AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂನಿಯರ್ ಎನ್​ಟಿಆರ್​ಗೆ ‘9999’ ಸಂಖ್ಯೆ ಮೇಲೆ ಇದೆ ವಿಶೇಷ ಪ್ರೀತಿ; ಕಾರಣ ಏನು?

JR NTR Birthday: ಜೂನಿಯರ್ NTR ಅವರಿಗೆ ಇಂದು ಜನ್ಮದಿನ. ಅವರ ಅಪರೂಪದ ವಾಹನ ಸಂಖ್ಯೆ 9999, ಅವರ ಐಷಾರಾಮಿ ಕಾರುಗಳ ಸಂಗ್ರಹ, ಮತ್ತು ಅವರ ಕುಟುಂಬದ ಪರಂಪರೆಯ ಬಗ್ಗೆ ಇಲ್ಲಿ ನಾವು ಹೇಳುತ್ತಿದ್ದೇವೆ. ಜೂನಿಯರ್ ಎನ್​ಟಿಆರ್ ಒಡೆತನದ ಎಲ್ಲಾ ಕಾರುಗಳ ಮೇಲೆ 9999 ಸಂಖ್ಯೆಯನ್ನು ನೀವು ಕಾಣಬಹುದು.

ಜೂನಿಯರ್ ಎನ್​ಟಿಆರ್​ಗೆ ‘9999’ ಸಂಖ್ಯೆ ಮೇಲೆ ಇದೆ ವಿಶೇಷ ಪ್ರೀತಿ; ಕಾರಣ ಏನು?
ಜೂ.ಎನ್​ಟಿಆರ್ ಮತ್ತು ಕಾರ್ ಕಲೆಕ್ಷನ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: May 20, 2025 | 8:01 AM

Share

ನಟ ಜೂನಿಯರ್ ಎನ್​ಟಿಆರ್ (JR NTR) ಅವರಿಗೆ ಇಂದು (ಮೇ 20) ಜನ್ಮದಿನದ ಸಂಭ್ರಮ. ಅವರಿಗೆ ಟಾಲಿವುಡ್ ರಂಗದಲ್ಲಿ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅವರ ಮುಂದಿನ ಸಿನಿಮಾಗಳ ಅಪ್​ಡೇಟ್ ಕೂಡ ಸಿಗುತ್ತಿದೆ. ಈ ಮಧ್ಯೆ ಜೂನಿಯರ್​ ಎನ್​ಟಿಆರ್ ಅವರ ಬಗೆಗಿನ ಅಪರೂಪದ ವಿಚಾರಗಳ ಬಗ್ಗೆಯೂ ಚರ್ಚೆ ಆಗುತ್ತಿದೆ. ಜೂನಿಯರ್ ಎನ್​ಟಿಆರ್ ಒಡೆತನದ ಎಲ್ಲಾ ಕಾರುಗಳ ಮೇಲೆ 9999 ಸಂಖ್ಯೆಯನ್ನು ನೀವು ಕಾಣಬಹುದು. ಅಷ್ಟೇ ಏಕೆ ಟ್ವಿಟರ್​ ಹ್ಯಾಂಡಲ್​ನಲ್ಲಿಯೂ ಇದೆ ಸಂಖ್ಯೆಯನ್ನು ಅವರು ಹಾಕಿಕೊಂಡಿದ್ದಾರೆ. ಇದಕ್ಕೆ ಕಾರಣ ಇಲ್ಲಿದೆ.

ಜೂನಿಯರ್ ಎನ್​ಟಿಆರ್ ಬಳಿ ಬಿಎಂಡಬ್ಲ್ಯೂ ರೀತಿಯ ದುಬಾರಿ ಕಾರುಗಳು ಇವೆ. ರೇಂಜ್ ರೋವರ್ ಆಟೋಬಯೋಗ್ರಫಿ, ಲ್ಯಾಂಬೋರ್ಗಿನಿ ಉರುಸ್ ಕಾರು ಕೂಡ ಅವರ ಗ್ಯಾರೇಜ್​ನಲ್ಲಿ ಇದೆ. ಇದಕ್ಕೆ ಒಂದೇ ರೀತಿಯ ರಿಜಿಸ್ಟರ್ ಸಂಖ್ಯೆಯನ್ನು ನೀವು ಕಾಣಬಹುದು. ಅದುವೇ 9999.

ಈ ರೀತಿಯ ಫ್ಯಾನ್ಸಿ ಸಂಖ್ಯೆಯ ಹಾಗೆಯೇ ಸಿಕ್ಕಿ ಬಿಡುವುದಿಲ್ಲ. ಇದಕ್ಕಾಗಿ ಸಾಕಷ್ಟು ದೊಡ್ಡ ಮೊತ್ತದ ಹಣ ಪಾವತಿ ಮಾಡಬೇಕಾಗುತ್ತದೆ. ಜೂನಿಯರ್ ಎನ್​ಟಿಆರ್ ಅವರು ಪ್ರತಿ ಬಾರಿಯೂ ದೊಡ್ಡ ಮೊತ್ತವನ್ನು ಪಾವತಿಸಿ ಈ ಸಂಖ್ಯೆಯನ್ನು ಪಡೆಯುತ್ತಾರೆ. ಅಂದಹಾಗೆ ಈ ಸಂಖ್ಯೆಯನ್ನು ಅವರು ಕಾರಿಗೆ ಇಟ್ಟುಕೊಳ್ಳೋಕೂ ಒಂದು ಕಾರಣ ಇದೆ.

ಇದನ್ನೂ ಓದಿ
Image
ರಶ್ಮಿಕಾ ಬಗ್ಗೆ ಕಂಡ ಕನಸಿನ ಬಗ್ಗೆ ಓಪನ್ ಆಗಿ ಹೇಳಿದ ವಿಜಯ್ ದೇವರಕೊಂಡ
Image
ಸುಭಾಷ್ ಚಂದ್ರ ಬೋಸ್ ನನ್ನ ಬಳಿ ಬಂದು ಆ ಒಂದು ಮಾತು ಹೇಳಿದ್ದರು; ಅಜಿತ್
Image
ಶಿವಣ್ಣ-ಗೀತಾ ದಂಪತಿಗೆ ವಿವಾಹ ವಾರ್ಷಿಕೋತ್ಸವ; ಇಲ್ಲಿದೆ ಅಪರೂಪದ ಚಿತ್ರಗಳು
Image
ದರ್ಶನ್-ವಿಜಯಲಕ್ಷ್ಮೀ ವಿವಾಹ ವಾರ್ಷಿಕೋತ್ಸವ; ಮದುವೆ ಆಮಂತ್ರಣ ಪತ್ರ ವೈರಲ್

9 ಸಂಖ್ಯೆ ಮೇಲೆ ಅವರಿಗೆ ಸೆಂಟಿಮೆಂಟ್. ಅವರ ತಾತ ಎನ್​ಟಿ ರಾಮ್ ರಾವ್ ಅವರ ಕಾರಿನ ಸಂಖ್ಯೆ 9999 ಎಂದಿತ್ತು. ಜೂ. ಎನ್​ಟಿಆರ್ ಅವರ ತಂದೆ ನಂದಮೂರಿ ಹರಿಕೃಷ್ಣ ಅವರು ಇದನ್ನೇ ಫಾಲೋ ಮಾಡಿಕೊಂಡು ಬಂದರು. ಈಗ ಜೂನಿಯರ್ ಎನ್​ಟಿಆರ್ ಕೂಡ ಇದನ್ನೇ ಫಾಲೋ ಮಾಡುತ್ತಿದ್ದಾರೆ.

ಇದನ್ನೂ ಓದಿ: ಜೂನಿಯರ್ ಎನ್​ಟಿಆರ್​ ಬರ್ತ್​ಡೇಗೆ ಸರ್​ಪ್ರೈಸ್ ಗಿಫ್ಟ್ ಹಿಡಿದು ಬಂದ ಹೃತಿಕ್ ರೋಷನ್

ಜೂನಿಯರ್ ಎನ್​​ಟಿಆರ್ ಅವರು ‘ಆರ್​ಆರ್​’ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ಗ್ಯಾರೇಜ್​ನಲ್ಲಿ ಜಾಗ್ವಾರ್, ಆಡಿ ರೀತಿಯ ಕಾರುಗಳು ಇವೆ. ಅವರಿಗೆ ಕಾರಿನ ಬಗ್ಗೆ ಸಖತ್ ಕ್ರೇಜ್ ಇದೆ. ಈಗ ಅವರು ‘ವಾರ್ 2’ ಚಿತ್ರದ ಮೂಲಕ ಬಾಲಿವುಡ್​ಗೆ ಹಾರಲು ರೆಡಿ ಆಗಿದ್ದಾರೆ. ಅವರಿಗೆ ಅಲ್ಲಿ ಅದ್ದೂರಿ ಸ್ವಾಗತ ಸಿಗುತ್ತಾ ಇದೆ. ‘ದೇವರ 2’ ಹಾಗೂ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾಗಳೂ ಅವರ ಬಳಿ ಇವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.