- Kannada News Photo gallery Mamitha Biju Doing Movies With Suriya Thalapathy Vijay and Pradeep Ranganathan
ಬದಲಾಯಿತು ಮಮಿತಾ ಬಿಜು ಅದೃಷ್ಟ; ಸ್ಟಾರ್ ಹೀರೋಗಳ ಚಿತ್ರಕ್ಕೆ ನಾಯಕಿ
Mamitha Biju: ಮಲಯಾಳಂ ನಟಿ ಮಮಿತಾ ಬಿಜು ಅವರು ಸ್ಟಾರ್ ಹೀರೋಗಳ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಅವರು ಹಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಅದರಲ್ಲೂ ಸ್ಟಾರ್ ಹೀರೋಗಳ ಚಿತ್ರಕ್ಕೆ ಅವರೇ ನಾಯಕಿ ಆಗುತ್ತಿದ್ದಾರೆ ಅನ್ನೋದು ವಿಶೇಷ. ಆ ಬಗ್ಗೆ ಈ ಸ್ಟೋರಿಯಲ್ಲಿ ಇದೆ ವಿವರ.
Updated on: May 20, 2025 | 10:34 AM

ಮಮಿತಾ ಬಿಜು ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದವರು. ಈ ಮೊದಲು ರಿಲೀಸ್ ಆದ ‘ಪ್ರೇಮಲು’ ಚಿತ್ರ ಅವರ ವೃತ್ತಿ ಜೀವನವನ್ನೇ ಬದಲಿಸಿತು. ಸ್ಟಾರ್ ಹೀರೋಗಳ ಸಿನಿಮಾಗಳಿಗೆ ಅವರು ನಾಯಕಿ ಆಗುತ್ತಾ ಇದ್ದಾರೆ.

ತಮಿಳು ನಟ ಸೂರ್ಯ ಅವರ 46ನೇ ಚಿತ್ರ ಇತ್ತೀಚೆಗೆ ಸೆಟ್ಟೇರಿದೆ. ಇದಕ್ಕೆ ಮಮಿತಾ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಮೇ 19ರಂದು ಈ ಚಿತ್ರದ ಮುಹೂರ್ತ ನೆರವೇರಿದ್ದು, ಸೂರ್ಯ ಜೊತೆ ಮಮಿತಾ ಅವರು ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ.

ಮಮಿತಾ ಅವರು ಖ್ಯಾತ ನಟ ದಳಪತಿ ವಿಜಯ್ ಅವರ ‘ಜನನಾಯಗನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಅವರ ಸಹೋದರಿಯ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರ ಮುಂದಿನ ಜನವರಿಯಲ್ಲಿ ರಿಲೀಸ್ ಆಗಲಿದೆ.

‘ಡ್ರ್ಯಾಗನ್’ ಸಿನಿಮಾ ಮೂಲಕ ಯಶಸ್ಸು ಕಂಡ ಪ್ರದೀಪ್ ರಂಗನಾಥನ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೂ ಮಮಿತಾ ನಾಯಕಿ ಆಗಿ ಆಯ್ಕೆ ಆಗಿದ್ದಾರೆ.

ಒಂದು ಸಿನಿಮಾ ನಟ ಹಾಗೂ ನಟಿಯರ ಬದುಕನ್ನು ಯಾವ ರೀತಿಯಲ್ಲಿ ಬದಲಾಯಿಸಿ ಬಿಡುತ್ತದೆ ಎಂಬುದಕ್ಕೆ ಮಮಿತಾ ಒಂದೊಳ್ಳೆಯ ಉದಾಹರಣೆ. ಅವರು ಕನ್ನಡದಲ್ಲೂ ಸಿನಿಮಾ ಮಾಡಲಿ ಎಂದು ಕರ್ನಾಟಕದ ಫ್ಯಾನ್ಸ್ ಬಯಸುತ್ತಾ ಇದ್ದಾರೆ.




