AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಿತಾಭ್ ಖರೀದಿಸಿದ ಈ ಮನೆಯಲ್ಲಿ ಈಗ ಯಾರೂ ಇಲ್ಲ; ಎಲ್ಲರೂ ಇಲ್ಲಿಂದ ದೂರ ಹೋಗಿದ್ದೇಕೆ?

ಅಮಿತಾಭ್ ಬಚ್ಚನ್ ಅವರ ಪ್ರತೀಕ್ಷಾ ಬಂಗಲೆಯು ಬಾಲಿವುಡ್ ಸೂಪರ್‌ಸ್ಟಾರ್‌ನ ಅನೇಕ ನೆನಪುಗಳನ್ನು ಹೊಂದಿದೆ. ಹರಿವಂಶರಾಯ್ ಬಚ್ಚನ್ ಅವರು ನಾಮಕರಣ ಮಾಡಿದ ಈ ಬಂಗಲೆಯಲ್ಲಿ ಅಮಿತಾಭ್ ಅವರ ಮಕ್ಕಳು ಜನಿಸಿದರು ಮತ್ತು ಬೆಳೆದರು. 'ಶೋಲೆ' ಚಿತ್ರದ ಯಶಸ್ಸಿನ ನಂತರ ಖರೀದಿಸಲ್ಪಟ್ಟ ಈ ಮನೆ, ಅವರ ಹೆತ್ತವರ ಮರಣದ ನಂತರ ಮುಚ್ಚಲ್ಪಟ್ಟಿದೆ.

ಅಮಿತಾಭ್ ಖರೀದಿಸಿದ ಈ ಮನೆಯಲ್ಲಿ ಈಗ ಯಾರೂ ಇಲ್ಲ; ಎಲ್ಲರೂ ಇಲ್ಲಿಂದ ದೂರ ಹೋಗಿದ್ದೇಕೆ?
ಅಮಿತಾಭ್
 ಶ್ರೀಲಕ್ಷ್ಮೀ ಎಚ್
| Edited By: |

Updated on: May 21, 2025 | 10:08 AM

Share

ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachan) ಅನೇಕ ಚಿತ್ರಗಳಲ್ಲಿ ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಬಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸುವಾಗ ಅಮಿತಾಭ್ ಬಚ್ಚನ್ ಅವರ ಜೀವನದಲ್ಲಿ ಅನೇಕ ಒಳ್ಳೆಯ ಮತ್ತು ಕೆಟ್ಟ ಘಟನೆಗಳು ಸಂಭವಿಸಿದವು. ಅದೆಲ್ಲವನ್ನೂ ಅವರು ಮೆಟ್ಟಿ ನಿಂತಿದ್ದಾರೆ. ಬಚ್ಚನ್ ಕುಟುಂಬವು ಮುಂಬೈನಲ್ಲಿ ಸಾಕಷ್ಟು ಆಸ್ತಿಯನ್ನು ಹೊಂದಿದೆ. ಅವುಗಳಲ್ಲಿ ಒಂದು ಜುಹುವಿನಲ್ಲಿರುವ ಬಿಗ್ ಬಿ ಅವರ ಬಂಗಲೆ. ಈ ಬಂಗಲೆಯ ಹೆಸರು ಪ್ರತೀಕ್ಷಾ. ಈ ಬಂಗಲೆ ಬಿಗ್ ಬಿ ಅವರ ಲೆಕ್ಕವಿಲ್ಲದಷ್ಟು ನೆನಪುಗಳನ್ನು ಹೊಂದಿದೆ. ಆದರೆ, ಈಗ ಇಲ್ಲಿ ಯಾರೂ ಇಲ್ಲ.

ಅಮಿತಾಭ್ ಬಚ್ಚನ್ ಅವರ ತಂದೆ ಹರಿವಂಶ ರಾಯ್ ಬಚ್ಚನ್ ಈ ಬಂಗಲೆಗೆ ಪ್ರತೀಕ್ಷಾ ಎಂದು ಹೆಸರಿಟ್ಟಿದ್ದರು. ಇದೇ ಮನೆಯಲ್ಲಿ ಅಮಿತಾಭ್ ಮತ್ತು ಜಯಾ ಬಚ್ಚನ್ ಮಗಳು ಶ್ವೇತಾ ಬಚ್ಚನ್ ಮತ್ತು ಮಗ ಅಭಿಷೇಕ್ ಬಚ್ಚನ್ ಅವರನ್ನು ಸ್ವಾಗತಿಸಿದರು. ಐಶ್ವರ್ಯಾ ಮತ್ತು ಅಭಿಷೇಕ್ ಅವರ ವಿವಾಹದ ಬಳಿಕ ಪ್ರತೀಕ್ಷಾ ಬಂಗಲೆಯಲ್ಲಿ ಸಂಸಾರ ಸಾಗಿತು. ಈ ಬಂಗಲೆಯ ಇತಿಹಾಸವೂ ತುಂಬಾ ಹಳೆಯದು.

1976 ರಲ್ಲಿ ಬಿಡುಗಡೆಯಾದ ‘ಶೋಲೆ’ ಚಿತ್ರದ ಯಶಸ್ಸಿನ ನಂತರ ಅಮಿತಾಭ್​ ಬಚ್ಚನ್ ಮತ್ತು ಜಯಾ ಬಚ್ಚನ್ ಒಂದು ಬಂಗಲೆ ಖರೀದಿಸಿದರು. ಆ ಸಮಯದಲ್ಲಿ, ಇಬ್ಬರೂ ಮದುವೆಯಾಗಿ ಮೂರು ವರ್ಷಗಳಾಗಿತ್ತು. ‘ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್’ನಲ್ಲಿ ಅಮಿತಾಬ್ ಬಚ್ಚನ್ ಒಮ್ಮೆ, ಬಂಗಲೆ ಬಗ್ಗೆ ಮಾತನಾಡಿದ್ದರು.

‘ಪ್ರತೀಕ್ಷಾ ಎಂದು ಬಂಗೆಲೆಗೆ ಏಕೆ ಹೆಸರಿಡಲಾಗಿದೆ ಎಂದು ಅನೇಕ ಜನರು ನನ್ನನ್ನು ಕೇಳಿದರು. ನಾನು ನನ್ನ ತಂದೆಯನ್ನು ಪ್ರತಿಕ್ಷಾ ಎಂಬ ಹೆಸರೇಕೆ ಎಂದು ಕೇಳಿದೆ? ಇದರ ಬಗ್ಗೆ ನನ್ನ ತಂದೆ ಹೇಳಿದ್ದರು. ‘ನಾವು ಎಲ್ಲವನ್ನೂ ಸ್ವಾಗತಿಸಲು ಉತ್ಸುಕರಾಗಿದ್ದೇವೆ. ಆದರೆ ಯಾರಿಗೂ ಕಾಯುವುದಿಲ್ಲ’ ಎಂಬರ್ಥ ಇದೆ ಎಂದು ತಂದೆ ವಿವರಿಸಿದ್ದರು. ಆರಾಧ್ಯ ಬಚ್ಚನ್ ಜನಿಸಿದ ನಂತರವೂ ಇದೇ ಬಂಗಲೆಗೆ ಕರೆತರಲಾಯಿತು. ಆರಾಧ್ಯಳನ್ನು ಆಕೆಯ ದಿವಂಗತ ಮುತ್ತಜ್ಜ ಮತ್ತು ಮುತ್ತಜ್ಜಿಯ ಆಶೀರ್ವಾದ ಪಡೆಯಲು ಪ್ರತೀಕ್ಷಾ ಬಂಗಲೆಗೆ ಕರೆತರಲಾಗಿತ್ತು.

ಇದನ್ನೂ ಓದಿ: ಆಪರೇಷನ್ ಸಿಂದೂರ್ ಬಗ್ಗೆ ತಡವಾಗಿ ಪ್ರತಿಕ್ರಿಯಿಸಿ ಟ್ರೋಲ್ ಆದ ಅಮಿತಾಭ್ ಬಚ್ಚನ್

ಹೆತ್ತವರ ಮರಣದ ನಂತರ, ಅಮಿತಾಭ್ ಬಚ್ಚನ್ ಮತ್ತು ಅವರ ಇಡೀ ಕುಟುಂಬವು ಜಲ್ಸಾಗೆ ಸ್ಥಳಾಂತರಗೊಂಡಿತು. 2007ರಲ್ಲಿ ತಾಯಿಯ ಮರಣದ ನಂತರ, ಬಂಗಲೆ ಮುಚ್ಚಲ್ಪಟ್ಟಿತು ಮತ್ತು ಎರಡು ದಶಕಗಳ ಕಾಲ ಮುಚ್ಚೇ ಇದೆ. ಅವರು ಬಂಗಲೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಅಮಿತಾಭ್ ಬಚ್ಚನ್ ತಮ್ಮ ಹೆತ್ತವರ ನೆನಪುಗಳನ್ನು ಈ ಬಂಗಲೆಯಲ್ಲಿ ಸಂರಕ್ಷಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ