ರಾಕೇಶ್ ಪೂಜಾರಿ ಸಾವಿನ ಬಗ್ಗೆ ಸಾಕಷ್ಟು ವದಂತಿ; ರೂಮ್ಮೇಟ್ ಹೇಳಿದ್ದೇನು?
ರಾಕೇಶ್ ಪೂಜಾರಿ ನಿಧನ ಹೊಂದಿರುವ ಬಗ್ಗೆ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ. ರಾಕೇಶ್ ಸಾವಿನ ಹಿಂದೆ ಎಲ್ಲರೂ ಒಂದೊಂದು ಕಥೆ ಕಟ್ಟುತ್ತಿದ್ದಾರೆ. ಆದರೆ, ಈ ಬಗ್ಗೆ ಅವರ ಗೆಳೆಯ ಪ್ರವೀಣ್ ಜೈನ್ ಅವರು ಮಾತನಾಡಿದ್ದಾರೆ. ಗೆಳೆಯನ ಬಗ್ಗೆ ಹುಟ್ಟಿಕೊಂಡ ವದಂತಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.
ರಾಕೇಶ್ ಪೂಜಾರಿ (Rakesh Poojary) ನಿಧನ ಹೊಂದಿ ಕೆಲವು ದಿನಗಳು ಕಳೆದಿದ್ದರೂ ಅವರ ಸಾವಿನ ಬಗ್ಗೆ ಹುಟ್ಟಿಕೊಂಡ ವದಂತಿಗಳು ನಿಂತಿಲ್ಲ. ಅವರ ಸಾವಿನ ಬಗ್ಗೆ ರಾಕೇಶ್ ಗೆಳೆಯ ಹಾಗೂ ರೂಮ್ಮೇಟ್ ಪ್ರವೀಣ್ ಜೈನ್ ಮಾತನಾಡಿದ್ದಾರೆ. ‘ತುಂಬಾ ಪ್ರೀತಿ ಮಾಡುತ್ತಿದ್ದ ತಂಗಿಯೇ ಬರಲಿಲ್ಲ. ನೋಡೋಕೆ ಬರೋಕೆ ಆಗಲ್ಲ ಎಂದರು. ಅವಳು ರಿಷಬ್ ಶೆಟ್ಟಿ ರೀತಿಯೇ ದೊಡ್ಡ ಸ್ಟಾರ್ ಆಗಿದ್ದರೆ ಇದೇ ರೀತಿ ಬಿಂಬಿಸುತ್ತಿದ್ದರೇನೋ’ ಎಂದು ಪ್ರವೀಣ್ ಹೇಳಿದ್ದಾರೆ. ಇನ್ನು ಸಾವಿನ ವದಂತಿ ಬಗ್ಗೆ ಮಾತನಾಡಿರುವ ಅವರು, ‘ಕೆಲವರು ಜಿಮ್ ಮಾಡಿದ್ದು ತಪ್ಪಾಯ್ತು ಎಂದರು, ಇನ್ನೂ ಕೆಲವರು ಡಿಜೆ ಸೌಂಡ್ ಇಂದ ಹೀಗಾಯ್ತು ಎಂದರು. ಆದರೆ, ಆ ದಿನ ಏನಾಯ್ತು ಅನ್ನೋದು ಅವನಿಗೆ ಮಾತ್ರ ಗೊತ್ತಿದೆ’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.