ಜೂನಿಯರ್ ಎನ್ಟಿಆರ್ ಬರ್ತ್ಡೇಗೆ ಸರ್ಪ್ರೈಸ್ ಗಿಫ್ಟ್ ಹಿಡಿದು ಬಂದ ಹೃತಿಕ್ ರೋಷನ್
ಜೂನಿಯರ್ ಎನ್ಟಿಆರ್ ಅವರ ಜನ್ಮದಿನದಂದು, ಹೃತಿಕ್ ರೋಷನ್ ಅವರು "ವಾರ್ 2" ಚಿತ್ರದ ಗ್ಲಿಂಪ್ಸ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ. ಈ ಸುದ್ದಿ ಅಭಿಮಾನಿಗಳಲ್ಲಿ ಭಾರಿ ಸಂತೋಷವನ್ನುಂಟು ಮಾಡಿದೆ. "ವಾರ್ 2" ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಮತ್ತು ಹೃತಿಕ್ ರೋಷನ್ ಅಭಿನಯಿಸುತ್ತಿದ್ದು, ಈ ಗ್ಲಿಂಪ್ಸ್ ಜೂನಿಯರ್ ಎನ್ಟಿಆರ್ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡಲಿದೆ.

ಜೂನಿಯರ್ ಎನ್ಟಿಆರ್ ಅವರು ಮೇ 20ರಂದು ತಮ್ಮ ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ನೆಚ್ಚಿನ ನಟನ ಜನ್ಮದಿನ ಆಚರಿಸಿಕೊಳ್ಳಲು ಅಭಿಮಾನಿಗಳು ಪ್ಲ್ಯಾನ್ ಮಾಡಿದ್ದಾರೆ. ಇದರ ಜೊತೆಗೆ ಹೃತಿಕ್ ರೋಷನ್ ಅವರು ಜೂನಿಯರ್ ಎನ್ಟಿಆರ್ಗೆ ಒಂದು ವಿಶೇಷ ಉಡುಗೊರೆ ನೀಡಲು ರೆಡಿ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಭರ್ಜರಿ ಖುಷಿಪಟ್ಟಿದ್ದಾರೆ. ಹಾಗಾದರೆ ಸಿಗುತ್ತಿರೋ ಉಡುಗೊರೆ ಏನು? ‘ವಾರ್ 2’ (War 2 Movie) ಚಿತ್ರದ ಗ್ಲಿಂಪ್ಸ್ ವಿಡಿಯೋ.
‘ವಾರ್’ ಸಿನಿಮಾ ಹಿಟ್ ಆದ ಬಳಿಕ ‘ವಾರ್ 2’ ಸಿನಿಮಾ ಘೋಷಣೆ ಮಾಡಲಾಯಿತು. ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ಇದ್ದಾರೆ. ಹೃತಿಕ್ ಪಾತ್ರ ಏನು ಎಂಬುದು ಮೊದಲ ಪಾರ್ಟ್ನಲ್ಲೇ ಗೊತ್ತಾಗಿದೆ. ಈಗ ಕುತೂಹಲ ಇರೋದು ಜೂನಿಯರ್ ಎನ್ಟಿಆರ್ ಪಾತ್ರದ ಬಗ್ಗೆ. ಬರ್ತ್ಡೇ ದಿನ ಟೀಸರ್ ಅಥವಾ ಗ್ಲಿಂಪ್ಸ್ ರಿಲೀಸ್ ಆದರೆ ಸಿನಿಮಾದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಈ ಬಗ್ಗೆ ಟ್ವೀಟ್ ಮಾಡಿರೋ ಹೃತಿಕ್ ರೋಷನ್ ಜೂನಿಯರ್ ಎನ್ಟಿಆರ್ ಅವರಿಗೆ ಸರ್ಪ್ರೈಸ್ ಇದೆ ಎಂಬುದನ್ನು ಹೇಳಿದ್ದಾರೆ. ಈ ಟ್ವೀಟ್ ನೋಡಿದ ಬಳಿಕ ಜೂನಿಯರ್ ಎನ್ಟಿಆರ್ ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ. ಈ ಟೀಸರ್ ನೋಡಲು ಫ್ಯಾನ್ಸ್ ಕಾದಿದ್ದಾರೆ.
Hey @tarak9999, think you know what to expect on the 20th of May this year? Trust me you have NO idea what’s in store. Ready?#War2
— Hrithik Roshan (@iHrithik) May 16, 2025
ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್ಟಿಆರ್ ಇಬ್ಬರೂ ಡ್ಯಾನ್ಸ್ ಮಾಡುವುದರಲ್ಲಿ ಎತ್ತಿದ ಕೈ. ಇವರಿಬ್ಬರು ಹಾಡೊಂದಕ್ಕೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.
ಇದನ್ನೂ ಓದಿ: ಅವಕಾಶ ಕೇಳಿಕೊಂಡು ಬೇರೆಯವರ ಬಳಿ ಹೋಗಿದ್ದ ಹೃತಿಕ್ ರೋಷನ್; ತಂದೆಗೆ ಬಂದಿತ್ತು ಸಿಟ್ಟು
ಇದಲ್ಲದೆ, ‘ದೇವರ 2’ ಹಾಗೂ ಪ್ರಶಾಂತ್ ನೀಲ್ ಸಿನಿಮಾಗಳಲ್ಲೂ ಜೂನಿಯರ್ ಎನ್ಟಿಆರ್ ಅವರು ಅಭಿನಯಿಸುತ್ತಾ ಇದ್ದಾರೆ. ಈ ಸಿನಿಮಾಗಳ ಬಗ್ಗೆಯೂ ಫ್ಯಾನ್ಸ್ ಭರ್ಜರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜೂನಿಯರ್ ಎನ್ಟಿಆರ್ ಬರ್ತ್ಡೇ ಪ್ರಯುಕ್ತ ಈ ಸಿನಿಮಾಗಳ ಬಗ್ಗೆಯೂ ಅಪ್ಡೇಟ್ ಸಿಗೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:20 pm, Sat, 17 May 25







