳು ರಿಲೀಸ್ ಆದವು! ಈ ಪೈಕಿ 25 ಚಿತ್ರಗಳು ಸೂಪರ್ ಹಿಟ್ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.

1980ರಲ್ಲಿ ರಿಲೀಸ್ ಆದ ‘ಮಂಜಿಲ್ ವಿರಿಂಜ ಪೂಕ್ಕಲ್’ ಸಿನಿಮಾದಲ್ಲಿ ಮೋಹನ್​ಲಾಲ್ ಅವರು ನಟಿಸಿದರು. ಇದು ಅವರ ನಟನೆಯ ಮೊದಲ ಚಿತ್ರ. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಬರೋಬ್ಬರಿ 45 ವರ್ಷಗಳ ಕಾಲ ಮೋಹನ್​ಲಾಲ್ ಅವರು ಬಣ್ಣದ ಬದುಕಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಮೊದಲ ಸಿನಿಮಾದ ಬಳಿಕ ಅವರಿಗೆ ಸಾಕಷ್ಟು ಆಫರ್​ಗಳು ಬಂದವು. ಎಲ್ಲವನ್ನೂ ಮಾಡಿದರು ಮೋಹನ್​ಲಾಲ್.

1983ರಲ್ಲಿ ಮೋಹನ್​ಲಾಲ್ ನಟನೆಯ 25ಕ್ಕೂ ಅಧಿಕ ಸಿನಿಮಾ ರಿಲೀಸ್ ಆಯಿತು. 1984ರಲ್ಲಿ 20ಕ್ಕೂ ಹೆಚ್ಚು ಚಿತ್ರ ತೆರೆಗೆ ಬಂತು. 1985ರಲ್ಲೂ 20ಕ್ಕೂ ಹೆಚ್ಚು ಚಿತ್ರ ರಿಲೀಸ್ ಆಯಿತು. 1986 ಅವರಿಗೆ ಗೋಲ್ಡನ್ ಪೀರಿಯಡ್ ಆಗಿತ್ತು ಎನ್ನಿ. ಆ ವರ್ಷ ಅವರ ನಟನೆಯ 34 ಸಿನಿಮಾಗಳು ರಿಲೀಸ್ ಆದವು. ಇದರಲ್ಲಿ ಸಕ್ಸಸ್ ರೇಟ್ ಹೆಚ್ಚಿತ್ತು. ಏಕೆಂದರೆ ಅವರ 25 ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡವು.

ಇದನ್ನೂ ಓದಿ
Image
‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ರಾವಲ್ ಹೊರ ನಡೆಯಲು ಅಕ್ಷಯ್ ಕುಮಾರ್ ಕಾರಣ
Image
3.5 ಲಕ್ಷ ಬೆಲೆಯ ಗೌನ್ ಧರಿಸಿ ಕಾನ್ ಸಿನಿಮೋತ್ಸವದಲ್ಲಿ ಮಿಂಚಿದ ಜಾನ್ವಿ
Image
ಹಿರಿಯ ನಟ ಪರೇಶ್ ರಾವಲ್ ವಿರುದ್ಧ ದೂರು, 25 ಕೋಟಿ ರೂ ಪರಿಹಾರಕ್ಕೆ ಒತ್ತಾಯ
Image
ಶಿವಣ್ಣ-ಗೀತಾ ದಂಪತಿಗೆ ವಿವಾಹ ವಾರ್ಷಿಕೋತ್ಸವ; ಇಲ್ಲಿದೆ ಅಪರೂಪದ ಚಿತ್ರಗಳು

ಮೋಹನ್​ಲಾಲ್ ಅವರ ‘ವಾನಪ್ರಸ್ತಮ್’ ಹೆಸರಿನ ಸಿನಿಮಾ ಕಮಾಲ್ ಮಾಡಿತು. ಈ ಚಿತ್ರ ಮೂರು ರಾಷ್ಟ್ರ ಪ್ರಶಸ್ತಿ ಆರು ರಾಜ್ಯ ಪ್ರಶಸ್ತಿಗಳನ್ನು ಪಡೆಯಿತು. ಈ ಚಿತ್ರಕ್ಕೆ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಇದು ಅವರ ವೃತ್ತಿಜೀವನದಲ್ಲಿ ಮೆಚ್ಚಿಕೊಂಡಿತು. ಅವರಿಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಸಿಕ್ಕಿದೆ.

ಇದನ್ನೂ ಓದಿ: ‘ಎಂಪುರಾನ್’ ಗೆಲ್ಲುತ್ತಿದ್ದಂತೆ ಮತ್ತೊಂದು ಚಿತ್ರದ ರಿಲೀಸ್ ದಿನಾಂಕ ಘೋಷಿಸಿದ ಮೋಹನ್​ಲಾಲ್

ಮೋಹನ್​ಲಾಲ್ ಅವರು ಪ್ರೊಫೆಷನಲ್ ವ್ರೆಸ್ಲರ್ ಆಗಿದ್ದರು. ಅವರು ಕೇರಳ ಸ್ಟೇಟ್ ವ್ರೆಸ್ಲಿಂಗ್ ಚಾಂಪಿಯನ್​ಶಿಪ್​ನಲ್ಲಿ (1977-78) ಭಾಗಿ ಆಗಿ ಗೆದ್ದರು. ಅವರು 31 ಹಾಡುಗಳನ್ನು ಹಾಡಿದ್ದು, ಅವೆಲ್ಲವೂ ಅವರದ್ದೇ ಚಿತ್ರಕ್ಕಾಗಿ ಹಾಡಿದ ಹಾಡುಗಳಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ