ಜೂನಿಯರ್ ಎನ್ಟಿಆರ್ ಕನ್ನಡ ಪ್ರೇಮಕ್ಕೆ ಈ ವ್ಯಕ್ತಿಯೇ ಕಾರಣ
Jr. NTR's Kannada Love: ಜೂನಿಯರ್ ಎನ್ಟಿಆರ್ ಅವರು ತೆಲುಗು ನಟರಾಗಿದ್ದರೂ ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. ಅವರ ತಾಯಿ ಕುಂದಾಪುರದವರು. ಪುನೀತ್ ರಾಜಕುಮಾರ್ ಜೊತೆ ಅವರ ನಿಕಟ ಸಂಬಂಧವಿದೆ. ಕನ್ನಡ ಚಿತ್ರಗಳಿಗೆ ಡಬ್ ಮಾಡುವುದು, ಕನ್ನಡ ಹಾಡು ಹಾಡುವುದು ಮತ್ತು ಕನ್ನಡದಲ್ಲಿ ಸಂದರ್ಶನ ನೀಡುವುದು ಇವರ ಕನ್ನಡ ಪ್ರೀತಿಗೆ ಸಾಕ್ಷಿ.

ಜೂನಿಯರ್ ಎನ್ಟಿಆರ್ (JR NTR) ಅವರು ಕನ್ನಡದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ ಅನ್ನೋದು ಅನೇಕರಿಗೆ ಗೊತ್ತು. ಅವರ ಬರ್ತ್ಡೇ ಪ್ರಯುಕ್ತ ಇದನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ. ಜೂನಿಯರ್ ಎನ್ಟಿಆರ್ ತೆಲುಗಿನವರೇ ಆದರೂ ಕನ್ನಡದ ಬಗ್ಗೆ ಅವರು ಅಪಾರ ಪ್ರೀತಿ ತೋರಿಸುತ್ತಾರೆ. ಅವರ ಚಿತ್ರಗಳು ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆದರೆ ತಾವೇ ಅದನ್ನು ಡಬ್ ಮಾಡಿ ಕೊಡುತ್ತಾರೆ. ಇದಕ್ಕಾಗಿ ಅವರು ಸಮಯ ಮೀಸಲಿಡುತ್ತಾರೆ. ಕನ್ನಡದಲ್ಲಿ ಅವರು ಹಾಡನ್ನು ಹಾಡಿದ್ದರು. ಬೆಂಗಳೂರಿನ ಸುದ್ದಿಗೋಷ್ಠಿಗಳಲ್ಲಿ ಅವರು ಕನ್ನಡವನ್ನೇ ಮಾತನಾಡುತ್ತಾರೆ.
ಜೂನಿಯರ್ ಎನ್ಟಿಆರ್ ಅವರು ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲಿ ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ ಎಂಬುದು ಎಲ್ಲರಿಗೂ ತಿಳಿದಿರೋ ವಿಚಾರ. ಅವರ ತಾಯಿ ಕುಂದಾಪುರದವರು. ಹೀಗಾಗಿ, ಸಣ್ಣ ವಯಸ್ಸಿನಿಂದಲೇ ಕನ್ನಡದ ಪರಿಚಯ ಜೂನಿಯರ್ ಎನ್ಟಿಆರ್ ಅವರಿಗೆ ಆಯಿತು. ಅವರು ಕನ್ನಡ ಮಾತನಾಡುವುದನ್ನು ಸ್ವಲ್ಪ ಸ್ವಲ್ಪ ಕಲಿತರು.
ಪುನೀತ್ ರಾಜ್ಕುಮಾರ್ ಜೊತೆ ಜೂನಿಯರ್ ಎನ್ಟಿಆರ್ಗೆ ಒಳ್ಳೆಯ ಗೆಳೆತನ ಬೆಳೆಯಿತು. ಈ ಭೇಟಿ ವೇಳೆ ಇಬ್ಬರೂ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದರೇನೋ. ಈ ಕಾರಣಕ್ಕೂ ಜೂನಿಯರ್ ಎನ್ಟಿಆರ್ ಅವರಿಗೆ ಕನ್ನಡ ಬರುತ್ತದೆ. ಪುನೀತ್ ಸಿನಿಮಾಗಾಗಿ ‘ಗೆಳೆಯ..’ ಹಾಡನ್ನು ಕನ್ನಡದಲ್ಲೇ ಹಾಡಿದ್ದರು ಜೂನಿಯರ್ ಎನ್ಟಿಆರ್ ಎಂಬುದು ವಿಶೇಷ. ಇದು ಪುನೀತ್ಗಾಗಿ ಅವರು ಕೊಟ್ಟ ವಿಶೇಷ ಗಿಫ್ಟ್.
ಸಾಮಾನ್ಯವಾಗಿ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗುತ್ತದೆ ಎಂದಾಗ ಹೀರೋಗಳು ಬೇರೆ ಭಾಷೆಯಲ್ಲಿ ಡಬ್ ಮಾಡೋಕೆ ಹೋಗೋದಿಲ್ಲ. ಆದರೆ, ಜೂನಿಯರ್ ಎನ್ಟಿಆರ್ ಆ ರೀತಿ ಅಲ್ಲ. ‘ಆರ್ಆರ್ಆರ್’ ಹಾಗೂ ‘ದೇವರ’ ರಿಲೀಸ್ ಆದಾಗ ಕನ್ನಡದಲ್ಲಿ ಅವರೇ ಡಬ್ ಮಾಡಿ ಕನ್ನಡ ಪ್ರೀತಿಯನ್ನು ತೋರಿಸಿದ್ದರು. ಇದು ಕನ್ನಡ ಪ್ರೀತಿಗೆ ಸಾಕ್ಷಿ.
ಇದನ್ನೂ ಓದಿ: ಜೂನಿಯರ್ ಎನ್ಟಿಆರ್ಗೆ ‘9999’ ಸಂಖ್ಯೆ ಮೇಲೆ ಇದೆ ವಿಶೇಷ ಪ್ರೀತಿ; ಕಾರಣ ಏನು?
ಸಿನಿಮಾ ವಿಚಾರಕ್ಕೆ ಬರೋದಾದರೆ, ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ರಿಲೀಸ್ ಆಗಿ ಮಿಶ್ರಪ್ರತಿಕ್ರಿಯೆ ಪಡೆಯಿತು. ಅವರು ಈಗ ‘ವಾರ್ 2’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ಕೂಡ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಪ್ರಶಾಂತ್ ನೀಲ್ ಸಿನಿಮಾದಲ್ಲೂ ಅವರು ಬಣ್ಣ ಹಚ್ಚುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



