ಜೂನಿಯರ್ ಎನ್ಟಿಆರ್, ಪ್ರಶಾಂತ್ ನೀಲ್ ಫ್ಯಾನ್ಸ್ ಪಾಲಿಗೆ ಏ.22 ವಿಶೇಷ ದಿನ; ಸಿಕ್ತು ಅಪ್ಡೇಟ್
ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ಟಿಆರ್ ಅವರು ಸಿನಿಮಾ ಅನೌನ್ಸ್ ಮಾಡಿ ಬಹಳ ಸಮಯ ಕಳೆದಿದೆ. ಇದರ ಶೂಟಿಂಗ್ ಕೂಡ ನಡೆಯುತ್ತಿದೆ. ಆದರೆ ಜೂನಿಯರ್ ಎನ್ಟಿಆರ್ ಅವರು ಇನ್ನೂ ಶೂಟಿಂಗ್ ಸೆಟ್ಗೆ ಬಂದಿಲ್ಲ. ಹಾಗಾದರೆ ಅವರು ಚಿತ್ರೀಕರಣಕ್ಕೆ ಬರುವುದು ಯಾವಾಗ? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ (Jr NTR) ಅವರು ‘ದೇವರ’ ಸಿನಿಮಾದ ಬಳಿಕ ಹೊಸ ಚಿತ್ರದ ಕೆಲಸಗಳತ್ತ ಗಮನ ನೀಡಿದ್ದಾರೆ. ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಜೊತೆ ಅವರು ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಸಿನಿಮಾ ಮೇಲೆ ಸಖತ್ ನಿರೀಕ್ಷೆ ಇದೆ. ಈಗಾಗಲೇ ಈ ಚಿತ್ರದ ಶೂಟಿಂಗ್ ಆರಂಭ ಆಗಿದೆ. ಹಾಗಿದ್ದರೂ ಕೂಡ ಜೂನಿಯರ್ ಎನ್ಟಿಆರ್ ಅವರು ಇನ್ನೂ ಶೂಟಿಂಗ್ನಲ್ಲಿ ಭಾಗಿಯಾಗಿಲ್ಲ. ಅವರು ಯಾವಾಗ ಚಿತ್ರೀಕರಣದ ಸೆಟ್ಗೆ ಬರುತ್ತಾರೆ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಈಗ ಉತ್ತರ ಸಿಕ್ಕಿದೆ. ಶೂಟಿಂಗ್ ಬಗ್ಗೆ ನಿರ್ಮಾಣ ಸಂಸ್ಥೆಯಿಂದ ಅಪ್ಡೇಟ್ ನೀಡಲಾಗಿದೆ.
ಈ ವರ್ಷ ಫೆಬ್ರವರಿ ಮಧ್ಯ ಭಾಗದಲ್ಲಿ ಈ ಸಿನಿಮಾಗೆ ಪ್ರಶಾಂತ್ ನೀಲ್ ಅವರು ಶೂಟಿಂಗ್ ಆರಂಭಿಸಿದ್ದರು. ಬರೋಬ್ಬರಿ 2 ಸಾವಿರ ಮಂದಿ ಜೂನಿಯರ್ ಆರ್ಟಿಸ್ಟ್ಗಳ ಜೊತೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿತ್ತು. ಅದು ಮೊದಲ ಹಂತದ ಚಿತ್ರೀಕರಣ. ಅದರಲ್ಲಿ ಜೂನಿಯರ್ ಎನ್ಟಿಆರ್ ಭಾಗಿ ಆಗಲಿಲ್ಲ. ಈಗ ಅವರು ಚಿತ್ರೀಕರಣದಲ್ಲಿ ಭಾಗಿಯಾಗುವ ಸಮಯ ಬಂದಿದೆ. ಏಪ್ರಿಲ್ 22ರಂದು ಜೂನಿಯರ್ ಎನ್ಟಿಆರ್ ಅವರು ಶೂಟಿಂಗ್ ಸೆಟ್ಗೆ ಬರಲಿದ್ದಾರೆ.
ಸದ್ಯಕ್ಕೆ ಈ ಸಿನಿಮಾದ ಹೆಸರು ಏನೆಂಬುದು ಬಹಿರಂಗ ಆಗಿಲ್ಲ. ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ಟಿಆರ್ ಕಾಂಬಿನೇಷನ್ನ ಸಿನಿಮಾ ಆದ್ದರಿಂದ #NTRNeel ಎಂದು ತಾತ್ಕಾಲಿಕವಾಗಿ ಕರೆಯಲಾಗುತ್ತಿದೆ. ಈ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಅವರ ಲುಕ್ ಹೇಗಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಉತ್ಸುಕರಾಗಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.
#NTRNeel is entering its most explosive phase 💥💥
Man of Masses @Tarak9999 steps into the destructive soil from April 22nd ❤️🔥❤️🔥#PrashanthNeel @MythriOfficial @NTRArtsOfficial @NTRNeelFilm pic.twitter.com/z7hsCkhOY0
— Mythri Movie Makers (@MythriOfficial) April 9, 2025
‘ಪುಷ್ಪ 2’ ಸಿನಿಮಾ ನಿರ್ಮಾಣ ಮಾಡಿದ್ದ ‘ಮೈತ್ರೀ ಮೂವೀ ಮೇಕರ್ಸ್’ ಸಂಸ್ಥೆಯೇ ಈಗ ಜೂನಿಯರ್ ಎನ್ಟಿಆರ್-ಪ್ರಶಾಂತ್ ನೀಲ್ ಕಾಂಬಿನೇಷನ್ನ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ‘ಕೆಜಿಎಫ್ 1’, ‘ಕೆಜಿಎಫ್ 2’, ‘ಸಲಾರ್’ ಸಿನಿಮಾಗಳ ಮೂಲಕ ಹೆಸರು ಮಾಡಿರುವ ಪ್ರಶಾಂತ್ ನೀಲ್ ಅವರಿಗೆ ಟಾಲಿವುಡ್ನಲ್ಲಿ ಬೇಡಿಕೆ ಹೆಚ್ಚಾಗಿದೆ.
ಇದನ್ನೂ ಓದಿ: ಜೂ ಎನ್ಟಿಆರ್ಗಾಗಿ ತೆಲುಗು ಕಲಿತ ಜಪಾನಿ ಮಹಿಳೆ, ವಿಡಿಯೋ ಹಂಚಿಕೊಂಡ ನಟ
ಈಗ ಟಾಲಿವುಡ್ ಹೀರೋಗಳೆಲ್ಲ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ರಾಮ್ ಚರಣ್ ಅವರು ‘ಪೆದ್ದಿ’ ಸಿನಿಮಾದಿಂದ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಅತ್ತ, ಅಲ್ಲು ಅರ್ಜುನ್ ಅವರು ಅಟ್ಲಿ ಜೊತೆ ಕೈಜೋಡಿಸಿ ವಿದೇಶದಲ್ಲಿ ಕೆಲಸ ಆರಂಭಿಸಿದ್ದಾರೆ. ಹಾಗಾಗಿ ಪೈಪೋಟಿ ಜೋರಾಗಿದೆ. ಆ ಪೈಪೋಟಿಗೆ ತಕ್ಕಂತೆ ಜೂನಿಯರ್ ಎನ್ಟಿಆರ್-ಪ್ರಶಾಂತ್ ನೀಲ್ ಕೂಡ ಸಿನಿಮಾ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.