ಶಿವಣ್ಣ-ಗೀತಾ ದಂಪತಿಗೆ ವಿವಾಹ ವಾರ್ಷಿಕೋತ್ಸವ; ಇಲ್ಲಿದೆ ಅಪರೂಪದ ಚಿತ್ರಗಳು
ಶಿವರಾಜ್ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ದಂಪತಿಗೆ ಇಂದು (ಮೇ 19) ವಿಶೇಷ ದಿನ ಎನಿಸಿಕೊಂಡಿದೆ. ಇದಕ್ಕೆ ಕಾರಣ ಆಗಿರೋದು ಅವರ ವಿವಾಹ ವಾರ್ಷಿಕೋತ್ಸವ. ಈ ದಂಪತಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಈ ಸಂದರ್ಭದಲ್ಲಿ ಅವರ ಹಳೆಯ ಫೋಟೋ ವೈರಲ್ ಆಗಿದೆ.
ಶಿವರಾಜ್ಕುಮಾರ್ ಹಾಗೂ ಗೀತಾ ದಂಪತಿಗೆ ಇಂದು (ಮೇ 19) ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ದಂಪತಿಗೆ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆ ತಿಳಿಸುತ್ತಿದ್ದಾರೆ. ಇನ್ನಷ್ಟು ವರ್ಷಗಳ ಕಾಲ ಇವರು ಹೀಗೆ ಒಟ್ಟಾಗಿ ಬಾಳಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
1 / 5
ವಿವಾಹ ವಾರ್ಷಿಕೋತ್ಸವ ಎಂದಾಗ ಅವರ ಅಭಿಮಾನಿಗಳ ವಲಯದಲ್ಲಿ ಹಳೆಯ ಫೋಟೋಗಳು ವೈರಲ್ ಆಗೋದು ಸಾಮಾನ್ಯ. ಅದೇ ರೀತಿ, ಶಿವರಾಜ್ಕುಮಾರ್ ವಿವಾಹದ ಕ್ಷಣ ಹೇಗಿತ್ತು ಎಂಬುದರ ಝಲಕ್ ಸಿಕ್ಕಿದೆ. ಅಪರೂಪದ ಫೋಟೋಗಳು ಗಮನ ಸೆಳೆದಿವೆ.
2 / 5
ಶಿವಣ್ಣನ ಮದುವೆ ಸಂಭ್ರಮದಲ್ಲಿ ರಾಜ್ಕುಮಾರ್ ಅವರು ಖುಷಿಖುಷಿಯಿಂದ ಓಡಾಡಿಕೊಂಡಿದ್ದರು. ಕನ್ನಡ ಮಾತ್ರವಲ್ಲದೆ, ಬೇರೆ ಚಿತ್ರರಂಗದವರು ಕೂಡ ಆಗಮಿಸಿದ್ದರು ಮತ್ತು ದಂಪತಿಗೆ ಶುಭಾಶಯ ಕೋರಿದ್ದರು. ಈ ಫೋಟೋಗಳು ಗಮನ ಸೆಳೆದಿವೆ. ಅಣ್ಣಾವ್ರ ಫೋಟೋ ಹೈಲೈಟ್ ಆಗಿದೆ.
3 / 5
ಗೀತಾ ಅವರು ಪ್ರತಿ ಹಂತದಲ್ಲೂ ಶಿವರಾಜ್ಕುಮಾರ್ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಅವರನ್ನು ಪ್ರೋತ್ಸಾಹಿಸುತ್ತಾ ಬರುತ್ತಿದ್ದಾರೆ. ಇದು ಶಿವರಾಜ್ಕುಮಾರ್ ಅವರ ಬಲ ಹೆಚ್ಚಿಸಿದೆ. ಅವರಿಗೆ ಕ್ಯಾನ್ಸರ್ ಆದಾಗ ಗೀತಾ ಅವರು ಸಾಕಷ್ಟು ಸಹಾಯ ಮಾಡಿದ್ದರು.
4 / 5
ಗೀತಾ ಶಿವರಾಜ್ಕುಮಾರ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತೇನೆ ಎಂದಾಗ ಶಿವಣ್ಣ ಅವರು ಬೆಂಬಲ ನೀಡಿದರು. ಶಿವರಾಜ್ಕುಮಾರ್ ಅವರು ತಾವೇ ತೆರಳಿ ಪ್ರಚಾರ ಮಾಡಿದರು. ಆದರೆ, ಗೀತಾ ಅವರಿಗೆ ಚುನಾವಣೆಯಲ್ಲಿ ಗೆಲುವು ಸಿಗಲಿಲ್ಲ.