ರಶ್ಮಿಕಾ ಬಗ್ಗೆ ಕಂಡ ಕನಸಿನ ಬಗ್ಗೆ ಓಪನ್ ಆಗಿ ಹೇಳಿದ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ತೆರೆಮೇಲಿನ ಜೋಡಿ ಜನಪ್ರಿಯವಾಗಿದೆ. 'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಚಿತ್ರಗಳ ನಂತರ, ವಿಜಯ್ ಮತ್ತೆ ರಶ್ಮಿಕಾ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ತೆರೆಮೇಲೆ ಒಳ್ಳೆಯ ಜೋಡಿ ಎನಿಸಿಕೊಂಡಿದ್ದಾರೆ. ಈ ಜೋಡಿ ‘ಗೀತ ಗೋವಿಂದಂ’ ಹಾಗೂ ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇವುಗಳ ಪೈಕಿ ಒಂದು ಸಿನಿಮಾ ಹಿಟ್ ಆದರೆ, ಮತ್ತೊಂದು ಚಿತ್ರ ಫ್ಲಾಪ್. ಈಗ ವಿಜಯ್ ದೇವರಕೊಂಡ ಅವರು ಮತ್ತೆ ರಶ್ಮಿಕಾ ಜೊತೆ ಸಿನಿಮಾ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ವಿವರಿಸಿದ್ದಾರೆ. ಈ ಕನಸು ಯಾವಾಗ ಈಡೇರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ವಿಜಯ್ ಹಾಗೂ ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಈವರೆಗೆ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ. ಆದರೆ, ಇವರು ಸುತ್ತಾಟ ನಡೆಸೋದು ಅಭಿಮಾನಿಗಳಿಗೆ ಸ್ಪಷ್ಟವಾಗಿದೆ. ಅನೇಕ ಕಡೆಗಳಲ್ಲಿ ಒಟ್ಟಾಗಿ ಸುತ್ತಾಡುವ ಇವರು ಬೇರೆ ಬೇರೆ ಸಂದರ್ಭದಲ್ಲಿ ಫೋಟೋಗಳನ್ನು ಹಂಚಿಕೊಂಡು ಸಿಕ್ಕಿ ಬೀಳುತ್ತಿದ್ದಾರೆ. ಆದರೆ, ಇವರಿಗೆ ಆ ಬಗ್ಗೆ ಹೆಚ್ಚು ಚಿಂತೆ ಇಲ್ಲ. ಈ ಮಧ್ಯೆ ವಿಜಯ್ ಅವರು ರಶ್ಮಿಕಾ ಜೊತೆ ಸಿನಿಮಾ ಮಾಡಬೇಕು ಎನ್ನುವ ಆಸೆ ಹೊರಹಾಕಿದ್ದಾರೆ.
ಫಿಲ್ಮ್ಫೇರ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರೋ ವಿಜಯ್, ‘ನಾನು ರಶ್ಮಿಕಾ ಜೊತೆ ಸಾಕಷ್ಟು ಸಿನಿಮಾ ಮಾಡಿಲ್ಲ. ನಾನು ಅವರ ಜೊತೆ ಹೆಚ್ಚೆಚ್ಚು ಸಿನಿಮಾ ಮಾಡಬೇಕು. ಅವರು ಒಳ್ಳೆಯ ನಟಿ. ಅವರು ಸುಂದರ ನಟಿ. ಹೀಗಾಗಿ, ಕೆಮಿಸ್ಟ್ರಿ ಅನ್ನೋದು ಸಮಸ್ಯೆ ಆಗಬಾರದು’ ಎಂದಿದ್ದಾರೆ ಅವರು.
ವಿಜಯ್ ದೇವರಕೊಂಡ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ರಶ್ಮಿಕಾ ಜೊತೆ ಮತ್ತೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಹರಡುತ್ತಲೇ ಇದೆ. ಆದರೆ, ಇಬ್ಬರೂ ಯಾವುದೇ ಚಿತ್ರವನ್ನು ಫೈನಲ್ ಮಾಡಿಲ್ಲ. ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣ ಮಾಡುತ್ತಿರುವ ಚಿತ್ರವೊಂದರಲ್ಲಿ ವಿಜಯ್ ಹಾಗೂ ರಶ್ಮಿಕಾ ಒಂದಾಗುತ್ತಾರೆ ಎನ್ನುವ ಸುದ್ದಿ ಹರಡಿದೆ. ಇದು ಫೈನಲ್ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಮೊದಲು ಈ ಸಂಸ್ಥೆ ನಿರ್ಮಾಣದ ‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದರು.
ಇದನ್ನೂ ಓದಿ: ಸಿನಿಮಾ ರಿಲೀಸ್ಗೂ ಮೊದಲೇ ಸೋಲಿನ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ ಅವರು ‘ಕಿಂಗ್ಡಮ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಜುಲೈ 4ರಂದು ತೆರೆಗೆ ಬರಲಿದೆ. ರಶ್ಮಿಕಾ ಮಂದಣ್ಣ ಅವರು ‘ಕುಬೇರ’ ಸಿನಿಮಾ ರಿಲೀಸ್ಗಾಗಿ ಕಾಯುತ್ತಾ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.